ವಿಜಯ ದರ್ಪಣ ನ್ಯೂಸ್……
ನವೆಂಬರ್ 22ರಂದು ಸೋಮವಾರಪೇಟೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿ

ಕುಶಾಲನಗರ,ಕೊಡಗು ಜಿಲ್ಲೆ : ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಇದೇ ನವೆಂಬರ್ 22ರಂದು ಬೆಳಿಗ್ಗೆ 11 ಗಂಟೆಗೆ ಸೋಮವಾರಪೇಟೆಗೆ ಭೇಟಿ ನೀಡಲಿದ್ದಾರೆ.
ಸೋಮವಾರಪೇಟೆಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಅವರು, ಸೋಮವಾರಪೇಟೆ ತಾಲ್ಲೂಕಿನ ‘ಸಿ’ ಮತ್ತು ‘ಡಿ’ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ರೈತರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.
ಬಳಿಕ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಂಚೂಣಿ ಘಟಕದ ನಾಯಕರು, ಪ್ರಮುಖ ಮುಖಂಡರುಗಳು, ಹಿತೈಷಿ ಅಭಿಮಾನಿಗಳು, ಕಾರ್ಯಕರ್ತರುಗಳು ಸಭೆಗೆ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಿಕೊಡಲು ಕೊಡಗು ಜಿಲ್ಲಾ ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗ ಉಪಾಧ್ಯಕ್ಷ ಶಿಯಾಬುದ್ಧೀನ್ ವಿ.ಪಿ.ಎಸ್ ನೆಲ್ಯಹುದಿಕೇರಿ ವಿನಂತಿ ಮಾಡಿಕೊಂಡಿದ್ದಾರೆ
&&&&&&&&&&&&&&&&&&&&&&&&&
ಈಶ ಸ್ತುತಿ
ಉತ್ಸಾಹ ಲಯ ಚೌಪದಿ

ಕರವ ಹಿಡಿದು ನಡೆಸು ತಂದೆ
ಪೊರೆದು ಕೃಪೆಯ ತೋರಿಸು
ಚರಣ ಕಮಲದಲ್ಲಿ ನನ್ನ
ನಿರಿಸಿ ಪಾರುಗಾಣಿಸು
ಹಿಂದನೇಕ ಜನುಮ ಕಳೆದು
ನೊಂದೆ ಬಂದು ಪಾಲಿಸು
ಕಂದನೆಂದು ಕರುಣೆ ತಳೆದು
ಮುಂದೆ ದಾರಿಗಾಣಿಸು
ಆಶೆಯಿಂದ ನಿನ್ನ ಸೇವೆ
ದೋಷವಿರದೆ ಮಾಡಿಸು
ಈಶ ನಿನ್ನ ವರವನಿತ್ತು
ದಾಸನಾಗಿ ಸೇವಿಸು
ಪಾದ ಪೂಜೆಯಿತ್ತು ಸತತ
ಮೋದವೆದೆಗೆ ಹರಡಿಸು
ನಾದವಿರದ ಬಾಳಿನಲ್ಲಿ
ವೇದಘೋಷ ಮೊಳಗಿಸು
ಸಾಧು ಸಂತರೊಡನೆಯಿರಿಸಿ
ಬಾಧೆಗಳನು ನೀಗಿಸು
ಪಾದಕೆರಗಿ ಬೇಡಿಕೊಳುವೆ
ಕಾದು ಮುಂದೆಸಾಗಿಸು
ಹರುಷದಿಂದ ನಿನ್ನನುತಿಸಿ
ಕರೆವ ಮನವನೊದಗಿಸು
ಎರೆದು ಭಕ್ತಿ ಹೃದಯದಲ್ಲಿ
ಮರೆಯದಂತೆ ಬೋಧಿಸು
ರಾಧಿಕಾ ವಿಶ್ವನಾಥ್, ಮಡಿಕೇರಿ












