--Ads--

ಮಂಡಿಬೆಲೆ ಗ್ರಾಮದಲ್ಲಿ ಧನಲಕ್ಷ್ಮಿ ಜ್ಞಾನವಿಕಾಸ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಐದನೇ ವರ್ಷದ ವಾರ್ಷಿಕೋತ್ಸವ

On: October 5, 2026 4:21 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಮಂಡಿಬೆಲೆ ಗ್ರಾಮದಲ್ಲಿ ಧನಲಕ್ಷ್ಮಿ ಜ್ಞಾನವಿಕಾಸ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಐದನೇ ವರ್ಷದ ವಾರ್ಷಿಕೋತ್ಸವ

ಮಂಡಿಬೆಲೆ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ: ಓಂ ಶ್ರೀ ಮಂಜುನಾಥಯ ನಮಃ ಚನ್ನರಾಯಪಟ್ಟಣ ವಲಯದ ಯಲಿಯೂರು ಕಾರ್ಯಕ್ಷೇತ್ರದ ಮಂಡಿಬೆಲೆ ಗ್ರಾಮದಲ್ಲಿ ಧನಲಕ್ಷ್ಮಿ ಜ್ಞಾನವಿಕಾಸ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಂಘದ ಸಭಾಂಗಣದಲ್ಲಿ ಐದನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು .

ಈ ಕಾರ್ಯಕ್ರಮವನ್ನು ಧನಲಕ್ಷ್ಮೀ ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷೆ ಗೌರಮ್ಮ ವೆಂಕಟೇಶ್ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೇವನಹಳ್ಳಿ ತಾಲ್ಲೂಕಿನ ಯೋಜನಾಧಿಕಾರಿ  ದಿನೇಶ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು.

ದಿನೇಶ್ ಕುಮಾರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು   ಮಹಿಳಾ ಜ್ಞಾನವಿಕಾಸ ಕೇಂದ್ರದಿಂದ ಮಹಿಳೆಯರಿಗೆ ಪ್ರಯೋಜನಕಾರಿ ಆಗುವ ಉಪಯುಕ್ತ ಮಾಹಿತಿಗಳು ಮಾತೃಶ್ರೀ ಅಮ್ಮನವರ ಕನಸು ಜ್ಞಾನವಿಕಾಸ ಕೇಂದ್ರ ಅನುಷ್ಠಾನ ಮಾಡುವಲ್ಲಿ ಮಹಿಳೆಯರು ತಮ್ಮನ್ನು ಯಾವ ರೀತಿಯಾಗಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಾಮಾಜಿಕವಾಗಿ ಆರ್ಥಿಕವಾಗಿ ಸಬಲೀಕರಣವಾಗಬೇಕು ಎಂಬ ಉದ್ದೇಶವನ್ನು ತಿಳಿಸಿ ಕೊಡುವುದರ ಮೂಲಕ ಕೇಂದ್ರ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು.

ಸಾಂಸ್ಕೃತಿಕ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಿದರು

ಈ ಕಾರ್ಯಕ್ರಮದಲ್ಲಿ ತಾಲೂಕಿನ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಉಷಾರಾಣಿ ವಲಯದ ಮೇಲ್ವಿಚಾರಕ ಉಮೇಶ್ ರವರು ಸೇವಾ ಪ್ರತಿನಿಧಿ ದೀಪ, ಕೇಂದ್ರದ ಎಲ್ಲಾ ಸದಸ್ಯರು ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು

WhatsApp

Join Now

Telegram

Join Now

Instagram

Join Now