--Ads--

ಸಿ.ಎಂ.ಕಪ್-2026 ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿ ಪ್ರಥಮ ಸ್ಥಾನ ದಯಾನಂದ ಸಾಗರ್ ಕಾಲೇಜ್ ಗೆ ಟ್ರೋಫಿ 

On: October 5, 2026 4:57 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಸಿ.ಎಂ.ಕಪ್-2026 ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿ ಪ್ರಥಮ ಸ್ಥಾನ ದಯಾನಂದ ಸಾಗರ್ ಕಾಲೇಜ್ ಗೆ ಟ್ರೋಫಿ 

ಯುವಕರಿಗೆ ನಾಯಕತ್ವ ಗುಣ ಬೆಳಸಿಕೊಳ್ಳಲು, ರಾಜಕೀಯ ಕ್ಷೇತ್ರಕ್ಕೆ ಯುವಕರು ತೊಡಗಿಸಿಕೊಳ್ಳಲು ಸಿ.ಎಂ.ಡಿ.ಕೆ.ಶಿವಕುಮಾರ್ ಮಾರ್ಗದರ್ಶನದಲ್ಲಿ ಸಂಘಟನೆ-ಹೆಚ್.ಎಸ್.ಮಂಜುನಾಥಗೌಡ

ಬೆಂಗಳೂರು: ರಾಣಿ ಅಬ್ಬಕ್ಕ ಆಟದ ಮೈದಾನದಲ್ಲಿ ರಾಜ್ಯ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಸಿ.ಎಂ.ಕಪ್-2026 ಅಂತಿಮ ದಿನದ ಫೈನಲ್ ಪಂದ್ಯ ದಿನ.

ರಾಜ್ಯ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಹೆಚ್.ಎಸ್.ಮಂಜುನಾಥಗೌಡರವರು, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಎಸ್.ಕೇಶವಮೂರ್ತಿ ರವರು ಗೆದ್ದ ತಂಡಗಳಿಗೆ ಪ್ರಶಸ್ತಿ ವಿತರಣೆ ಮಾಡಿದರು. ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ರವಿಕುಮಾರ್, ಶಿವಕುಮಾರ್, ನಟರಾಜ್ , ಶ್ರೀಧರ್ ದೀಪಕ್ ಗೌಡರವರು ಉಪಸ್ಥಿತರಿದ್ದರು.

ಹೆಚ್.ಎಸ್.ಮಂಜುನಾಥಗೌಡರವರು ಮಾತನಾಡಿ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಯುವಕರಲ್ಲಿ ನಾಯಕತ್ವ ಗುಣ ಬೆಳಸಬೇಕು ಮತ್ತು ಸಂಘಟನೆ ಮಾಡಬೇಕು ಎಂಬ ಆದೇಶದಿಂದ ಸಿ.ಎಂ.ಕ್ರಿಕೆಟ್ ಅಂತರ ಕಾಲೇಜು ಪಂದ್ಯಾವಳಿ ಅಯೋಜಿಸಲಾಯಿತು.

ಡಿ.ಕೆ.ಶಿವಕುಮಾರ್ ಅವರು ಕಾಲೇಜು ದಿನಗಳಿಂದಲೂ ವಿದ್ಯಾರ್ಥಿ ನಾಯಕರಾಗಿ ಬೆಳೆದು ಇಂದು ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆ ಮಾಡುತ್ತಿದ್ದಾರೆ. ಜನಸೇವೆ ಮಾಡಲು ರಾಜಕೀಯ ಉತ್ತಮ ಕ್ಷೇತ್ರವಾಗಿದೆ ಯುವಕ-ಯುವತಿಯರು ಮುಂದೆ ಬರಬೇಕು.

ಡೋನೇಷನ್ ಹಾವಳಿ, ರ್ಯಾಗಿಂಗ್ ಮತ್ತು ಮಾದಕವಸ್ತು ಮುಕ್ತ ಮಾಡಲು ಯುವಕರ ಸಂಘಟಿತರಾಗಿ ಹೋರಾಟ ಮಾಡಬೇಕು. ಕಾಂಗ್ರೆಸ್ ಪಕ್ಷದ ಪ್ರತಿ ವಾರ್ಡ್ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರತ್ ಜೋಡೋ ಸಂಘ ಪ್ರಾರಂಭ ಮಾಡುತ್ತಿದೆ 10ಸಹಾಯಧನ ನೀಡುತ್ತಿದೆ. ಯುವಕರು ಶಕ್ತಿ, ದೇಶದ ಶಕ್ತಿ ಎಂದು ಹೇಳಿದರು.

ಗೆದ್ದ ತಂಡಗಳು

1) ದಯಾನಂದಸಾಗರ್ ಕಾಲೇಜು ಪ್ರಥಮ ಸ್ಥಾನ 1ಲಕ್ಷ ನಗದು ಪಾರಿತೋಷಕ.

2) ಸಪ್ತಗಿರಿ ಕಾಲೇಜು 75ಸಾವಿರ ನಗದು ಪಾರಿತೋಷಕ.ದ್ವಿತೀಯ ಸ್ಥಾನ.

3) ಡಾನ್ ಬೋಸ್ಕ್ ಮೂರನೇಯ ಸ್ಥಾನ.50ಸಾವಿರ ನಗದು ಪುರಸ್ಕಾರ
4) ಬೆಂಗಳೂರು ಇನ್ಸಟ್ಯೂಟ್ ಆಫ್ ಟೆಕ್ನಾಲಜಿ ನಾಲ್ಕನೇಯ ಸ್ಥಾನ.

ದಯಾನಂದ ಸಾಗರ್ ಕಾಲೇಜ್ ಮತ್ತು ಸಪ್ತಗಿರಿ ಕಾಲೇಜ್ ಅಂತಿಮ ಫೈನಲ್ ಪಂದ್ಯ ಜರುಗಿತು. ಮೊದಲ ಬ್ಯಾಟಿಂಗ್ ಮಾಡಿದ ಸಪ್ತಗಿರಿ ಕಾಲೇಜ್ ಆರಂಭದಲ್ಲಿ 14ರನ್ ಗೆ 5 ಪ್ರಮುಖ ಆಟಗಾರರು ವಿಕೆಟ್ ಪತನದಿಂದ ರನ್ ಮಾಡಲು ಹೆಣಗಾಡಿತು. 24ರನ್ 7ವಿಕಟ್ ಪತನವಾಯಿತು ನಂತರ ಬ್ಯಾಟಿಂಗ್ ಮಾಡಿದ ದಯಾನಂದಸಾಗರ್ ಕಾಲೇಜ್ ತಂಡ ಎರಡು ವಿಕೆಟ್ ನಷ್ಟಕ್ಕೆ 29ರನ್ ಬಾರಿಸಿತು

ಮೂರನೇಯ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಡಾನ್ ಬಾಸ್ಕೋ ಮತ್ತು ಬೆಂಗಳೂರು ಇನ್ಸಟ್ಯೂಟ್ ಆಫ್ ಟೆಕ್ನಾಲಜಿ ನಡುವೆ ಮೂರನೇಯ ಸ್ಥಾನಕ್ಕೆ ನಡುವಿನ ಪಂದ್ಯದಲ್ಲಿ ಡಾನ್ ಬಾಸ್ಕೋ ತಂಡ ಮೊದಲ ಬ್ಯಾಟಿಂಗ್ ನಲ್ಲಿ ಎರಡು ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿತು. ಬೆಂಗಳೂರು ಇನ್ಸಟ್ಯೂಟ್ ಆಫ್ ಟೆಕ್ನಾಲಜಿ 8 ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿ 21ರನ್ ಗಳಿಂದ ಸೋಲು ಅನುಭವಿಸಿತು ನಾಲ್ಕನೇಯ ಸ್ಥಾನಕ್ಕೆ ತೃಪಿಪಟ್ಟರು.

ಬೆಸ್ಟ್ ಬ್ಯಾಟ್ ಮ್ಯಾನ್- ಸಂಜು ಸೈಕಿ ಡಾನ್ ಬಾಸ್ಕೋ

ಬೆಸ್ಟ್ ಬೌಲರ್- ಪುನೀತ್ ಸಪ್ತಗಿರಿ ಕಾಲೇಜ್

ಬೆಸ್ಟ್ ಅಲ್ ರೌಂಡರ್- ಕಾರ್ತಿಕ್ ದಯಾನಂದಸಾಗರ್

WhatsApp

Join Now

Telegram

Join Now

Instagram

Join Now