--Ads--

ಕರ್ನಾಟಕ, ಕೇರಳದಲ್ಲೂ ವೋಟ್ ಚೋರಿ ಆಗಿರಬೇಕು ಅಲ್ವಾ, ನಿಮ್ಮ ಸಿಎಂಗಳಿಗೆ ರಾಜೀನಾಮೆ ಕೊಡಿಸಿ: ಛಲವಾದಿ ನಾರಾಯಣಸ್ವಾಮಿ

On: October 6, 2026 2:27 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಕರ್ನಾಟಕ, ಕೇರಳದಲ್ಲೂ ವೋಟ್ ಚೋರಿ ಆಗಿರಬೇಕು ಅಲ್ವಾ, ನಿಮ್ಮ ಸಿಎಂಗಳಿಗೆ ರಾಜೀನಾಮೆ ಕೊಡಿಸಿ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಕರ್ನಾಟಕ, ಕೇರಳಗಳಲ್ಲೂ ವೋಟ್ ಚೋರಿ ಆಗಿರಬೇಕು ಅಲ್ವಾ, ಹಾಗಾದ್ರೆ ಎರಡೂ ಕಡೆಯೂ ನಿಮ್ಮ ಸರ್ಕಾರದವರು ಇದ್ದಾರೆ. ರಾಜೀನಾಮೆ ಕೊಡಿಸಿ ನೋಡೋಣ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಆರ್ ನಂತರದ ಚುನಾವಣೆಗಳ ರದ್ದು, ಬ್ಯಾಲೆಟ್ ಪೇಪ‌ರ್ ಚುನಾವ ಣೆಗೆ ಒತ್ತಾಯಿಸಿ ಮಲ್ಲಿಕಾರ್ಜುನ ಖರ್ಗೆಯವರು ಚುನಾವಣಾ ಆಯೋಗಕ್ಕೆ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬೇಡಿಕೆಯಲ್ಲಿಯೂ ಅರ್ಥ ಇರಬೇಕು ಎಂದರು.

ಕರ್ನಾಟಕ, ಕೇರಳಗಳಲ್ಲೂ ವೋಟ್ ಚೋರಿ ಆಗಿರಬೇಕು ಅಲ್ವಾ?. ಹಾಗಾದ್ರೆ ಎರಡೂ ಕಡೆಯೂ ನಿಮ್ಮ ಸರ್ಕಾರದವರು ಇದ್ದಾರೆ, ರಾಜೀನಾಮೆ ಕೊಡಿಸಿ ನೋಡೋಣ. ಯುಪಿಎ ಇದ್ದಾಗ ಹಲವು ಬಾರಿ ಚುನಾವಣಾ ಆಯೋಗ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಎಸ್‌ಐಆರ್ ಸಂವಿಧಾನದ ಪ್ರಕಾರ ನಡೀತಿದೆ. ಕಾಂಗ್ರೆಸ್ ಇದ್ದಾಗಲೂ ಎಸ್‌ಐಆ‌ರ್ ನಡೆದಿದೆ, ನಾವ್ಯಾರೂ ವಿರೋಧಿಸಿಲ್ಲ. ಇದನ್ನು ವಿರೋಧಿಸುವ ಅಗತ್ಯ ಎರಡು ಕಡೆ ವೋಟರ್ ಕಾರ್ಡ್ ಇರೋದು ಇಲ್ಲ ಎಂದಿದ್ದಾರೆ. ನಾಳೆ ಚುನಾವಣಾ ಆಯೋಗಕ್ಕೆ ದೂರು ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಟೂಲ್ ಕಿಟ್ ಮೂಲಕ ಎಸ್‌ಐಆರ್ ವಿರೋಧಿಸ್ತಿದೆ. ಎಸ್‌ಐಆರ್‌ಗೂ ಬಿಜೆಪಿಗೂ ಕಾಂಗ್ರೆಸ್‌ಗೂ ಸಂಬಂಧ ಇಲ್ಲ. ಫಾರ್ಮ್‌೭ ಅರ್ಜಿ ಮೂಲಕ ಸತ್ತವರು, ನಕಲಿ ಮತದಾರರ ತೆಗೆಯಬೇಕು, ಆದರೆ ಕಾಂಗ್ರೆಸ್‌ನವರಿಗೆ ಇದು ಇಷ್ಟವಾಗಿಲ್ಲ, ಬಾಂಗ್ಲಾ ನಿವಾಸಿಗಳು, ಮೃತರು, ವೋಟರ್ ಲಿಸ್ಟ್‌ನಲ್ಲಿ ಇರಲಿ ಎಂದು ಕಾಂಗ್ರೆಸ್ ಬಯಸ್ತಿದೆ. ಫಾರ್ಮ್‌೭ ಯಾರೂ ಪ್ರಿಂಟ್ ಮಾಡ್ತಿಲ್ಲ, ಅದರ ಪ್ರತಿಗಳು ಆಯೋಗದ ವೆಬ್‌ಸೈಟ್‌ನಲ್ಲೇ ಸಿಗ್ನವೆ, ನಾಳೆ ನಾವು ಚುನಾವಣಾ ಆಯೋಗಕ್ಕೆ ದೂರು ಕೊಡ್ತವೆ ಎಂದು ಹೇಳಿದ್ದಾರೆ.

ಚೋರರಿಗೆ ಜನ ವೋಟ್ ಹಾಕಲ್ಲ: ಆಯೋಗದ ಮುಂದೆ ಪ್ರತಿಭಟನೆ ಮಾಡಿದ್ರು, ಫಾರ್ಮ್‌೭ ಬಗ್ಗೆ ಸುಳ್ಳು ಹೇಳ್ತಿದ್ದಾರೆ. ಇದರ ವಿರುದ್ಧ ನಾವು ನಾಳೆ ದೂರು ಕೊಡ್ತವೆ. ವೋಟ್ ಚೋರಿ ಆಗಲ್ಲ, ಆದರೆ ಚೋರರಿಗೆ ಜನ ವೋಟ್ ಹಾಕ್ತಿಲ್ಲ, ಕಾಂಗ್ರೆಸ್ ಇದನ್ನು ಸರಿಮಾಡಿಕೊಳ್ಳಲಿ, ಕಾಂಗ್ರೆಸ್‌ನವರು

ಯಾವ ಸಾಕ್ಷಿಯೂ ಕೊಡದೇ ಗಾಳಿಯಲ್ಲಿ ಗುಂಡು ಹೊಡೀತಿದ್ದಾರೆ. ಸಿಎಂ ೪೦-೫೦ ಲಕ್ಷ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ ಅಂದಿದ್ದಾರೆ. ಆದ್ರೆ ಫಾರ್ಮ್೭ಮೂಲಕ ಇದುವರೆಗೆ ಯಾರ ಹೆಸರನ್ನೂ ಡಿಲೀಟ್ ಮಾಡಿಲ್ಲ. ಕಾಂಗ್ರೆಸ್‌ನವರ ಆರೋಪ ಸುಳ್ಳು ಎಂದು ವಾಗ್ದಾಳಿ ನಡೆಸಿದ್ದಾರೆ.

ಒಂದು ಬೂತ್ ನಲ್ಲಿ ಕೇವಲ ಅಂದಾಜು ೮೦ ಮತಗಳ ವ್ಯತ್ಯಾಸಗಳಿವೆ. ಇವು ಯಾರ ಮತಗಳು ಅಂತ ಹುಡುಕಿ. ಬಬಲೇಶ್ವರದಲ್ಲಿ ಐದಾರು ಸಾವಿರ ಮತದಾರರ ಹೆಸರು ತೆಗೆದಿದ್ದಾರೆ ಅಂತ ಆರೋಪಿಸಿದ್ದಾರೆ. ಅಂದ್ರೆ ಪ್ರತೀ ಬೂತ್ ನಲ್ಲಿ ಐದಾರು ಅನರ್ಹ ಮತಗಳಷ್ಟೇ ಇರೋದು. ಅದು ಯಾರು ಅಂತ ದಾಖಲೆ ಸಮೇತ ಹೇಳಲಿ, ಕಾಂಗ್ರೆಸ್ ನವರು ಬಿಜೆಪಿಯವರನ್ನು ಟಾರ್ಗೆಟ್ ಮಾಡಿದ್ದಾರೆ. ನಮ್ಮವರಿಗೆ ಏನಾದ್ರೂ ಮಾಡಿದರೆ ನಾವು ಬೀದಿಗಿಳಿದು ಹೋರಾಡ್ತವೆ. ಪೊಲೀಸರು ಸರ್ಕಾರದ ಮಾತು ಕೇಳೋದು ಬೇಡ, ಅವರು ಹೇಳ್ತಾರೆ ಅಂತ ನೀವು ಕೇಳ್ತಾ ಹೋದರ ನಾಳೆ ನೀವು ಕೋರ್ಟ್ ನಲ್ಲಿ ನಿಂತ್ಕೋ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

WhatsApp

Join Now

Telegram

Join Now

Instagram

Join Now