--Ads--

ಪೊಲೀಸ್ ರಿಂದ ಮಾಮುಲಿ ವಸೂಲಿ ಹಗಲು-ರಾತ್ರಿ ನಡೆಯುವ ಜೂಜು ?

On: October 30, 2026 7:42 AM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್……..

ಪೊಲೀಸ್ ರಿಂದ ಮಾಮುಲಿ ವಸೂಲಿ ಹಗಲು-ರಾತ್ರಿ ನಡೆಯುವ ಜೂಜು ?

 

ತರೀಕೆರೆ: ಇಸ್ಪೀಟು, ಮಟ್ಕಾ,ತೂರುವ ಬಿಲ್ಲೆ ಇನ್ನಿತರ ಜೂಜು ಹಗಲು,ರಾತ್ರಿ ನಡೆಯುತ್ತಿದ್ದು ಇವರುಗಳಿಂದ “ಮಾಮುಲಿ” ವಸೂಲಿ ಮಾಡುವಲ್ಲಿ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ರವರು ಮುಂದೆ ನಿಂತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಇದಕ್ಕೆ ರಾಜಾಶ್ರಯ ಬೇರೆ ಸ್ವತಃ ಶಾಸಕರ ಕುಟುಂಬದವರು ಪಾರ್ಟ್ನರ್ಸ್, ಜೊತೆಗೆ ಯಾರು, ಯಾರಿಗೆ ಎಷ್ಟು ತಲಪಿಸ ಬೇಕೆಂಬ ನಿರ್ಧಾರ ಮಾಡುತ್ತಾರೆ ಎಂದು ಪೊಲೀಸ್ ಇಲಾಖೆಯಲ್ಲಿ ಹೇಳುತ್ತಿದ್ದಾರೆ.

ಕಳೆದ ಆರೇಳು ತಿಂಗಳಿಂದ ಹಗಲು,ರಾತ್ರಿ ಎನ್ನದೇ ಶಿವಮೊಗ್ಗ ಮೂಲದವರು ಮಲೆನಾಡು ಕ್ಲಬ್ ನಲ್ಲಿ ಜೂಜು ಕೇಂದ್ರ ನಡೆಸುತ್ತಿದ್ದು ಜಿಲ್ಲೆಯ ಸುತ್ತಮುತ್ತಲಿನ ಜಿಲ್ಲೆಯ ಜೂಜುಕೋರರು ದಿನವು ತರೀಕೆರೆಗೆ ಬಂದು 4,8,16 ಸಾವಿರದ ಆಟ ಆಡುತ್ತಾರೆ. ಇದಕ್ಕೆ ಕಮೀಷನ್ ಪಡೆಯಲಾಗುತ್ತದೆ.

ಇದೇ ಲಕ್ಷಂತರ ಹಣ ಸಂಗ್ರಹ ವಾಗುತ್ತದೆ.ಹೀಗಾಗಿ ಕಳವು,ಗಲಾಟೆ ಹೆಚ್ಚಾಗಿವೆ ಎಂದು ಸಾರ್ವಜನಿಕರು ದೂರಿದರೂ ತಲೆ ಕಡಿಸಿ ಕೊಳ್ಳದೆ ರಸ್ತೆ ಮೇಲೆ ನಿಂತು ವಾಹನ ಮಾಲೀಕರ ಮೇಲೆ ಮುಗೀ ಬಿಳುತ್ತಿದ್ದಾರೆ. ಒಟ್ಟಾರೆ ಪೊಲೀಸ್ ಇಲಾಖೆ ಎಂಬುದು ಇದೆಯೇ?

ಕಳೆದ ಮೂರು ವರ್ಷಗಳಿಂದ ಆಕ್ರಮ ಕ್ವಾರಿ,ಕಾನೂನು ಬಾಹಿರವಾಗಿ ಎಂ.ಆರ್.ಪಿ ಲೈಸೆನ್ಸ್, ಭದ್ರ ನೀರಾವರಿ ಯೋಜನೆಯಲ್ಲಿ ಸಿಗುವ ಹಣಕ್ಕಿಂತ ಜೂಜುಕೋರರ ಹಣಕ್ಕಾಗಿ ಹಗಲು, ರಾತ್ರಿ ನಡೆಯುವ ಜೂಜು ಅಡ್ಡೆಗಳ ಹಣ ದೋಚಿವವರನ್ನು ಸತ್ಯ ಹರಿಶ್ಚಂದ್ರರು ಎಂದು ಕರೆಯಲು ಸಾಧ್ಯವೇ?

ತರೀಕೆರೆಯಲ್ಲಿ ಪೊಲೀಸ್ ಎಂಬುದು ಶಾಸಕರ ಮನೆ ಬಾಗಿಲಲ್ಲಿ ನಿಂತಿರುವಾಗ ಕಾನೂನು ಸುವ್ಯವಸ್ಥೆ ಕನಸಿನಲ್ಲಿ ಕಾಣಬೇಕಾಗಿದೆ.ಪೊಲೀಸ್ ಇಲಾಖೆಗೆ ಶಾಸಕರ ಪತ್ನಿ ಮತ್ತು ಮಗಳ ಹುಕುಂ ಬೇಕೆ,ಬೇಕು. ಜೊತೆಗೆ ಸರ್ಕಾರಿ ಕಾರ್ಯಕ್ರಮಗಳಾಗಲಿ,ಪಕ್ಷದ ಕಾರ್ಯಕ್ರಮವಾಗಲಿ ಕಡ್ಡಾಯವಾಗಿ ಶಾಸಕರ ಜೊತೆಗೆ ಹೆಂಡತಿ ,ಮಗಳನ್ನು ಕರೆಯಲೇ ಬೇಕು.

ಒಂದೇ ಕುಟುಂಬದವರಿಗೆ ಮೂರು ಶಾಲು, ಹೂವಿನ ಹಾರ ತರ ಬೇಕಾಲ್ಲಾ ಎಂಬ ಪೇಚಾಟ ಬೇರೆ.ಲೆಕ್ಕಕ್ಕಿಲ್ಲಾದವರ ಮಧ್ಯೆ ಕಡೂರಿನ ಶಾಸಕ ಆನಂದ್ ಒಪನ್ ಚಾಲೆಂಜ್ ಮಾಡಿ ಉಗಿದು ಹುಪ್ಪಿನ ಕಾಯಿ ಹಾಕಿದರು ಶ್ರೀನಿವಾಸ್ ತುಟಿ ಬಿಚ್ಚುತ್ತಿಲ್ಲಾ ಎಂಬ ಭಂಡತನ ಎಂದು ಕ್ಷೇತ್ರದಲ್ಲಿ ಕೇಳಿ ಬರುತ್ತಿರುವ ಮಾತುಗಳು.

WhatsApp

Join Now

Telegram

Join Now

Instagram

Join Now