--Ads--

ಉಪನ್ಯಾಸಕ ಡಾ.ಎಸ್.ರಾಮಲಿಂಗೇಶ್ವರ್ ಗೆ (ಸಿಸಿರಾ) ಕನ್ನಡ ಕಣ್ಮಣಿ ಪ್ರಶಸ್ತಿ ಆಯ್ಕೆ

On: October 30, 2026 7:58 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…,…

ಉಪನ್ಯಾಸಕ, ಸಾಹಿತಿಗಳಾದ ಡಾ.ಎಸ್.ರಾಮಲಿಂಗೇಶ್ವರ್ (ಸಿಸಿರಾ) ಸೇರಿ ಮೂವರಿಗೆ ಕನ್ನಡ ಕಣ್ಮಣಿ ಪ್ರಶಸ್ತಿ ಆಯ್ಕೆ

ಬೆಂಗಳೂರು : ಬೆಂಗಳೂರಿನ ಕರ್ನಾಟಕ ರಕ್ಷಣಾ ಸಮಿತಿಯು ಕೊಡಮಾಡುವ 2026 ರ ಸಾಲಿನ ಕನ್ನಡ ಕಣ್ಮಣಿ ಪ್ರಶಸ್ತಿ ಗೆ. ಶೈಕ್ಷಣಿಕ ಸೇವೆಗೆ ಕನ್ನಡ ಉಪನ್ಯಾಸಕರು, ಸಾಂಸ್ಕೃತಿಕ ಪರಿಚಾರಕರು , ಸಾಹಿತಿಗಳು ಅದ ಡಾ.ಎಸ್.ರಾಮಲಿಂಗೇಶ್ವರ (ಸಿಸಿರಾ) , ಅವರು ಸೇರಿದಂತೆ ಸಿನಿಮಾ ಕ್ಷೇತ್ರದ ಸಾಧನೆಗಾಗಿ ಗಣೇಶ್ ರಾವ್ ಕೇಸರ್ ಕರ್, ಕನ್ನಡಪರ ಹೋರಾ ಟಗಾರರು, ಸಾಮಾಜಿಕ ಸೇವೆಗೆ ಅನಿಕೇತನ ಶ್ರೀ ಮಾಯಣ್ಣ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಕನ್ನಡ ಕೃಷ್ಣ, ಕಾರ್ಯದರ್ಶಿ ಸಂಜಯ್‌ ಕೆ.ನಾಯ್ಡು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿಸಿರಾ ಅವರು ಕನ್ನಡ ಸಾರಸ್ವತ ಲೋಕದಲ್ಲಿ ಬರಹಗಾರರಾಗಿ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಗಾಂಧೀಜಿ, ಬಸವಣ್ಣ, ವಿವೇಕಾನಂದರ ಚಿಂತನೆಗಳನ್ನು ಯುವಕರಿಗೆ ಹಾಗೂ ಸಾರ್ವಜನಿ ಕರಿಗೆ ಪಸರಿಸುವ ಕಾರ್ಯದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದಾರೆ. ಇದೇ ಅಕ್ಟೋಬರ್ 31 ನೇ ತಾರೀಖು ಶನಿವಾರ ಸಂಜೆ 5 ಗಂಟೆಗೆ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿರುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ, ಕರ್ನಾಟಕ ರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಚಿ.ನಾ.ರಾಮು ಅವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

WhatsApp

Join Now

Telegram

Join Now

Instagram

Join Now