ವಿಜಯ ದರ್ಪಣ ನ್ಯೂಸ್….
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಗಳ ಲೋಕಾರ್ಪಣೆ

ಬೆಂಗಳೂರು: ವರ್ತೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಹದೇವಪುರ, ಬೆಂಗಳೂರು ನಗರ ಜಿಲ್ಲೆ, ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಸಮ್ಮೇಳನದ ಅಧ್ಯಕ್ಷತೆಯನ್ನು ಕವಿಗಳು, ಲೇಖಕರು ಆದಂತಹ ಡಾ. ಸಿ ಚಂದ್ರಪ್ಪ ಸರ್ ವಹಿಸಿದ್ದರು. ಇದೇ ಸಂದರ್ಭದಲ್ಲಿ 5 ಪುಸ್ತಕಗಳ ಲೋಕಾರ್ಪಣೆ ಮಾಡಲಾಯಿತು.
ಪದ್ಮಶ್ರೀ ಡಾ.ಸಿ.ಆರ್.ಚಂದ್ರಶೇಖ, ಮನೋವೈದ್ಯರು, ಇವರ ನಮ್ಮ ಮೆದುಳು ನಿಮ್ಮ ಪ್ರಶ್ನೆ, ಶ್ರೀ ಉಪೇಂದ್ರ ಕುಮಾರ್ ರವರ ಕವನ ಸಂಕಲನ, ಲೇಖಕಿ, ಕವಯತ್ರಿ ಮಾಲತಿ ಎಸ್ ಆರಾಧ್ಯ ರವರ ಬೀದೀಲಿ ಬಿದ್ದ ಕೂಸು, ಬೆಳೀತು ಎನ್ನುವ ಮಕ್ಕಳ ಕಾದಂಬರಿ ಹಾಗೂ ಆದಪ್ಪ ಪಾಸೋಡಿ, ವಿಮರ್ಶಕರು ಇವರ ಇತಿಹಾಸ ಪುಸ್ತಕ ವನ್ನು ಡಾ. ಸಂತೋಷ್ ಹಾನಗಲ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ, ಇವರ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಲಾಯಿತು.
ಮಹದೇವಪುರ ಕಸಾಪ ಅಧ್ಯಕ್ಷರು ಟಿ.ವೀರಭದ್ರಪ್ಪ ಸರ್ ರವರು, ಸಮ್ಮೇಳನದ ಅಧ್ಯಕ್ಷರು, ಬಾನಂದೂರು ಕೆಂಪಯ್ಯ, ಮಾಜಿ ಶಾಸಕರು ನಾಗೇಶ್ ರವರು ಉಪಸ್ಥಿತರಿದ್ದರು.










