ವಿಜಯ ದರ್ಪಣ ನ್ಯೂಸ್……
ಕರುನಾಡು ಸಾಧಕರಿಗೆ ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪ್ರದಾನ

ಬೆಂಗಳೂರು, ಜಿಬಿಎ ಕೇಂದ್ರ ಕಛೇರಿ:ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಪಾಲಿಕೆಗಳ ನೌಕರರ ಕನ್ನಡ ಸಂಘದ ವತಿಯಿಂದ 71ನೇ ಕನ್ನಡ ರಾಜ್ಯೋತ್ಸವ ಮತ್ತು ಕರುನಾಡು ಸಾಧಕ/ಸಾಧಕೀಯರಿಗೆ ಕರ್ನಾಟಕ ರತ್ನ ಡಾ||ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ.
ಮುಖ್ಯ ಆಯುಕ್ತ ಎಂ.ಮಹೇಶ್ವರರಾವ್ ರವರು, ನಟ, ನಿರ್ದೇಶಕ ಟಿ.ಎಸ್.ನಾಗಭರಣ, ನಟ, ನಿರ್ದೇಶಕ ಎಸ್.ನಾರಾಯಣ್, ಗೌರವಾಧ್ಯಕ್ಷರು, ಮಾಜಿ ಮಹಾಪೌರರು ಜೆ.ಹುಚ್ಚಪ್ಪ, ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್, ಕನ್ನಡ ಪರ ಹೋರಾಟಗಾರ ಎಂ.ತಿಮ್ಮಯ್ಯ, ಹಾಸ್ಯನಟ ಮೂ.ಗು.ಸುರೇಶ್, ಜಿಬಿಎ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು, ಕನ್ನಡ ಸಂಘದ ಅಧ್ಯಕ್ಷರಾದ ಹೆಚ್.ನಂಜಪ್ಪ, ಗೌರವ ಕಾರ್ಯದರ್ಶಿ ಪಿ.ದಯಾನಂದ್ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಮುಖ್ಯ ಆಯುಕ್ತರಾದ ಎಂ.ಮಹೇಶ್ವರರಾವ್ ಅವರು ಮಾತನಾಡಿ ಪಾಲಿಕೆ ಕನ್ನಡ ಸಂಘದಲ್ಲಿ 71ನೇ ಕನ್ನಡ ರಾಜ್ಯೋತ್ಸವ ಅಚರಿಸಲಾಗುತ್ತಿದೆ. ಆಡಳಿತ ಕಛೇರಿ ಮತ್ತು ನಾಡಿನಲ್ಲಿ ವಾಸಿಸುವ ಎಲ್ಲರು ಕನ್ನಡ ಭಾಷೆ ಬಳಸಬೇಕು. ಪಾಲಿಕೆಯಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಲಾಗಿದೆ.
ಕಲೆ, ಸಾಹಿತ್ಯ ಮತ್ತು ಪಾಲಿಕೆ ಅಧಿಕಾರಿ, ನೌಕರರಿಗೆ ಪುನೀತ್ ರಾಜ್ ಕುಮಾರ್ ಪ್ರಶಸ್ತಿ ನೀಡಲಾಗುತ್ತಿದೆ.
ಪಾಲಿಕೆಯ ಅಧಿಕಾರಿ ಮತ್ತು ನೌಕರರು ಉತ್ತಮ ಕೆಲಸ ಮಾಡುತ್ತಿದ್ದಾರೆ ಅದ್ದರಿಂದ ಇಂದು ಬೆಂಗಳೂರು ನಗರ ವಿಶ್ವಮಾನ್ಯವಾಗಿದೆ ಎಂದು ಹೇಳಿದರು.
ಟಿ.ಎಸ್.ನಾಗಭರಣ ಅವರು ಮಾತನಾಡಿ ಕನ್ನಡ ನಿತ್ಯೋತ್ಸವ ಮತ್ತು ಕರ್ನಾಟಕ ರಾಜ್ಯೋತ್ಸವ ಅಚರಿಸಬೇಕು. ನಮ್ಮ ನಾಡಿಗೆ ಪರಂಪರೆ, ಅದ್ಬುತ ಇತಿಹಾಸವಿದೆ. ಭವಿಷ್ಯದಲ್ಲಿ ಕನ್ನಡಿಗರ ಸವಾಲುಗಳು ಏನು ಎಂಬುದು ಚಿಂತಿಸಬೇಕು.
ಶಿಕ್ಷಣದಲ್ಲಿ ಕನ್ನಡ ಭಾಷೆ ಉಳಿಸಿಕೊಳ್ಳಬೇಕು. ಪಾಲಿಕೆಯಲ್ಲಿ ಶಾಲೆಗಳು ಉತ್ತಮವಾಗಿದೆ. ಅಂಗ್ಲ ಶಾಲೆ ಹೆಚ್ಚಾಗಿದೆ. ಮಕ್ಕಳ ಮನಸ್ಸಿನಲ್ಲಿ ಕನ್ನಡ ಉಳಿಸಿ, ಬೆಳಸಬೇಕು. ಪಾಲಿಕೆ ಮನಸ್ಸು ಮಾಡಿದರೆ ನಗರದಲ್ಲಿ ಕನ್ನಡ ಭಾಷೆ ಉಳಿಸಿ, ಬೆಳಸಬಹುದು. ಅವರಲ್ಲಿ ಅ ಶಕ್ತಿ ಇದೆ.ಅನ್ಯ ಭಾಷಿಕರಿಗೆ ಪ್ರೀತಿಯಿಂದ ಕನ್ನಡ ಕಲಿಸಿ. ಶಿಕ್ಷಣ, ಉದ್ಯೋಗ, ವ್ಯವಹಾರಿಕೆಯಲ್ಲಿ ಕನ್ನಡ ಭಾಷೆ ಬಳಸಿ. ಎಂದು ಹೇಳಿದರು.
ಎಸ್.ನಾರಾಯಣ್ ಅವರು ಮಾತನಾಡಿ ಬೆಂಗಳೂರುನಗರ ಸುಂದರ, ಸ್ವಚ್ಚವಾಗಿ ಇರಲು ಪಾಲಿಕೆ ಶ್ರಮವಿದೆ. ಪೌರ ಕಾರ್ಮಿಕರು ಸ್ವಚ್ಚತಾ ವಾರಿಯರ್ಸ್ ಗಳು ಏಕೀಕರಣಕ್ಕೆ ಶ್ರಮಿಸಿದ ಹೋರಾಟಗಾರರಿಗೆ ಸ್ಮರಣೆ ಮಾಡುವ ದಿನವಾಗಿದೆ.
ಕನ್ನಡ ಬೆಳಯುತ್ತಿದೆ ಚಿಂತನೆ ಮಾಡಬೇಡಿ, ಕನ್ನಡ ಬಳಸಿ ಸಾಕು. ಮನೆಯಲ್ಲಿಯೆ ಕನ್ನಡ ಭಾಷೆ ಬಳಸುವ ಅಭ್ಯಾಸ ಮಾಡಿಸಿಕೊಳ್ಳಬೇಕು.
ಕನ್ನಡ ಭಾಷೆ ಶ್ರೀಮಂತ ಭಾಷೆ, ಮಾತನಾಡಲು ಚನ್ನ. ಪುನೀತ್ ರಾಜ್ ಕುಮಾರ್ ಅವರು ಜೀವಂತವಾಗಿ ಇರಬೇಕಾಗಿತ್ತು. ಇನ್ನು ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಬೇಕಿತ್ತು ಎಂಬುದು ಕನ್ನಡಿಗರ ಆಶಯವಾಗಿತ್ತು. ಡಾ.ರಾಜ್ ಕುಮಾರ್ ಅವರ ಕುಟುಂಬದ ಎಲ್ಲರು ಸರಳತೆಯ ಮೂರ್ತಿಯಾಗಿದ್ದರು.
ಪುನೀತ್ ರಾಜ್ ಕುಮಾರ್ ರವರಲ್ಲಿ ದೈವಿಕ ಅಂಶವಿತ್ತು ಅದ್ದರಿಂದ ಇಷ್ಟು ಜನರ ಪ್ರೀತಿಗಳಿಸಲು ಸಾಧ್ಯವಾಯಿತು.
ಜೆ.ಹುಚ್ಚಪ್ಪರವರು ಮಾತನಾಡಿ ನಮ್ಮ ಕನ್ನಡ ಸಂಘ ಸ್ಥಾಪನೆಯಾಗಿ 30ವರ್ಷಗಳು ಸಂದಿದೆ. ಸ್ವಂತ ವೆಚ್ಚದಲ್ಲಿ ನಮ್ಮ ನಡೆಯುತ್ತಿದೆ. ಅಂತರಾಷ್ಟ್ರ, ರಾಷ್ಟ್ರ ಮಟ್ಟದಲ್ಲಿ ಕನ್ನಡ ರಾಜ್ಯೋತ್ಸವ ನಮ್ಮ ಸಂಘ ಅಚರಿಸುತ್ತಿದೆ. ಕನ್ನಡ ಭಾಷೆ ಗೌರವ ಕೊಡುವುದು ತಾಯಿಗೆ ಗೌರವ ಕೊಟ್ಟಂತೆ. ಅನ್ಯ ಭಾಷಿಕರು ಕನ್ನಡ ಭಾಷೆ ಕಲಿಯಬೇಕು. ಹಳೆಯ ಕನ್ನಡ ಚಲನಚಿತ್ರಗಳು ಜೀವನಕ್ಕೆ ಹತ್ತಿರವಾಗಿತ್ತು ಇಂದಿನ ಚಲನಚಿತ್ರಗಳು ಸಮಾಜಕ್ಕೆ ಮಾರಕವಾಗಿದೆ. ನಾಡಿನ ಸಾಧಕರ ಜೊತೆಯಲ್ಲಿ ಪಾಲಿಕೆ ಉತ್ತಮ ಅಧಿಕಾರಿ, ನೌಕರರಿಗೆ ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಹೇಳಿದರು.
ಎ.ಅಮೃತ್ ರಾಜ್ ರವರು ಮಾತನಾಡಿ ಪಾಲಿಕೆ ಕನ್ನಡ ಸಂಘವು ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ರವರ ಸ್ಮರಣೆಯಲ್ಲಿ ನಾಡು, ನುಡಿ ಮತ್ತು ಕಲೆ, ಸಾಹಿತ್ಯ ಸೇವೆ ಮಾಡಿದವರನ್ನ ಗುರುತಿಸಿ ಗೌರವಿಸಿ ಸನ್ಮಾನಿಸಲಾಗುತ್ತಿದೆ. ಅಂತರಾಷ್ಟ್ರ, ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಕರ್ನಾಟಕ ರಾಜ್ಯೋತ್ಸವ ಅಚರಿಸಿ ಕನ್ನಡ ಭಾಷೆಯನ್ನು ಉಳಿಸಿ, ಬೆಳಸಲಾಗುತ್ತಿದೆ ಎಂದು ಹೇಳಿದರು.

ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿಯನ್ನು ನಟ ಬಾಲರಾಜ್, ಜಾನಪದ ಗಾಯಕ ಗುರುರಾಜ್ ಹೊಸಕೋಟೆ, ನಟ ಶರತ್ ಲೋಹಿತಾಶ್ವ, ನಟಿ ಭವಾನಿ ಪ್ರಕಾಶ್, ಕನ್ನಡ ಪರ ಹೋರಾಟಗಾರರು, ಸಾಹಿತ್ಯ, ಸಂಗೀತ ಸೇವೆ ಮತ್ತು ಪತ್ರಕರ್ತರಿಗೆ ಹಾಗೂ ಪಾಲಿಕೆಯ ಅಧಿಕಾರಿ, ನೌಕರರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.










