ವಿಜಯ ದರ್ಪಣ ನ್ಯೂಸ್……
ಯುವಜನತೆ ಅಧ್ಯಾತ್ಮ ತತ್ವಗಳನ್ನು ಅಳವಡಿಸಿಕೊಂಡು ಉತ್ತಮ ಜೀವನವನ್ನು ನಡೆಸಬೇಕು

ವಿಜಯಪುರ: ಇಂದಿನ ಒತ್ತಡ ಜೀವನದಲ್ಲಿ ಯುವಜನತೆ ಅಧ್ಯಾತ್ಮ ತತ್ವಗಳನ್ನು ಅಳವಡಿಸಿಕೊಂಡು ಉತ್ತಮ ಜೀವನವನ್ನು ನಡೆಸುವಂತಾಗಲಿ ಎಂದು ಧಾರ್ಮಿಕ ಚಿಂತಕರಾದ ಚಿಕ್ಕಸಣ್ಣೆ ಬಿ.ಮಂಜುನಾಥ್ ಅವರು ಅಭಿಪ್ರಾಯಪಟ್ಟರು.
ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀರಂಗ ಗೀತಾ ಸತ್ಸಂಗ ಸೇವಾ ಬಳಗದ ವತಿಯಿಂದ ೯ನೇ ಕಾರ್ಯಕ್ರಮ ಹಾಗೂ ಗುರುಪಾದುಕಾ ಪೂಜೆಯ ೩೫ನೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಮಾನವ ಜನ್ಮ ಶ್ರೇಷ್ಠವಾದುದು ಎಂದು ಎಲ್ಲಾ ಸಂತ ಮಹನೀಯರು ಸಾರಿದ್ದಾರೆ. ಅದರಂತೆ ಅವರ ತತ್ವಬೋಧನೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನದಲ್ಲಿ ನೆಮ್ಮದಿ, ಸಂತೋಷವನ್ನು ಕಾಣಬಹುದಾಗಿದೆ ಎಂದರು.
ಶ್ರೀಕ್ಷೇತ್ರ ಕೈವಾರ ಮಠದ ಪ್ರವಚನಕಾರರಾದ ಅನಂದಸ್ವಾಮಿಗಳು ಮಾತನಾಡಿ ಮಾನವ ಜನ್ಮದ ಶ್ರೇಷ್ಠತೆಯನ್ನು ಕಂಡುಕೊAಡು ಕೈವಾರದ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರು ಹಲವಾರು ತತ್ವಬೋಧನೆಗಳನ್ನು ರಚಿಸಿದ್ದಾರೆ.
ಇವೆಲ್ಲವೂ ಸಾರ್ವಕಾಲಿಕವಾದ ಸತ್ಯದಿಂದ
ಕೂಡಿದೆ. ಮೋಕ್ಷ ಮಾರ್ಗಕ್ಕೆ ಉಪದೇಶವನ್ನು ಮಾಡುವ ಅಧಿಕಾರ ಕೇವಲ ಉತ್ತಮ ಅನುಭಾವಿ ಗುರುವಿಗೆ ಮಾತ್ರ ಇರುತ್ತದೆ. ಆತನು ಶಿಷ್ಯನಿಗೆ ಮೋಕ್ಷ ಸಾಧನೆಯ ಮಾರ್ಗವನ್ನು ಉಪದೇಶಿಸಿ ಮಹಾತ್ಮನನ್ನಾಗಿ ಮಾಡುತ್ತಾನೆ ಎಂದು ತಾತಯ್ಯನವರು ತಿಳಿಸಿದ್ದಾರೆ ಎಂದು ಹೇಳುತ್ತಾ ಹಲವಾರು ತತ್ವಗಳನ್ನು ಸುಶ್ರಾವ್ಯವಾಗಿ ಹಾಡಿ ಭಕ್ತರಲ್ಲಿ ಭಕ್ತಿಭಾವವನ್ನು ಮೂಡಿಸಿದರು. ಶ್ರೀರಾಮ ಭವತಾರಕ ಮಂತ್ರದ ಮಹತ್ವವನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮವನ್ನು ಪುರಸಭೆಯ ಮಾಜಿ ಅಧ್ಯಕ್ಷೆ ಮಂಜುಳ ನಾರಾಯಣಸ್ವಾಮಿ ರವರು ಉದ್ಘಾಟಿಸಿದರು. ಗಾಯಕ ವಿದ್ವಾಂಸರಾದ ಮಹಾತ್ಮಾಂಜನೇಯ, ನರಸಿಂಹಪ್ಪ, ಮುನಿರಾಜು ನಾಗರತ್ನಮ್ಮ ತಂಡದವರು ಸಂಕೀರ್ತನೆಯನ್ನು ನಡೆಸಿಕೊಟ್ಟರು.
ಸಾನ್ನಿಧ್ಯವನ್ನು ಶ್ರೀ ರಘುಸ್ವಾಮಿಗಳು ಮತ್ತು ಶ್ರೀರಮೇಶ್ ಸ್ವಾಮಿಗಳು ವಹಿಸಿದ್ದರು. ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್ ಹಡಪದ್ ,ಕೃಷಿ ಇಲಾಖೆಯ ಶ್ರೀಮತಿ ನಂದಿನಿ ಗಿರೀಶ್ ರವರು ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಶವಪ್ಪನವರು ವಹಿಸಿದ್ದರು. ಕಾರ್ಯಕ್ರಮದ ಸೇವಾಕರ್ತರಾದ ಪಟ್ಟಣದ ಕುಂಟಗಡ್ಡೆಯ ಶ್ರೀನಾರಾಯಣಮ್ಮ ದಿ||ಶ್ರೀ ವೆಂಕಟಶಾಮಪ್ಪನವರ ಕುಟುಂಬದವರು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಅನಿತ, ರಾಮದಾಸ್, ನಾಗರತ್ನಮ್ಮ, ಚಿಕ್ಕಶೇಷಪ್ಪ, ಹೋಳಿಗೆ ವೆಂಕಟೇಶಪ್ಪ, ಮುನಿರಾಜು ಮುಂತಾದವರು ಉಪಸ್ಥಿತರಿದ್ದರು.









