ವಿಜಯ ದರ್ಪಣ ನ್ಯೂಸ್……..
ಮಕ್ಕಳಿಗೆ ಆಸ್ತಿ ಗಿಂತ ವಿದ್ಯೆ ನೀಡಿ. ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್ ಸಿ.ಬಸವರಾಜ್

ತಾಂಡವಪುರ ನವೆಂಬರ್ 16 ನಂಜನಗೂಡು ತಾಲೂಕು. ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಸುತ್ತೂರು ಗ್ರಾಮದ. ಶ್ರೀ ವಾಲ್ಮೀಕಿ ಕ್ಷೇಮ ಅಭಿವೃದ್ಧಿ ಬಳಗದ ವತಿಯಿಂದ. ಕನ್ನಡ ರಾಜ್ಯೋತ್ಸವ. ಹಾಗೂ ವಾಲ್ಮೀಕಿ ಜಯಂತಿ ಸಮಾರಂಭ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು
ಈ ಕಾರ್ಯಕ್ರಮದಲ್ಲಿ. ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್ ಸಿ ಬಸವರಾಜ್ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ.ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ಕುಟುಂಬದಲ್ಲೂ.
ಮಗು ಒಂದು ಕಲಿತರೆ ಶಾಲೆ ಒಂದು ತೆರೆದಂತೆ. ನೀವು ಮಕ್ಕಳಿಗೆ ಆಸ್ತಿ ಮಾಡಬೇಡಿ ಮಕ್ಕಳಿಗೆ ವಿದ್ಯೆಯೆಂಬ ಆಸ್ತಿಯನ್ನು ನೀಡಿ.. ಆದ್ದರಿಂದ ಪ್ರತಿಯೊಬ್ಬ ಕುಟುಂಬವು ವಿದ್ಯಾವಂತರಾಗಲು ಸಾಧ್ಯವಾಗುತ್ತದೆ. ವಿದ್ಯೆ ಒಂದು ಇದ್ದರೆ. ಸಮಾಜದಲ್ಲಿ ಎಲ್ಲರೂ ಒಂದೇ ಭಾವನೆ ಬಂದು. ಎಲ್ಲರೂ ಒಂದೇ ಕುಟುಂಬದಂತೆ ಬಾಳಿ ಬದುಕಲು ಸಾಧ್ಯವಾಗುತ್ತದೆ. ಎಂದು ಹೇಳಿದ ಅವರು ವಾಲ್ಮೀಕಿ ಕ್ಷೇಮ ಬಿದ್ದಿ ಸಹಕಾರ ಸಂಘ ಉತ್ತಮ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು. ಈ ಸಂಘವು ಗ್ರಾಮದ ಬೇರೆಯವರ ಸಹಕಾರ ಸಂಘಗಳ ಜೊತೆ ಕೈಜೋಡಿಸಿ. ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕೆಂದು ತಿಳಿಸಿದರು.

ಇತ್ತೀಚೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ. ಹಿರಿಯ ಕಲಾವಿದ ಗದ್ದೆ ಮೊಳೆ ಹೊನ್ನ ನಾಯಕರವರಿಗೆ. ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು..
ಈ ಸಂದರ್ಭದಲ್ಲಿ ಸನ್ಮಾನಿತ ಹಿರಿಯ ಕಲಾವಿದರಾದ ಒನ್ನ ನಾಯಕರು ಮಾತನಾಡಿ. ನಾನು ಚಿಕ್ಕ ವಯಸ್ಸಿನಲ್ಲೇ ಕಲಾ ಪ್ರೇಮಿಯಾಗಿ ಹೊರಬಂದು ಇದುವರೆಗೂ ನಾನು 250 ಕ್ಕೂ ಹೆಚ್ಚು ಕಲಾ ಪ್ರದರ್ಶನ ಮಾಡಿ. ನಂತರ ನೂರಾರು ಪ್ರಶಸ್ತಿಗಳನ್ನು ಪಡೆದು. ಉತ್ತಮ ಕಲಾವಿದ ಎಂದು ಪ್ರಶಸ್ತಿಗಳು ಬಂದಿವೆ. ನನಗೆ ಕಲ ಪ್ರದರ್ಶನವೇ ಒಂದು ಆಸ್ತಿ. ಕಲೆಯಿಂದ ಸಿಗುತ್ತಿದ್ದು ನನಗೆ ಪ್ರೀತಿ ವಿಶ್ವಾಸವೇ ನನಗೆ ಸಂತೋಷದ ಕಾಲ ಇತ್ತು. ಕಲೆ ನನ್ನ ಜೀವನ ಬದುಕು ಎಂದು ನಂಬಿ ನನಗೆ ನೀಡಿದ ಪ್ರಶಸ್ತಿಗಳೇ ಜೀವನದ ಆಧಾರವಾಗಿತ್ತು.
ರಾಜ್ಯಮಟ್ಟದಲ್ಲಿ ನನಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರಕಿರುವುದು. ನನ್ನ ಕೃಷಿ ಕುಟುಂಬದ ತಂದೆ ತಾಯಿ ಆಶೀರ್ವಾದ. ಮುಖ್ಯ ಕಾರಣವಾಗಿದೆ. ಹಣ ಆಸ್ತಿಗಿಂತ. ನಾವು ನಡೆಯುವ ಮಾರ್ಗ ಉತ್ತಮ ಎಂದು ನಂಬಿ ನನಗೆ ಪ್ರಶಸ್ತಿ ಬಂದಿರುವುದು ಸಂತೋಷವಾಗಿದೆ ಎಂದು ಎಮ್ಮೆ ಪಟ್ಟರು..
ಸುತ್ತೂರು ಗ್ರಾಮದಲ್ಲಿ. ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದರು.. ಈ ಸಂದರ್ಭದಲ್ಲಿ.. ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ವಾಲ್ಮೀಕಿ ಕ್ಷೇಮಾಭಿವೃದ್ಧಿ. ಬಳಗದ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು. ಗ್ರಾಮದ ಎಲ್ಲ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು..










