--Ads--

ನಂದಿನಿ ಲೇಔಟ್ ಫುಡ್ಸ್ ಟ್ರೀಟ್ ಅಸೋಸಿಯೇಷನ್ ವತಿಯಿಂದ ಡಯಾಲಿಸಿಸ್ ಸೆಂಟರ್ ಗೆ 2 ಲಕ್ಷ ರೂಪಾಯಿ ಸಹಾಯಧನ ಚೆಕ್ ವಿತರಣೆ : ಶಾಸಕ ಕೆ. ಗೋಪಾಲಯ್ಯ ಶ್ಲಾಘನೆ

On: November 19, 2026 4:13 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ನಂದಿನಿ ಲೇಔಟ್ ಫುಡ್ಸ್ ಟ್ರೀಟ್ ಅಸೋಸಿಯೇಷನ್ ವತಿಯಿಂದ ಡಯಾಲಿಸಿಸ್ ಸೆಂಟರ್ ಗೆ 2 ಲಕ್ಷ ರೂಪಾಯಿ ಸಹಾಯಧನ ಚೆಕ್ ವಿತರಣೆ :
ಶಾಸಕ ಕೆ. ಗೋಪಾಲಯ್ಯ ಶ್ಲಾಘನೆ

ಬೆಂಗಳೂರು :  ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಲೇಔಟ್ ವಾರ್ಡ್ ನಲ್ಲಿರುವ ನಂದಿನಿ ಲೇಔಟ್ ಫುಡ್ ಸ್ಟ್ರೀಟ್ ಟ್ರೇಡ್ ಅಸೋಸಿಯೇಷನ್ ವತಿಯಿಂದ ಸಂಘದ ಐದನೇ ವರ್ಷದ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಮಾರಂಭಕ್ಕೆ ಮಹಾಲಕ್ಷ್ಮಿ ಲೇಔಟ್ ಶಾಸಕರು ಹಾಗೂ ಮಾಜಿ ಸಚಿವ ಕೆ ಗೋಪಾಲಯ್ಯ, ಬಿಬಿಎಂಪಿ ಮಾಜಿ ಸದಸ್ಯ ಕೆವಿ ರಾಜೇಂದ್ರ ಕುಮಾರ್ ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಎಚ್ಎಸ್ ರಾಘವೇಂದ್ರ ಶೆಟ್ಟಿ ಪಾಲ್ಗೊಂಡು ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಸಿಹಿ ಹಂಚಿ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಶಾಸಕ ಕೆ ಗೋಪಾಲಯ್ಯ ರವರು ಮಾತನಾಡಿ ನಂದಿನಿ ಲೇಔಟ್ ಫುಡ್ ಸ್ವೀಟ್ ಅಸೋಸಿಯೇಷನ್ ಸಂಘದವರು ಇಂದು ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಸಮಾರಂಭ ಅರ್ಥಪೂರ್ಣವಾಗಿದ್ದು ಎಲ್ಲರೂ ಒಗ್ಗಟ್ಟಿನಿಂದ ರಾಜ್ಯದ ನೆಲ ಜಲ ಭಾಷೆ ವಿಚಾರವಾಗಿ ಬಂದಾಗ ನಾಡ ಹಬ್ಬದ ರೀತಿ ಕನ್ನಡ ರಾಜ್ಯೋತ್ಸವವನ್ನು ಕುಟುಂಬ ಸಮೇತ ತಳಿರು ತೋರಣ ಕಟ್ಟಿ ರಂಗೋಲಿ ಹಾಕಿ ಸಿಂಗರಿಸುವ ಮೂಲಕ ರಾಜ್ಯೋತ್ಸವ ಆಚರಣೆ ಮಾಡುತ್ತಿರುವುದು ಸಂತಸ ಮತ್ತು ಶ್ಲಾಘನೀಯವಾಗದದ್ದು, ಜೊತೆಗೆ ಬರೀ ವ್ಯವಹಾರ ಮಾಡದೆ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಟ್ಟು ಇಂದು ಜಯಪ್ರಕಾಶ್ ನಾರಾಯಣ ಡಯಾಲಿಸಿಸ್ ಸೆಂಟರ್ ಸಂಘದ ವತಿಯಿಂದ ಎರಡು ಲಕ್ಷ ರೂಪಾಯಿಗಳ ಸಹಾಯಧನದ ಚೆಕ್ ನೀಡಿರುವುದು ಎಲ್ಲರಿಗೂ ಮಾದರಿ ಯಾಗುವಂತ ಕೆಲಸವಾಗಿದ್ದು ಹೀಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಕೆಲಸಗಳನ್ನು ಮಾಡಿಕೊಂಡು ಜೊತೆಗೆ ನಿಮ್ಮ ಸುತ್ತ ಮುತ್ತಲಿನ ಪರಿಸರವನ್ನ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಬರುವ ಗ್ರಾಹಕರಿಗೆ ಕೈಗೆಟುವ ದರದಲ್ಲಿ ತಿಂಡಿ ಊಟ ನೀಡುವ ಮೂಲಕ ಇನ್ನಷ್ಟು ಒಳ್ಳೆಯ ಕೆಲಸ ಮಾಡುವ ಮೂಲಕ ನಾಡು ಮೆಚ್ಚುವ ಕೆಲಸ ಮಾಡಿ ಎಂದು ಶಾಸಕ ಕೆ ಗೋಪಾಲಯ್ಯರವರು ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಶಾಸಕರಿಗೆ ಶಾಲು ಹೊಂದಿಸಿ ಹಾರ ಹಾಕಿ ಫಲ ಪುಷ್ಪ ನೋಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಬಿಬಿಎಂಪಿ ಸದಸ್ಯ ಕೆ ವಿ ರಾಜೇಂದ್ರ ಕುಮಾರ್, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಸಂಘದ ಅಧ್ಯಕ್ಷ ಸತೀಶ್, ಪದಾಧಿಕಾರಿಗಳಾದ ಯೋಗೀಶ್ ಜಗದೀಶ್ ವಾರ್ಡ್ ಅಧ್ಯಕ್ಷರಾದ ಭಾಸ್ಕರ್, ಆನಂದ್,ಸಂಪತ್, ಕುಣಿಗಲ್ ನಾಗರಾಜ್, ಶ್ರೀನಿವಾಸ್,ಬೋರೇಗೌಡ್ರು ಹಾಗೂ ಸಂಘದ ವಿನೋದ್ ನಾಗರಾಜ್ ಚಂದ್ರು ಸೇರಿದಂತೆ ಎಲ್ಲಾ ಸದಸ್ಯರು ಕುಟುಂಬ ವರ್ಗದವರು, ಮಕ್ಕಳು, ಸಾರ್ವಜನಿಕರು ಪಾಲ್ಗೊಂಡು ರಾಜ್ಯೋತ್ಸವ ಆಚರಣೆ ಮಾಡಿದರು. ಇದೇ ಸಂದರ್ಭದಲ್ಲಿ ಅನ್ನದಾನವನ್ನು ಏರ್ಪಡಿಸಲಾಗಿತ್ತು.

WhatsApp

Join Now

Telegram

Join Now

Instagram

Join Now