ವಿಜಯ ದರ್ಪಣ ನ್ಯೂಸ್……
ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ವಿಚಾರ ಸಂಕಿರಣ: ಕನ್ನಡ ಅಭಿವೃದ್ಧಿ ಪ್ರಾಧಿಕಾರ,
ಸಮರ್ಪಕ ರಾಷ್ಟ್ರೀಯ ಉದ್ಯೋಗ ನೀತಿ ಜಾರಿ, ಕನ್ನಡಿಗರಿಗೆ ಉದ್ಯೋಗ ಸಿಗಬೇಕು : ಎಲ್.ಹನುಮಂತಯ್ಯ

ಬೆಂಗಳೂರು: ನಯನ ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ಕಾರ್ಮಿಕ ಲೋಕ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ವಿಚಾರ ಸಂಕಿರಣ ಮತ್ತು ಶ್ರಮಿಕ ಸಾಧಕರಿಗೆ ಸತ್ಕಾರ ಸಮಾರಂಭ.
ರಾಜ್ಯಸಭಾ ಮಾಜಿ ಸದಸ್ಯ ಎಲ್.ಹನುಮಂತಯ್ಯ ರವರು, ಮಾಜಿ ಶಾಸಕ ಮುಖ್ಯಮಂತ್ರಿ ಚಂದ್ರುರವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಪುರಷೋತ್ತಮ್ ಬಿಳಿಮಲೆ, ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ.ಚನ್ನೇಗೌಡರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಸಂತೋಷ್ ಹಾನಗಲ್, ಕನ್ನಡ ಪರ ಹೋರಾಟಗಾರ ರಾ.ನಂ.ಚಂದ್ರಶೇಖರ್, ಡಾ.ವಿ.ಪಿ.ನಿರಾಂಜನಾರಾಧ್ಯ, ಡಾ ಮುರಳಿಧರ್ ರವರು ದೀಪ ಬೆಳಗಿಸಿ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿದರು.
ಎಲ್.ಹನುಮಂತಯ್ಯ ರವರು ಮಾತನಾಡಿ ಸಮರ್ಪಕ ರಾಷ್ಟ್ರೀಯ ಉದ್ಯೋಗ ನೀತಿ ಆಗಬೇಕು ಎಂಬುದು ನಮ್ಮ ಕನಸು. ಅಯಾ ಪ್ರಾದೇಶಿಕ ಭಾಷೆಯ ಉದ್ಯೋಗಿಗಳಿಗೆ ಕೆಲಸ ಸಿಗಬೇಕು.
ಸ್ಥಳೀಯರು, ಗ್ರಾಮೀಣ ಜನರಿಗೆ ಉದ್ಯೋಗ ಸಿಗಲು ರಾಷ್ಟ್ರೀಯ ಉದ್ಯೋಗ ನೀತಿ ಸಮರ್ಪಕವಾಗಿ ಜಾರಿ ಮಾಡಬೇಕು. ಸಮಾನತೆ ಶಿಕ್ಷಣ ವ್ಯವಸ್ಥೆ ಜಾರಿಗೆಯಾಗಬೇಕು.
50ವರ್ಷಗಳ ಹಿಂದೆ ಬ್ಯಾಂಕ್ ಗಳು ರಾಷ್ಟ್ರೀಕೃತವಾದಗ ಲಕ್ಷಾಂತರ ಜನರಿಗೆ ಉದ್ಯೋಗ ಸಿಗುವ ಕ್ಷೇತ್ರವಾಗಿದೆ, ಕನ್ನಡಿಗರಿಗೆ ಬ್ಯಾಂಕ್ ನಲ್ಲಿ ಉದ್ಯೋಗ ಸಿಗಬೇಕು ಈ ಹಿಂದೆ ಸಿಗುತ್ತಿತು.ಅದರೆ ಇಂದು ಸಿಗುತ್ತಿಲ್ಲ.
ಬೇರೆ ರಾಜ್ಯದವರು ಇಲ್ಲಿ ಕೆಲಸ ಮಾಡುವಂತೆ ಆಗಿದೆ, ಸ್ಥಳೀಯ ಭಾಷೆ ಅರಿವು ಇಲ್ಲದವರು ನಮ್ಮ ರಾಜ್ಯದ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ನೀರು, ಭೂಮಿ ಮತ್ತು ಬೆಂಗಳೂರು ಉತ್ತಮ ವಾತವಾರಣದಿಂದ ಹಲವಾರು ರಾಷ್ಟ್ರೀಕೃತ ಉದ್ಯಮಗಳು ಆರಂಭವಾಯಿತು ಅದರೆ ಸ್ಥಳೀಯರಿಗೆ ಇಲ್ಲಿ ಕೆಲಸ ಸಿಗುತ್ತಿಲ್ಲ. ರಾಷ್ಟ್ರೀಯ ಉದ್ಯೋಗಿ ನೀತಿ ರಾಜ್ಯಕ್ಕೆ ಮೋಸ ಮಾಡುವ ವಿಧಾನವಾಗಬಾರದು. ರಾಷ್ಟ್ರೀಯ ಉದ್ಯೋಗ ನೀತಿ ಸಮರ್ಪವಾಗಿ ಜಾರಿಗೆಯಾದರೆ ಮಾತ್ರ ನಾವು ಮತ ಹಾಕುತ್ತೇವೆ ಎಂದು ರಾಜ್ಯದ ಜನ ತೀರ್ಮಾನ ಮಾಡಬೇಕು.
ಸ್ಥಳೀಯ ಭಾಷೆಯ ಜ್ಞಾನ ಮುಖ್ಯ , ಕೇಂದ್ರದ ಉದ್ಯೋಗ ನೀತಿಯನ್ನು ಅಯಾ ಸ್ಥಳೀಯ ಭಾಷಿಕರಿಗೆ ಉದ್ಯೋಗ ಸಿಗಬೇಕು .ರಾಷ್ಟ್ರೀಯ ಉದ್ಯೋಗ ನೀತಿ ಸಮರ್ಪಕ ಜಾರಿಯಾಗಬೇಕು, ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಈ ನಿಟ್ಟಿನಲ್ಲಿ ಹೋರಾಟ ಮಾಡಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಚಂದ್ರು ರವರು ಮಾತನಾಡಿ ದ್ವಿಭಾಷೆ ಕಲಿಕೆ, ಜಲ ನೀತಿ ಮತ್ತು ರಾಷ್ಟ್ರೀಯ ಉದ್ಯೋಗ ನೀತಿ ಮೂರು ಬಾರಿ ಕೇಂದ್ರ ಸರ್ಕಾರ ಮನವಿ ಸಲ್ಲಿಸಲಾಯಿತು.
ರಾಜ್ಯ ಮತ್ತು ಕೇಂದ್ರ ಮತ್ತು ಖಾಸಗಿ ವಲಯದಲ್ಲಿ ಕಠಿಣ ನಿರ್ಧಾರ ತಂದು ಕನ್ನಡಿಗರಿಗೆ ಅವಕಾಶ ಸಿಗಬೇಕು. ರಾಷ್ಟ್ರೀಯ ಉದ್ಯೋಗ ನೀತಿಯಲ್ಲಿ ರಾಜ್ಯ ಸರ್ಕಾರ ನೀತಿಯನ್ನ ರೂಪಿಸಲು ಅವಕಾಶ ಸಿಗಬೇಕು.
2024ರಲ್ಲಿ ಸ್ಥಳೀಯರಿಗೆ ಉದ್ಯೋಗ ನೀತಿ ರಾಜ್ಯ ಸರ್ಕಾರ ಜಾರಿಗೆ ತರಲು ಹೋದಾಗ ಪ್ರಬಲರು ವಿರೋಧಿಸಿದ ಕಾರಣ ಹೈಕೋರ್ಟ್ ನಲ್ಲಿ ವಜಾ ಈಗ ತಿದ್ದುಪಡಿ ತಂದು ಸ್ಥಳೀಯ ಉದ್ಯೋಗ ಅವಕಾಶ ಸಿಗುವಂತೆ ಕಾನೂನು ರಚಿಸಬೇಕು.
ಕಡ್ಡಾಯವಾಗಿ ದ್ವಿಭಾಷೆ ನೀತಿ ಜಾರಿಗೆ ತರಬೇಕು ಮೂರನೇಯ ಭಾಷೆ ಅವರಿಗೆ ಇಷ್ಟವಾದ ಭಾಷೆ ತೆಗೆದು ಕೊಳ್ಳಲಿ ಅದಕ್ಕೆ ಅಂಕ ಕೊಡುವುದು ಬೇಡ.
ವ.ಚ.ಚನ್ನೇಗೌಡರು ಮಾತನಾಡಿ ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗ ಸಿಗಬೇಕು. ರಾಜ್ಯ ಸರ್ಕಾರದ ಉದ್ಯೋಗ ಕನ್ನಡಿಗರ ಪಾಲಾಗಿತ್ತು. ಇಂದು ಖಾಸಗಿ ವಲಯದಲ್ಲಿ ಅನ್ಯ ಭಾಷಿಕರ ಪಾಲಾಗಿದೆ. ಕನ್ನಡಿಗರಿಗೆ ಉದ್ಯೋಗ ರಾಜ್ಯ ಸರ್ಕಾರ ಕಾನೂನು ರೂಪಿಸಬೇಕು.
ಇಂದು ಎಲ್ಲರು ಖಾಸಗಿ ಶಾಲೆಗಳಿಗೆ ಅಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ರಾಷ್ಟ್ರೀಯ ಉದ್ಯೋಗ ಮೀಸಲಾತಿ ಸರಿಯಾದ ಕ್ರಮದಲ್ಲಿ ಜಾರಿಯಾಗಬೇಕು.

ಬೆಂಗಳೂರು ಇಂದು ಯಾರು ಬರಬೇಡಿ ಎಂದು ಬೋರ್ಡ್ ಹಾಕುವ ಸ್ಥಿತಿ ಬಂದಿದೆ. ಪಕ್ಷಭೇದ ಮರೆತು ಎಲ್ಲರು ಕನ್ನಡಿಗರಿಗೆ ನ್ಯಾಯ ಕೊಡಿಸಬೇಕು ಎಂದು ಹೇಳಿದರು.
ರಾ.ನಂ.ಚಂದ್ರಶೇಖರ್ ರವರು ಮಾತನಾಡಿ ರಾಷ್ಟ್ರೀಯ ಉದ್ಯೋಗ ನೀತಿ ಜಾರಿಯಾಗಲು ಕನ್ನಡ ಸಂಘಟನೆಗಳು ಹೋರಾಟ ಮಾಡಬೇಕು. ಖಾಸಗಿ , ಬಹುರಾಷ್ಟ್ರೀಯ ಉದ್ಯಮದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ.
ಅದಾಯ ತೆರಿಗೆ ಇಲಾಖೆಯಲ್ಲಿ ಒಬ್ಬರು ಕನ್ನಡಿಗ ಅಧಿಕಾರಿ ಇಲ್ಲ. ಸರೋಜನಿ ಮಹಿಷಿ ವರದಿ ಜಾರಿಯಾಗಬೇಕು ಎಂದು 40ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ಡಾ.ಸಂತೋಷ್ ಹಾನಗಲ್ ರವರು ಮಾತನಾಡಿ ಕಳೆದ 32ವರ್ಷಗಳಿಂದ ಕನ್ನಡ ಉಳಿವಿಗಾಗಿ ಶ್ರಮಿಸುತ್ತಿದೆ. ಕನ್ನಡ ಭಾಷೆಗೆ ತೊಂದರೆಯಾದರು ಸರ್ಕಾರಕ್ಕೂ ಚಾಟಿ ಬೀಸುತ್ತದೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ರವರಿಗೆ ಕೇಂದ್ರ ಸರ್ಕಾರದ ಕೈಗಾರಿಕೆಗಳಲ್ಲಿ ಕನ್ನಡಿಗರ ಅವಕಾಶ ಸಿಗಬೇಕು ಎಂದು ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ವಿ.ಪಿ.ನಿರಂಜನಾರಾಧ್ಯ ರವರು ಮಾತನಾಡಿ ರಾಜ್ಯ ಸರ್ಕಾರ ದ್ವಿಭಾಷ ಸೂತ್ರ ಆಳವಡಿಸಿಕೊಳ್ಳಬೇಕು. ಕನ್ನಡ ಉಳಿದರೆ ಕನ್ನಡಿಗ ಕರ್ನಾಟಕ ಉಳಿಯುತ್ತದೆ.
8ನೇ ತರಗತಿವರಗೆ ಮಾತೃಭಾಷೆಯಲ್ಲಿ ಶಿಕ್ಷಣ ಕಲಿಸಬೇಕು, ನಂತರ ಅಂಗ್ಲ ಭಾಷೆ ಕಲಿಯಬೇಕು. ಸರ್ಕಾರಿ ಶಾಲೆಗಳು ಉಳಿಯಬೇಕು ಎಂದು ಹೇಳಿದರು.
ಮುರುಳಿಧರ್* ರವರು ಮಾತನಾಡಿ ಕಾರ್ಖಾನೆಗಳಲ್ಲಿ ಕನ್ನಡಿಗರ ಉದ್ಯೋಗ ಸಿಗಬೇಕು ಪೂರಕವಾದ ನೀತಿ ರೂಪಿಸಬೇಕು. ಶಿಕ್ಷಣದಲ್ಲಿ ವಿರುದ್ದ ದಿಕ್ಕಿನತ್ತ ಸಾಗುತ್ತಿದೆ ಇದರಿಂದ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಶೇಕಡ 10ರಷ್ಟು ಮಾತ್ರ ಉದ್ಯೋಗ ಸೃಷ್ಟಿಯಾಗುತ್ತಿದೆ, ಖಾಸಗಿ ಕ್ಷೇತ್ರದಲ್ಲಿ ಶೇಕಡ 90ರಷ್ಟು ಉದ್ಯೋಗ ಸೃಷ್ಟಿಯಾಗುತ್ತಿದೆ.
ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಲಭಿಸಬೇಕು. ಕೌಶಲ್ಯಭಿವೃದ್ಧಿ ಕಡೆ ಹೆಚ್ಚು ಗಮನಹರಿಸಿದಾಗ ಉದ್ಯೋಗ ಸಿಗುತ್ತದೆ ಎಂದು ಹೇಳಿದರು.
ಶ್ರಮಿಕ ಸಾಧಕರರಿಗೆ ಪ್ರಶಸ್ತಿ ಪದ್ಮಶ್ರೀ ಪುರಸ್ಕೃತ ಅಂಕೇಗೌಡ, ಡಾ.ಸುಷ್ಮ ಶಂಕರ್, ತ.ಜಗದೀಶ್ ಚಂದ್ರ, ಸೋ.ನ.ಅಶ್ವತ್ಥಪ್ಪ, ಡಿ.ಆರ್.ನದಾಫ್ ಚಿಕ್ಕೊಡಿ, ಸಂಗಮೇಶ್ ಕೊಟ್ಟುರು ಶೆಟ್ಟರ್, ಗುರಪ್ರಸಾದ್ , ಬಿ.ಜಿ.ರಾಜೇಶ್ ರವರು ಶ್ರಮಿಕ ಸಾಧಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು.










