ವಿಜಯ ದರ್ಪಣ ನ್ಯೂಸ್………
ಕುಶಾಲನಗರದಲ್ಲಿ ಟಿಪ್ಪರ್‌ಗಳಿಂದ ರಸ್ತೆಯಲ್ಲಿ ಕಲ್ಲು, ಜಲ್ಲಿ ಪುಡಿ ಚೆಲ್ಲಾಟ – ಅಪಘಾತದ ಭೀತಿ !

ಕೊಡಗು: ಹಾಸನ–ಮಾಕುಟ್ಟ ರಾಷ್ಟ್ರೀಯ ಹೆದ್ದಾರಿಯ ಕುಶಾಲನಗರದ ವಿಶಾಲ್ ಮಾರ್ಟ್ ಮುಂಭಾಗದಲ್ಲಿ ಕಲ್ಲು ಮತ್ತು ಜಲ್ಲಿ ಪುಡಿ ಸಾಗಿಸುವ ಟಿಪ್ಪರ್‌ಗಳಿಂದ ರಸ್ತೆಯ ಮೇಲೆ ಕಲ್ಲಿನ ಚೂರುಗಳು ಬೀಳುತ್ತಿದ್ದು, ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ.
ಟಿಪ್ಪರ್‌ಗಳಲ್ಲಿ ಯಾವುದೇ ಮೇಲ್ಪದರ ಅಥವಾ ಮುಚ್ಚಳವಿಲ್ಲದೆ ಕಲ್ಲು ಮತ್ತು ಜಲ್ಲಿ ಪುಡಿಯನ್ನು ಸಾಗಿಸುತ್ತಿರುವುದರಿಂದ ರಸ್ತೆಯ ಮೇಲೆ ಕಲ್ಲಿನ ಚೂರುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದರಿಂದ ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದು, ಅಪಘಾತ ಸಂಭವಿಸುವ ಆತಂಕ ಎದುರಾಗಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮಗಳು ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ, ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಟಿಪ್ಪರ್‌ಗಳಲ್ಲಿ ಸರಕು ಸಾಗಣೆ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘಿಸುವ ಟಿಪ್ಪರ್ ವಾಹನಗಳ ವಿರುದ್ಧ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ರಸ್ತೆಯಲ್ಲಿ ಬಿದ್ದಿರುವ ಕಲ್ಲು ಮತ್ತು ಜಲ್ಲಿ ಪುಡಿಯನ್ನು ತೆರವುಗೊಳಿಸಿ, ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಆನಂದ್ ಕನ್ನಡಿಗ
ಅಧ್ಯಕ್ಷರು
ವಿಧಾನಸಭಾ ಕ್ಷೇತ್ರ
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)
ಕೊಡಗು.











