ವಿಜಯ ದರ್ಪಣ ನ್ಯೂಸ್……
ಬಡಾವಣೆ ನಾಟಕೋತ್ಸವ ಸುಸಂಪನ್ನ

ಬೆಂಗಳೂರು : ಶ್ರೀಅಭಯಹಸ್ತ ಬಲಮುರಿ ಗಣಪತಿ ದೇವಸ್ಥಾನ ಟ್ರಸ್ಟ್ ಮತ್ತು ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ ಸಂಯುಕ್ತ ಶ್ರಯದಲ್ಲಿ ಆಯೋಜಿಸಿದ್ದ ಮೂರುದಿನಗಳ ಬಡಾವಣೆ ನಾಟಕೋತ್ಸವವು ಸಂಪನ್ನವಾಯಿತು.
ದೇವಾಲಯದ ಶ್ರೀ ಸಿ. ಆರ್.ಸಿಂಹ ಸಾಂಸ್ಕೃತಿಕ ಭವನದಲ್ಲಿ ಖ್ಯಾತ ಶಿಕ್ಷಣ ತಜ್ಞೆ, ಸಾಹಿತಿ ಶ್ರೀಮತಿ ಗೀತಾರಾಮಾನುಜಮ್ ಅವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿ ಬಡಾವಣೆ ಗಳಲ್ಲಿ ಈ ರೀತಿಯ ನಾಟಕೋತ್ಸವವನ್ನು ಆಯೋಜಿಸುವ ಮೂಲಕ ನಮ್ಮ ಸಂಸ್ಕೃತಿ, ಪರಂಪರೆ ಯನ್ನು ಮಕ್ಕಳಿಗೆ ಪರಿಚಯಿಸುವ ಕಾರ್ಯವನ್ನು ದೇವಾಲಯದ ಆಡಳಿತ ಮಂಡಳಿ ಮಾಡುವ ಮೂಲಕ ಉತ್ತಮ ಮೇಲ್ಪoಕ್ತಿಯನ್ನು ಮಾಡಿರುವುದು ಅಭಿನಂದನಿಯವಾದದು ಎಂದರು,
ಇದರಿಂದ ರಂಗಭೂಮಿಗೆ ಶಕ್ತಿಯನ್ನು ತುಂಬಿ ಉತ್ತಮ ನಾಟಕ ಪ್ರದರ್ಶನಕ್ಕೆ ವೇದಿಕೆ ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯವಾದದ್ದು ಎಂದರು, ಮೊದಲ ದಿನ ರಾಷ್ಟ್ರಕವಿ ಕುವೆಂಪು ವಿರಚಿತ ಮಾಯದ ಮನೆಯು ಗಣಪತಿಗೌಡ ನಿರ್ದೇಶನದಲ್ಲಿ ಹಾಗು ಗದಾಯುದ್ಧ ಪೌರಾಣಿಕ ನಾಟಕವು ಆಂಜನೇಯ ರಂಗರೂಪದಲ್ಲಿ, ಡಿ. ವೆಂಕಟರಮಣಯ್ಯ ನಿರ್ದೇಶನದಲ್ಲಿ ಪ್ರದರ್ಶನವಾಯಿತು,
ಎರಡನೇ ದಿನ ಯು. ಗೋವಿಂದೇಗೌಡ ರಚನೆಯ
ದು – ರೋಧನ ಪೌರಾಣಿಕ ನಾಟಕವು ಗಣಪತಿಗೌಡ ನಿರ್ದೇಶನದಲ್ಲಿ ಹಾಗು ರಾಷ್ಟ್ರಕವಿ ಕುವೆಂಪು ವಿರಚಿತ ಆಂಜನೇಯ ರಂಗರೂಪದ ಹೆಚ್.ಎನ್. ಆನಂದಮೂರ್ತಿ ನಿರ್ದೇಶನದಲ್ಲಿ ಸ್ಮಶಾನ ಕುರುಕ್ಷೇತ್ರ ನಾಟಕವು ಪ್ರದರ್ಶನವಾಯಿತು.

ಮೂರನೇ ಹಾಗು ಅಂತಿಮ ದಿನ ಎನ್. ಎಸ್. ರಾವ್ ವಿರಚಿತ ಆಂಜನೇಯ ರಂಗರೂಪದ ಡಿ. ವೆಂಕಟರಮಣಯ್ಯ ನಿರ್ದೇಶನದಲ್ಲಿ ವೀರ ಪೌರವ ಐತಿಹಾಸಿಕ ನಾಟಕ ಮತ್ತು ವಿಕಟವಿಲಾಸ ಹಾಸ್ಯ ನಾಟಕವು ಗೋವಿಂದೇಗೌಡ ರಚನೆ ಮತ್ತು ನಿರ್ದೇಶನದಲ್ಲಿ ಪ್ರದರ್ಶನವಾಯಿತು.
ಈ ಕಾರ್ಯಕ್ರಮದಲ್ಲಿ ನಿವೃತ್ತ ತಹಸೀಲ್ದಾರ್ ಎಂ. ವಿಜಯಕುಮಾರ್, ನಿವೃತ್ತ ದೈಹಿಕ ಶಿಕ್ಷಕ ಕೆ. ಜೆ. ಚಂದ್ರಶೇಖರ, ಕೆಂಗೇರಿ ಪೊಲೀಸ್ ಠಾಣಾಧಿಕಾರಿ ಜಗದೀಶ್, ನಟ. ನಿರ್ದೇಶಕ ಮುಗ್ ಸುರೇಶ, ಹಾಪಕಾಮ್ಸ್ ಮಾಜಿ ನಿರ್ದೇಶಕ ಎಂ. ಜಯಕುಮಾರ್, ಹಿರಿಯ ಪತ್ರಕರ್ತ ಎನ್. ಎಸ್. ಸುಧೀಂದ್ರ ರಾವ್, ಧನವಂತ್ರಿ, ದೇವಾಲಯದ ಟ್ರಸ್ಟಿಗಳಾದ ರಾಮಪ್ಪ, ಶ್ರೀನಿವಾಸ, ಶೋಭಾ ಸೇರಿದಂತೆ ಕಲಾಭಿಮಾನಿಗಳು ಉಪಸ್ಥಿತರಿದ್ದು ಬಡಾವಣೆ ನಾಟಕೋತ್ಸವನ್ನು ಯಶಸ್ವೀಗೊಳಿಸಿದರು.











