--Ads--

ವಿದ್ಯೆ ಸಾಧಕನ ಸ್ವತ್ತು ಇದನ್ನು ಗಳಿಸಬೇಕು: ನಟರಾಜ್ ಆಭಿಪ್ರಾಯ

On: June 26, 2024 12:51 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಸೂಲಿಬೆಲೆ ಹೋಸಕೋಟೆ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ : ವಿದ್ಯಾರ್ಥಿ ಜೀವನದಲ್ಲಿ
ಸಾಧಿಸುವ ಅವಕಾಶ ಎಲ್ಲರಿಗೂ ಇರುತ್ತದೆ ವಿದ್ಯೆ ಎಂಬುದು ಸಾಧಕನ ಸ್ವತ್ತು ಇದನ್ನು ಗಳಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ನಟರಾಜ್ ಆಭಿಪ್ರಾಯಪಟ್ಟರು

ಅವರು ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಪೋಷಕರು ಮಕ್ಕಳಿಗೆ ಅಸ್ತಿ ಮಾಡುವ ಬದಲು ವಿದ್ಯೆಯನ್ನು ಕೊಡಿ ಅವರೇ ದೇಶಕ್ಕೆ ಅಸ್ತಿಯಾಗುತ್ತಾರೆ ಮತ್ತು ಸದೃಡ ಸಮಾಜ ನಿರ್ಮಾಣಕ್ಕೆ ವಿದ್ಯೆ ಅನಿವಾರ್ಯತೆ ಹೆಚ್ಚಿದೆ ಎಂದು ಹೇಳಿದರು.

ಜಡಿಗೇನಹಳ್ಳಿ ಸರ್ಕಾರಿಪ್ರೌಢಶಾಲೆ ಮುಖ್ಯಶಿಕ್ಷಕಿ ಸುಜಾತ ಮಾತನಾಡಿ, ತರಗತಿಗಳಲ್ಲಿ ಎಲ್ಲರಿಗೂ ಒಂದೇ ರೀತಿಯ ಶಿಕ್ಷಣ ನೀಡಲಾಗುತ್ತದೆ ಆದರೆ ಕೆಲವರು ಉನ್ನತ ಶ್ರೇಣಿಯಲ್ಲಿ ಕೆಲವು ಸಾಮಾನ್ಯಶ್ರೇಣಿಯಲ್ಲಿ ಉತ್ತಿರ್ಣರಾಗುತ್ತಾರೆ ಅದು ಅವರವರ ಜ್ಞಾನಕ್ಕೆ ಸಿಕ್ಕ ಪ್ರತಿಫಲ ಎಂದು ಹೇಳಿದರು.

“ಹಳೇ ವಿದ್ಯಾರ್ಥಿ ಹಾಗೂ ಪೋಲಿಸ್ ಇನ್ಸ್‌ಪೆಕ್ಟರ್ ಭತ್ಯಪ್ಪ ಮಾತನಾಡಿ ಇಂದಿನ ಯುವ ಸಮುದಾಯ ಪ್ರಾಥಮಿಕ ಹಂತದಲ್ಲಿಯೇ ಮೋಬೈಲ್‌ನ ದಾಸರಾಗಿದ್ದು ಇವರಿಗೆ ಶಿಕ್ಷಣ ಎಂಬುದು ಕಬ್ಬಿಣದ ಕಡಲೆಯಾಗಿದೆ ಗುರುಹಿರಿಯರು ಹಾಗೂ ತಂದೆ ತಾಯಿಗಳಿಗೆ ಗೌರವ ಮನ್ನಣೆ ಇಲ್ಲದ ಸಮಾಜದ ಕಡೇ ನಾವು ಹೆಜ್ಜೆ ಹಾಕುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ಹಳೇ ವಿದ್ಯಾರ್ಥಿಗಳಿಂದ 2023 ನೇ ಸಾಲಿನಲ್ಲಿ ಹೆಚ್ಚು ಅಂಕ ಪಡೆದ ಕಾರ್ತಿಕ, ರಾಧಿಕ, ಸಾಹೇಬ್ ಫಾತಿಮಾ ಅವರಿಗೆ ಗೌರವಿಸಿ ಪ್ರತಿಭಾಪುರಸ್ಕಾರ ನೆರವೇರಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೆಆರ್‌ಡಿ ಮಾಲತಿ, ಇನ್ನರ್ ವಿಲ್ ಕ್ಲಬ್ ನ ಪ್ರಾಯಲಕ್ಷ್ಮೀ, ಹಳೇಯ ವಿದ್ಯಾರ್ಥಿಗಳಾದ ಬಸವರಾಜ ಜಿ.ಸಿ.ಮಂಜುನಾಥ್, ಕೊಳತೂರು ಸುರೇಶ್, ಪಿಳ್ಳಾಂಜನಪ್ಪ, ಸೋಲೂರು ನಾರಾಯಣಸ್ವಾಮಿ, ಮಂಜುಳ, ಅಣ್ಣಮ್ಮ, ರತ್ನಮ್ಮ, ಕೊಳತೂರು ನಾರಾಯಣಸ್ವಾಮಿ, ಇತರರು ಇದ್ದರು

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ನಗದಿತ ಅವಧಿಯೊಳಗೆ ಬಡವರಿಗೆ ಸೂರು, ಸೈಟ್ ವಿತರಿಸಲು ಸಿದ್ಧತೆ ಮಾಡಿಕೊಳ್ಳಿ: ಸಚಿವ ಕೆ.ಹೆಚ್ ಮುನಿಯಪ್ಪ

ಹೊಸಕೋಟೆಯಲ್ಲಿ ಮತದಾರರ ಜಾಗೃತಿ ಮ್ಯಾರಾಥಾನ್ ಹಾಗೂ SIR ವಿಶೇಷ ಆಂದೋಲನಕ್ಕೆ ಜಿ. ಪಂ. ಸಿಇಒ ಡಾ.ವಾಸಂತಿ ಅಮರ್ ಚಾಲನೆ

ದೇವನಹಳ್ಳಿ ತಾಲ್ಲೂಕು ಆಡಳಿತ ಸೌಧದಲ್ಲಿ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ

ತಾವರೆಕೆರೆಯಲ್ಲಿ ಅದ್ಧೂರಿ ಗಣೇಶೋತ್ಸವ ಜೈ ಭೀಮ್ ವಿನಾಯಕ ಗೆಳೆಯರ ಬಳಗದಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ : ರಸಮಂಜರಿ ಕಾರ್ಯಕ್ರಮಕ್ಕೆ ಮೆರುಗು

ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗುವುದನ್ನು ಖಚಿತಪಡಿಸಿಕೊಳ್ಳಲು ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ: ಮತದಾರರ ನೋಂದಣಾಧಿಕಾರಿ (ERO) 

ಪ್ರಜಾಪ್ರಭುತ್ವ ಪ್ರತಿಯೊಬ್ಬರ ಆಶಯಗಳಿಗೆ ಧ್ವನಿ: ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ