--Ads--

ಶ್ರೀ ಚೌಡೇಶ್ವರಿ ದೇವಿ ಸಮುದಾಯ ಭವನಕ್ಕೆ ಶಂಕುಸ್ಥಾಪನೆ

On: October 14, 2024 3:24 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಕ್ಟೋಬರ್ : ಪಟ್ಟಣದ ಶ್ರೀ ಸರ್ವಶಕ್ಯಾತ್ಮಕ ಚೌಡೇಶ್ವರಿ ದೇವಿ ದೇಗುಲದಲ್ಲಿ ಅದ್ದೂರಿಯಾಗಿ ವಿಜಯದಶಮಿ ಹಬ್ಬವನ್ನು ಆಚರಣೆ ಮಾಡಲಾಯಿತು. ಎಲ್ಲಾ ಧರ್ಮದ ಜನರು ದೇವಾಲಯಕ್ಕೆ ಆಗಮಿಸಿ ತಾಯಿಯ ದರ್ಶನ ಪಡೆದು ಪುನೀತರಾದರು.

ವಿಜಯದಶಮಿ ದಿನದಂದು ತಾಯಿ ಸರ್ವಶಕ್ಯಾತ್ಮಕ ಚೌಡೇಶ್ವರಿ ದೇವಿಗೆ ಚಾಮುಂಡೇಶ್ವರಿ ದೇವಿಯ ಅಲಂಕಾರ ಮಾಡಿದ್ದು, ಭಕ್ತಾಧಿಗಳ ಕಣ್ಮನ ಸೆಳೆಯಿತು. ದೇಗುಲವನ್ನು ವಿವಿಧ ಬಗೆಯ ಹೂವುಗಳಿಗೆ ಅಲಂಕಾರ ಮಾಡಲಾಗಿತ್ತು.

ದೇವಾಲಯದ ಮುಂಭಾಗ ದಾನಿಗಳು ನೀಡಿರುವ ನಿವೇಶನದಲ್ಲಿ ವಿಜಯದಶಮಿಯ ಶುಭ ಮಹೂರ್ತದಲ್ಲಿ ಶ್ರೀ ಚೌಡೇಶ್ವರಿ ದೇವಿ ಸಮುದಾಯ ಭವನಕ್ಕೆ ದೇವಾಲಯ ಸಮಿತಿಯ ಪದಾಧಿಕಾರಿಗಳು, ಭಕ್ತಾಧಿಗಳು ವಿಷ್ಣು ಸಹಸ್ರನಾಮ ಪಠಿಸುವ ಮೂಲಕ ಶಂಕು ಸ್ಥಾಪನೆ ಮಾಡಿದರು.

“ಸಮುದಾಯ ಭವನದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪೂಜಾ ವಿಧಿ ವಿಧಾನ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಸಣ್ಣ ಪ್ರಮಾಣದಲ್ಲಿ ವರ್ಷಧಾರೆಯಾಯಿತು, ಇದರಿಂದ ನೆರೆದಿದ್ದ ಭಕ್ತರು ಪುಳಕಿತರಾಗಿ ತಾಯಿ ಚೌಡೇಶ್ವರಿಗೆ ಜೈಕಾರ ಕೂಗಿದರು.

ದೇವಾಲಯ ಸಮಿತಿ ಅಧ್ಯಕ್ಷ ಎಸ್‌ಎಲ್ ಎನ್ ಅಶ್ವತ್ಥ ನಾರಾಯಣ ಮಾತನಾಡಿ, ನೂರಾರು ವರ್ಷದಿಂದ ಇಲ್ಲೊಂದು ದೇಗುಲ ನಿರ್ಮಾಣಕ್ಕೆ ಸಂಕಲ್ಪವಾಗಿದ್ದರೂ, ಕಳೆದ ದಶದ ಹಿಂದೆ ದೇವಾಲಯ ಲೋಕಾರ್ಪಣೆಯಾಗಿತ್ತು. ಭಕ್ತಾದಿಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾದ ಪರಿಣಾಮ ಇಂದು ಪ್ರಾಂಗಣ ಚಿಕ್ಕದೆನ್ನಿಸಿದೆ ಎಂದರು.

ಈ ದೇಗುಲಕ್ಕೆ ಜಾತಿ, ಮತ, ಧರ್ಮದ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಇಲ್ಲದೇ, ದೈವ ಕೃಪೆಯಂತೆ ಎಲ್ಲಾ ಸಮುದಾಯದವರು ಬಂದು ತಾಯಿಯ ಸೇವೆ ಮಾಡುತ್ತಿದ್ದಾರೆ. ದಾನಿಗಳು ನೀಡಿರುವ ನಿವೇಶನದಲ್ಲಿ ಸಮುದಾಯ ಭವನ ಪ್ರಾರಂಭವಾಗುತ್ತಿದ್ದು, ಎಲ್ಲರೂ ತನು ಮನ, ಧನ ನೀಡಿ ಸಹಕಾರ ಮಾಡಬೇಕು ಎಂದರು.

ಜಿಲ್ಲಾಧಿಕಾರಿ ಕಚೇರಿ ಆರ್‌ಎಚ್‌ಎಂ ಗಂಗಾಧರಪ್ಪ ಮಾತನಾಡಿ ವಿಜಯದಶಮಿ ಶುಭ ದಿನದಂದು ಸಮುದಾಯ ಭವನಕ್ಕೆ ಶಂಕು ಸ್ಥಾಪನೆ ಮಾಡಲಾಗಿದೆ. ಇಲ್ಲಿಯೇ ಇಂದು ಅನ್ನ ಸಂತರ್ಪಣೆ ನಡೆಯುತ್ತಿದ್ದು, ಮುಂದಿನ ವರ್ಷದ ದಸರಾ ವೇಳೆಗೆ ಕೆಳಮಹಡಿಯಲ್ಲಿ ಅಡುಗೆ ಕೋಣೆ, ಒಂದನೇ ಮಹಡಿಯಲ್ಲಿ ಹಾಲ್ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಇದೇ ವೇಳೆ ಅಶ್ವತ್ ಗುರುಜಿ, ವಿಶ್ವ ಹಿಂದೂ ಪರಿಷತ್ತು ರಂಗಸ್ವಾಮಿ, ಬಾಲಾಜಿ, ಭೀಮರಾಜ್, ಹನುಮಂತಣ್ಣ, ವೆಂಕಟೇಶ್, ಪುರೋಹಿತ್ ವೀರಣ್ಣ ಸ್ವಾಮಿ, ಬಸ್ ರಾಜು, ಹನುಮಂತಪ್ಪ, ಪಿ. ಜಯರಾಂ ಸೇರಿದಂತೆ ಭಕ್ತ ಗಣ ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ನಗದಿತ ಅವಧಿಯೊಳಗೆ ಬಡವರಿಗೆ ಸೂರು, ಸೈಟ್ ವಿತರಿಸಲು ಸಿದ್ಧತೆ ಮಾಡಿಕೊಳ್ಳಿ: ಸಚಿವ ಕೆ.ಹೆಚ್ ಮುನಿಯಪ್ಪ

ಹೊಸಕೋಟೆಯಲ್ಲಿ ಮತದಾರರ ಜಾಗೃತಿ ಮ್ಯಾರಾಥಾನ್ ಹಾಗೂ SIR ವಿಶೇಷ ಆಂದೋಲನಕ್ಕೆ ಜಿ. ಪಂ. ಸಿಇಒ ಡಾ.ವಾಸಂತಿ ಅಮರ್ ಚಾಲನೆ

ದೇವನಹಳ್ಳಿ ತಾಲ್ಲೂಕು ಆಡಳಿತ ಸೌಧದಲ್ಲಿ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ

ತಾವರೆಕೆರೆಯಲ್ಲಿ ಅದ್ಧೂರಿ ಗಣೇಶೋತ್ಸವ ಜೈ ಭೀಮ್ ವಿನಾಯಕ ಗೆಳೆಯರ ಬಳಗದಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ : ರಸಮಂಜರಿ ಕಾರ್ಯಕ್ರಮಕ್ಕೆ ಮೆರುಗು

ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗುವುದನ್ನು ಖಚಿತಪಡಿಸಿಕೊಳ್ಳಲು ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ: ಮತದಾರರ ನೋಂದಣಾಧಿಕಾರಿ (ERO) 

ಪ್ರಜಾಪ್ರಭುತ್ವ ಪ್ರತಿಯೊಬ್ಬರ ಆಶಯಗಳಿಗೆ ಧ್ವನಿ: ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ