--Ads--

ನಾಗರಿಕರಲ್ಲಿ ಡಿಜಿಟಲ್ ಅರೆಸ್ಟ್ ಅರಿವು ಅಗತ್ಯ:ಸಿಪಿಐ ಮಧುಸೂಧನ್

On: December 6, 2024 2:03 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ನಾಗರಿಕರಲ್ಲಿ ಡಿಜಿಟಲ್ ಅರೆಸ್ಟ್ ಅರಿವು ಅಗತ್ಯ : ಸಿಪಿಐ ಮಧುಸೂಧನ್

ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ : ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು ಅವುಗಳಲ್ಲಿ ಡಿಜಿಟಲ್ ಅರೆಸ್ಟ್ ನಂತಹ ಪ್ರಕರಣಗಳಿಂದ ನಾಗರಿಕರು ಜಾಗೃತರಾಗುವುದು ಅಗತ್ಯವಿದೆ ಎಂದು ಮಹಿಳಾ ಪೋಲಿಸ್ ಠಾಣೆಯ ಸಿಪಿಐ ಮಧುಸೂದನ್ ಆರ್ ಹೇಳಿದರು.

ಅವರು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಿದ್ದ “ಸಮೂಹ ಮಾಧ್ಯಮ ಮತ್ತು ಅಪರಾಧ ಪ್ರಕರಣಗಳು” ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಡಿಜಿಟಲ್ ಅರೆಸ್ಟ್ ಇತ್ತೀಚಿನ ಭಯಾನಕ ಸೈಬರ್ ಅಪರಾಧವಾಗಿದ್ದು,ಅಮಾಯಕ ನಾಗರಿಕರು ಬಲಿಪಶುಗಳಾಗುತ್ತಿದ್ದಾರೆ. ಆನ್‌ಲೈನ್ ವಂಚಕರಿಂದ ದಿನವಿಡಿ ಬಂಧನಕ್ಕೊಳಗಾಗಿ ಕೋಟಿ ರೂ. ನಷ್ಟು ಕಳೆದು ಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ವಿಶೇಷ ಉಪನ್ಯಾಸ ನೀಡಿದ ಹಿಂದುಸ್ಥಾನ ಟೈಮ್ಸ್ ಕನ್ನಡ ಆವೃತ್ತಿಯ ಸಂಪಾದಕ ಘನಶ್ಯಾಮ್ ಡಿ.ಎಂ. ಅವರು, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲಿ ಸಂಭವಿಸುವ ಅಪರಾಧ ಮತ್ತು ಅಧಿಕಾರ ದುರುಪಯೋಗದ ಕುರಿತು ನಿಷ್ಠುರವಾಗಿ ವರದಿ ಮಾಡಿ ಸಾರ್ವಜನಿಕರಿಗೆ ತಿಳಿಸುವ ಜವಾಬ್ದಾರಿಯನ್ನು ಸಮೂಹ ಮಾಧ್ಯಮ ಮಾಡುತ್ತಿದೆ. ವಿದ್ಯಾರ್ಥಿಗಳು ಅಪರಾಧ ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಂದ ದೂರ ಇರಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಸದಾಶಿವ ರಾಮಚಂದ್ರಗೌಡ ಮಾತನಾಡಿ ಪರೀಕ್ಷೆಗಾಗಿ ನೋಟ್ಸ್ ಸಂಗ್ರಹಿಸುವುದು ಹಾಗೂ ಪ್ರತೀಷ್ಠೆಗಾಗಿ ಪದವಿ ಪಡೆಯುವುದಷ್ಟೆ ಶಿಕ್ಷಣವಾಗಬಾರದು. ನಾಗರಿಕ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತು, ದೈನಂದಿನ ಬದುಕಿನಲ್ಲಿ ಅಪರಾಧ ಕೃತ್ಯಗಳಿಂದ ಜಾಗೃತಗೊಂಡು ಪಾಲಕ ಮತ್ತು ಬೋಧಕ ವರ್ಗಕ್ಕೆ ಕೀರ್ತಿ ತರುವಂತರಾಗಬೇಕೆಂದು ಕಿವಿಮಾತು ಹೇಳಿದರು.

ಪತ್ರಿಕೋದ್ಯಮ ಉಪನ್ಯಾಸಕ ಡಾ. ಸತೀಶ ಕೆ.ಇಟಗಿ ಪ್ರಾಸ್ತಾವಿಕ ಭಾಷಣ ಮಾಡಿದರು. ಐಕ್ಯೂಎಸಿ ಸಂಯೋಜಕರಾದ ಡಾ.ಗಂಗಾಧರಯ್ಯ ಬಿ.ಆರ್. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಶೋಭಾ ಮಲ್ದಾರಿ, ಪತ್ರಕರ್ತರಾದ ನಟರಾಜ, ಶ್ರೀಕಾಂತ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಲಕ್ಷ್ಮೀದೇವಿ-ಮಾನಸ ಪ್ರಾರ್ಥಿಸಿದರು, ಮಂಜುಳಾ ಎಲ್.ಜಿ. ಸ್ವಾಗತಿಸಿದರು, ಚಂದ್ರಕಲಾ ನಿರೂಪಿಸಿದರು, ಕಾವ್ಯ ವಂದಿಸಿದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಪಿಒಪಿ ಗಣೇಶ ವಿಗ್ರಹಗಳ ತಯಾರಿಕೆ, ಸಂಗ್ರಹಣೆ, ಸಾಗಾಣಿಕೆ, ಮಾರಾಟ ನಿಷೇಧ, ಜಿಲ್ಲೆಯಾದ್ಯಾಂತ ಪಟಾಕಿ, ಡಿಜೆ ಸಂಪೂರ್ಣ ನಿಷೇಧ: ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಗೆ ಜಿಲ್ಲಾಧಿಕಾರಿ ಕರೆ

ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ: 12 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ವಾಹನಗಳು ವಶ, ಓರ್ವ ಬಂಧನ

ಅಮಾವಾಸ್ಯೆ ಪ್ರಯುಕ್ತ ಶ್ರೀ ಭದ್ರಕಾಳಿ ಶಕ್ತಿ ಪೀಠದಲ್ಲಿ ವಿಶೇಷ ಪೂಜೆ ಹಾಗೂ ಮಹಾ ಪ್ರತ್ಯಂಗಿರಾ ಹೋಮ

ವಿಕಸಿತ ಭಾರತ ಯುವ ನಾಯಕತ್ವ ಸಂವಾದ-2027 ಭಾಗವಾಗಿ ಯುವಜನತೆಗೆ ಕ್ವಿಜ್ ಸ್ಪರ್ಧೆ ಆಯೋಜನೆ

ಶಾಸಕ ಶರತ್ ಬಚ್ಚೇಗೌಡರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ರಾಜ್ಯದಲ್ಲಿ ಜಾನುವಾರುಗಳಿಗೆ ಪೌಷ್ಟಿಕ ಪೂರಕ ಮೇವು ಅಭಿವೃದ್ಧಿ: 3,78,00,000 ರೂಪಾಯಿ ವೆಚ್ಚದಲ್ಲಿ 12,000 ಅಜೋಲಾ ಘಟಕಗಳ ಸ್ಥಾಪನೆಗೆ ಚಾಲನೆ