ವಿಜಯ ದರ್ಪಣ ನ್ಯೂಸ್…..
ಶಾಸಕ ಶರತ್ ಬಚ್ಚೇಗೌಡರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ತಾವರೆಕೆರೆ : ಹೊಸಕೋಟೆ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಚಿಕ್ಕನಲ್ಲೂರಹಳ್ಳಿ, ಚೋಳಪ್ಪನಹಳ್ಳಿ, ಪಿಲ್ಲಗುಂಪೆ ಹಾಗೂ ದೊಡ್ಡಹುಲ್ಲೂರು ಗ್ರಾಮಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶರತ್ ಬಚ್ಚೇಗೌಡ ರಿಂದ ಚಾಲನೆ ನೀಡಿದರು.
ಇದೇ ವೇಳೆ ಸಿಎಸ್ಆರ್ ಅನುದಾನದಡಿ ನಿರ್ಮಿಸಲಾದ ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಲಾಯಿತು. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯವನ್ನು ಉತ್ತಮಪಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವ ಉದ್ದೇಶದಿಂದ ಈ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ, ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ರಸ್ತೆ, ಶಿಕ್ಷಣ, ವಿದ್ಯುತ್ ಬೆಳಕು ಹಾಗೂ ಹೈನುಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜನರ ಅಗತ್ಯತೆ ಮತ್ತು ಸ್ಥಳೀಯ ಸಮಸ್ಯೆಗಳನ್ನು ಆಧರಿಸಿ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಸರ್ಕಾರದ ಅನುದಾನಗಳ ಜೊತೆಗೆ ಸಿಎಸ್ಆರ್ ಹಾಗೂ ಬಮುಲ್ನಂತಹ ವಿವಿಧ ಮೂಲಗಳಿಂದ ದೊರೆಯುವ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಬಮುಲ್ ನಿರ್ದೇಶಕರಾದ ಎಲ್ & ಟಿ ಮಂಜುನಾಥ್ , ನಾರಾಯಣಗೌಡರು, ಸತೀಶ್, ದೊಡ್ಡಹುಲ್ಲೂರು ರಾಜಗೋಪಾಲ್, ಯೋಜನಾ ಪ್ರಾಧಿಕಾರದ ಸದಸ್ಯರಾದ ಎಚ್ಎಮ್ ಸುಬ್ಬರಾಜು ,ರಾಮೇಗೌಡರು, ಮಲಿಮಾಕನಪುರ ತಮ್ಮೇಗೌಡ, ನಾರಾಯಣಸ್ವಾಮಿ, ಹಾಗೂ ಸ್ಥಳೀಯ ನಾಯಕರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು.










