--Ads--

ಭಕ್ತಿ ಭಾವದಿಂದ ನಡೆದ ಶ್ರೀವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ

On: February 4, 2026 2:14 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಭಕ್ತಿ ಭಾವದಿಂದ ನಡೆದ ಶ್ರೀವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ

 

ದೇವನಹಳ್ಳಿ, ಫೆ : ಪಟ್ಟಣದ ಇತಿಹಾಸ ಪ್ರಸಿದ್ದ ರುಕ್ಷ್ಮಿಣಿ ಸತ್ಯಭಾಮೆ ಸಮೇತ ಶ್ರೀ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಪ್ರತಿ ವರ್ಷದಂತೆ ಮಾಘಮಾಸ ದ್ವಿತೀಯ ಮಖಾ ನಕ್ಷತ್ರದ ಶುಭ ಮುಹೂರ್ತದಲ್ಲಿ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಜನ ಸಾರ್ವಜನಿಕರು, ತಾಲ್ಲೂಕಿನ ಜನಪ್ರತಿನಿಧಿಗಳು ಭಾಗವಹಿಸಿ ಭಕ್ತಿಭಾವದಿಂದ ತೇರನ್ನು ಎಳೆಯಲಾಯಿತು.

ಈ ಸಮಯದಲ್ಲಿ ಸ್ವಾಮಿಯ ಆಭರಣಗಳನ್ನು ಪೋಲೀಸರ ಕಾವಲಿನೊಂದಿಗೆ ತಹಸೀಲ್ದಾ‌ರ್ ಎಂ ಅನಿಲ್ ದೇವಾಲಯಕ್ಕೆ ತಂದರು, ಒಡವೆಗಳನ್ನೆಲ್ಲಾ ದೇವರಿಗೆ ತೊಡಿಸಿ ದೇವಾಲಯದ ಸುತ್ತಲು ಪ್ರದಕ್ಷಿಣೆ ಹಾಕಿ ರಥೋತ್ಸವದ ತೇರಿನಲ್ಲಿ ಶ್ರೀವೇಣುಗೋಪಾಲ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಗೋವಿಂದ, ಗೋವಿಂದ ఎంబ ನಾಮಸ್ಮರಣೆಯಿಂದ ಪಟ್ಟಣದ ಮುಖ್ಯ ರಸೆಯಲ್ಲಿ ತೇರನ್ನು ಎಳೆದು ತರಲಾಯಿತು .

ಈ ಸಮಯದಲ್ಲಿ ನೆರೆದಿದ್ದ ಭಕ್ತರು ತೇರಿಗೆ ದವನ ಸಮೇತ ಬಾಳೆಹಣ್ಣನ್ನು ಎಸೆಯುತ್ತಿದ್ದರು, ನಂತರ ತೇರನ್ನು ದೇಶದ ಪೇಟೆ ಚೌಕದಲ್ಲಿ ತಂದು ನಿಲ್ಲಿಸಲಾಯಿತು, ಈ ಸಮಯದಲ್ಲಿ ನೆರೆದಿದ್ದ ಭಕ್ತರು ಪೂಜೆಯನ್ನು ಮಾಡಿಸಿಕೊಂಡು ಹೋಗುತ್ತಿದ್ದರೆ, ಕೆಲವರು ಬಾಳೆಹಣ್ಣು ಕಳಸಕ್ಕೆ ಎಸೆಯುವ ಪ್ರಯತ್ನ ನಡೆಸಿದರು ಸಂಜೆ ತೇರನ್ನು ದೇವಾಲಯದ ಕಡೆಗೆ ತರಲಾಯಿತು.

ತಹಸೀಲ್ದಾ‌ರ್ ಎಂ. ಅನಿಲ್, ಜಿಲ್ಲಾಡಳಿತ ಕಛೇರಿಯ ಪಿ.ಗಂಗಾಧರ್, ಸಿ.ಜಗನ್ನಾಥ್, ಬಯಪ ಅಧ್ಯಕ್ಷ ಶಾಂತಕುಮಾರ್, ಪುರಸಭಾ ಅಧ್ಯಕ್ಷ ಡಿ.ಎಂ.ಮುನಿಕೃಷ್ಣ, ಉಪಾಧ್ಯಕ್ಷ ಜಿ.ಎ.ರವೀಂದ್ರ, ಸದಸ್ಯರಾದ, ಎನ್.ರಘು, ಗೀತಾ ಶ್ರೀಧರ್, ಪುಷ್ಪಲತಾ ಲಕ್ಷ್ಮೀನಾರಾಯಣ್, ವೇಣುಗೋಪಾಲ್‌ ಮುಂತಾದವರು ಉಪಸ್ಥಿತರಿದ್ದರು

WhatsApp

Join Now

Telegram

Join Now

Instagram

Join Now