ಮಳಮಾಚನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ವಿಜಯಲಕ್ಷ್ಮೀ ಗೋಪಾಲ್, ಉಪಾಧ್ಯಕ್ಷೆಯಾಗಿ ಜಯಮ್ಮ ಮುನಿರಾಜು ಅವಿರೋಧ ಆಯ್ಕೆ

ವಿಜಯ ದರ್ಪಣ ನ್ಯೂಸ್….

ಮಳಮಾಚನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ವಿಜಯಲಕ್ಷ್ಮೀ ಗೋಪಾಲ್, ಉಪಾಧ್ಯಕ್ಷೆಯಾಗಿ ಜಯಮ್ಮ ಮುನಿರಾಜು ಅವಿರೋಧ ಆಯ್ಕೆ

ಶಿಡ್ಲಘಟ್ಟ : ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ವಿಜಯಲಕ್ಷ್ಮೀ ಗೋಪಾಲ್, ಉಪಾಧ್ಯಕ್ಷೆಯಾಗಿ ಜಯಮ್ಮ ಮುನಿರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಂಚಾಯಿತಿಗೆ ಈ ಹಿಂದಿನ ಅಧ್ಯಕ್ಷೆ ಜಯಲಕ್ಷ್ಮೀ ಮುನಿರಾಜು, ಉಪಾಧ್ಯಕ್ಷೆ ನಾಗವೇಣಮ್ಮ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು.

ಅಧ್ಯಕ್ಷ ಸ್ಥಾನಕ್ಕೆ ವಿಜಯಲಕ್ಷ್ಮೀ, ಉಪಾಧ್ಯಕ್ಷ ಸ್ಥಾನಕ್ಕೆ ಜಯಮ್ಮ ಇಬ್ಬರೆ ನಾಮಪತ್ರ ಸಲ್ಲಿಸಿದರಿಂದ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಜಗದೀಶ್ ತಿಳಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಎಂ.ಕೆ.ರಾಜಶೇಖ‌ರ್,ಗ್ರಾಮದ ಹಿರಿಯ ಮುಖಂಡ ಜಗದೀಶ್ ,ಆನೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಹಿತ್ತಲಹಳ್ಳಿ ವೆಂಕಟೇಶ್‌, ಎಂ.ಜಿ.ನವೀನ್‌ಕುಮಾರ್, ಎಂಪಿಸಿಎಸ್ ಅಧ್ಯಕ್ಷ ದ್ಯಾವಪ್ಪ, ಮಾಜಿ ಅಧ್ಯಕ್ಷ ಸತೀಶ್‌,ಅಶೋಕ್, ರಾಮಚಂದ್ರಚಾರಿ ,ಗ್ರಾಮ ಪಂಚಾಯತಿ ಪಿಡಿಒ ಶೈಲಾ, ಕಾರ್ಯದರ್ಶಿ ತಿಮ್ಮೇಗೌಡ ಮತ್ತಿತರರು ಹಾಜರಿದ್ದರು.