ವಿಜಯ ದರ್ಪಣ ನ್ಯೂಸ್…..
ಸ್ವಸ್ಥ ಮೈಸೂರು’ ಅಭಿಯಾನಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಚಾಲನೆ

ತಾಂಡವಪುರ ಮಾರ್ಚ್ 23 ಮೈಸೂರಿನ: ಶಾರದಾವಿಲಾಸ ಫಾರ್ಮಸಿ ಕಾಲೇಜಿನಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಶನ್, ಶಾರದಾವಿಲಾಸ ಶಿಕ್ಷಣ ಸಂಸ್ಥೆಗಳು ಹಾಗೂ ಸ್ವಸ್ಥ ಮೈಸೂರು ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಸ್ವಸ್ಥ ಮೈಸೂರು’ ಆರೋಗ್ಯ ಜಾಗೃತಿ ಮತ್ತು ಪ್ರಚಾರ ಕಾರ್ಯಕ್ರಮಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ, ಸಾಂಸ್ಕೃತಿಕನಗರಿ ಮೈಸೂರನ್ನು ರೋಗಮುಕ್ತ ಹಾಗೂ ಆರೋಗ್ಯಕರ ನಗರವನ್ನಾಗಿಸಲು ‘ಸ್ವಸ್ಥ ಮೈಸೂರು ಅಭಿಯಾನ’ ಮಹತ್ವದ ಹೆಜ್ಜೆಯಾಗಿದೆ. ಆರೋಗ್ಯಕರ ಸವಾಜ ನಿರ್ವಾಣಕ್ಕೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಮತ್ತು ಯುವಜನತೆ ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು.
ಸ್ವಸ್ಥ ಮೈಸೂರು ಎಂಬ ಹೆಸರಿನ ಅರ್ಥವೇ ಮೈಸೂರು ನಗರವನ್ನು ಸಂಪೂರ್ಣವಾಗಿ ಆರೋಗ್ಯಕರ ಮತ್ತು ರೋಗ ಮುಕ್ತವಾಗಿಸುವುದಾಗಿದೆ. ಆರೋಗ್ಯ ಜಾಗೃತಿ, ಸ್ವಚ್ಛತೆ, ಉತ್ತಮ ಆಹಾರ ಪದ್ಧತಿ ಹಾಗೂ ನಿಯ ಮಿತ ವ್ಯಾಂಾಮದ ಮೂಲಕ ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳಬಹುದು ಎಂದು ಹೇಳಿದರು.
ಶಾರದಾವಿಲಾಸ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಬಿ.ಎಂ.ಸುಬ್ರಾಯಿ, ಸ್ವಸ್ಥ ಮೈಸೂರು ರಾಯಭಾರಿ ಡಾ.ಭರತ್ ಶೆಟ್ಟಿ, ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ವೃದ್ಧಾರೋಗ್ಯ ವಿಭಾಗದ ಮುಖ್ಯಸ್ಥೆ ಡಾ.ಪ್ರತಿಭಾ ಪೆರೇರಾ, ಕಾಲೇಜಿನ ಪ್ರಾಂಶುಪಾಲ ಡಾ.ಹನುಮಂತಾಚಾರ್ ಜೋಶಿ ಇತರರು ಉಪಸ್ಥಿತರಿದ್ದರು.









