ವಿಜಯ ದರ್ಪಣ ನ್ಯೂಸ್….
ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆದ ಶ್ರೀರೇಣುಕಾದೇವಿ ಎಲ್ಲಮ್ಮ ಹೂವಿನ ಕರಗ ಮಹೋತ್ಸವ

ಶಿಡ್ಲಘಟ್ಟ : ನಗರದಲ್ಲಿ ಶ್ರೀರೇಣುಕಾದೇವಿ ಎಲ್ಲಮ್ಮ ಹೂವಿನ ಕರಗವನ್ನು ಆಚರಿಸಲಾಯಿತು,ಶಕ್ತಿ ಆರಾಧನೆಯ ಧೋತಕವಾದ ಆಹ್ವಾನಿಸಲು ಕರಗವನ್ನು ಮನೆಗಳ ಮುಂದೆ ಸಾರಿಸಿ ರಂಗೋಲಿಯನ್ನಿಟ್ಟಿದ್ದರು.
ಎಲಮ್ಮದೇವಿ ದೇಗುಲದ ಬಳಿ ನೂರಾರು ಭಕ್ತರು, ಪೂಜೆ, ಕರಗ ಹೊರುವುದಕ್ಕೆ ಸಾಕ್ಷಿಯಾದರು.
ಪ್ರತಿಯೊಂದು ಬೀದಿ, ಪ್ರಮುಖ ರಸ್ತೆಗಳು ಎಲ್ಲವನ್ನೂ ಹಾದು ಬರುವುದು ಈ ಕರಗದ ವಿಶೇಷ ಹಾಗಾಗಿ ಪ್ರತಿಯೊಬ್ಬ ಮನೆಯವರೂ ಆರತಿ ಎತ್ತಿ, ಹೂಗಳನ್ನು ಅರ್ಪಿಸುತ್ತಾರೆ.
ನಗರದಲ್ಲಿ ಸಂಗೀತ ಗೋಷ್ಠಿ, ಆರ್ಕೆಸ್ಟ್ರಾ ಏರ್ಪಡಿಸಲಾಗಿತ್ತು. ಊರಿನ ಗ್ರಾಮ ದೇವತೆಗಳಾದ ದೇವಾಲಯ ಸೇರಿ ವಿವಿಧ ದೇವಾಲಯಗಳಲ್ಲಿ ಪೂಜೆ,ಶ್ರೀ ಮಾರಮ್ಮ, ಶ್ರೀಪೂಜಮ್ಮ ದೇವಿ ಹಾಗು ಶ್ರೀಗಂಗಮ್ಮ ದೇವಿ ದೇವಾಲಗಳಿಗೆ ಹೂವಿನ ಅಲಂಕಾರ, ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.
ಯುಗಾದಿಯ ದಿನ ರಾತ್ರಿ ಹಸಿಕರಗದೊಂದಿಗೆ ಪ್ರಾರಂಭವಾದ ದೇವತಾ ಕಾರ್ಯಗಳು ಹೂವಿನ ಕರಗದೊಂದಿಗೆ ಮುಕ್ತಾಯವಾಗುತ್ತದೆ,ಕರಗ ಹೊತ್ತು ನಡೆಯುವ ವ್ಯಕ್ತಿಗೆ ವಪನ ಸಂಸ್ಕಾರ ಮಾಡಿ, ಕಂಕಣ ಕಟ್ಟಿ, ಕೈತುಂಬ ಕರಿ ಬಳೆ ತೊಡಿಸಿ, ಅಚ್ಚ ಮಲಿಗೆಯ ಜಡೆಕುಚ್ಚುಗಳಿಂದ ಸಿಂಗರಿಸಿ, ಅರಿಶಿಣದ ಸೀರೆ, ಆಭರಣಗಳಿಂದ ಅಲಂಕರಿಸುತ್ತಾರೆ,ಕರಗ ಹೊರುವ ವ್ಯಕ್ತಿ ನವವಧುವಿನಂತೆ ಶೋಭಿಸುತ್ತಿದ್ದರು.
ಗೋವಿಂದ.. ಗೋವಿಂದ.. ಎಂದು ಕೂಗುತ್ತಾ ಆವೇಷಭರಿತರಾಗಿ ವೀರಕುಮಾರರು ಅಲಗು ಮಾಡುವುದರೊಂದಿಗೆ ಸೇವೆ ಹಲಗೆ, ತಮಟೆ ವಾದ್ಯಗಳ ಸಮೇತ ಕರಗ ಣದೇವಾಲಯದ ಪ್ರದಕ್ಷಿಣೆ ಮಾಡಿ ನರ್ತಿಸಿತು.
ಮುಂದೆ ಕತ್ತಿ ಹಿಡಿದ ವೀರಕುಮಾರರು, ಹಿಂದೆ ಕುಣಿಯುತ್ತಾ ಕರಗ ಸಂಚರಿಸಿತು ,ರಾತ್ರಿಯಿಡೀ ಊರೆಲ್ಲ
ಈ ಸಂಪ್ರದಾಯವನ್ನು ಹಿಂದಿನಿಂದ ವಗ್ನಿಕುಲ ಕ್ಷತ್ರಿಯರು ಆಚರಿಸಿಕೊಂಡು ಬಂದಿದ್ದಾರೆ ಈ ಬಾರಿ ಕರಗವನ್ನು ಮಾದವಪ್ಪ ಮಗ ರಮೇಶ್ ಅವರು ಹೊತ್ತಿದ್ದರು.











