--Ads--

ಸನಾತನ ಸಂಸ್ಕೃತಿ , ಆಚರಣೆಗಳ ಮೂಲಕ ಯುವ ಪೀಳಿಗೆಗೆ ಮೌಲ್ಯಗಳನ್ನು ಬಿತ್ತಬೇಕು: ಶ್ರೀ ಸಿದ್ಧಲಿಂಗ ಸ್ವಾಮೀಜಿ

On: March 23, 2026 6:02 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಸನಾತನ ಸಂಸ್ಕೃತಿ , ಆಚರಣೆಗಳ ಮೂಲಕ ಯುವ ಪೀಳಿಗೆಗೆ ಮೌಲ್ಯಗಳನ್ನು ಬಿತ್ತಬೇಕು: ಶ್ರೀ ಸಿದ್ಧಲಿಂಗ ಸ್ವಾಮೀಜಿ

ವಿಜಯಪುರ: “ಸಮಾಜದಲ್ಲಿ ಇಂದು ಮಕ್ಕಳು ಕೇವಲ ಉನ್ನತ ಶಿಕ್ಷಣವನ್ನು ಪಡೆದು ಪ್ರಮಾಣ ಪತ್ರಗಳನ್ನು ಪಡೆದರೆ ಸಾಲದು, ಅವರು ಸಂಸ್ಕಾರವಂತ ನಾಗರಿಕರಾದಾಗ ಮಾತ್ರ ದೇಶದ ಏಳಿಗೆ ಸಾಧ್ಯ. ಮಕ್ಕಳಲ್ಲಿ ಉತ್ತಮ ಗುಣಗಳನ್ನು ಬೆಳೆಸುವಲ್ಲಿ ಪಾಲಕರ ಪಾತ್ರ ಬಹುಮುಖ್ಯ,ಸನಾತನ ಸಂಸ್ಕೃತಿ , ಆಚರಣೆಗಳ ಮೂಲಕ ಯುವ ಪೀಳಿಗೆಗೆ ಮೌಲ್ಯಗಳನ್ನು ಬಿತ್ತಬೇಕು-” ಎಂದು ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾ ಸ್ವಾಮೀಜಿ ಅವರು ಅಭಿಮತ ವ್ಯಕ್ತಪಡಿಸಿದರು.

ನಗರದ ಬಸವೇಶ್ವರ ಬಡಾವಣೆಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ಶಿಕ್ಷಕ ದಂಪತಿಗಳಾದ ಎಂ.ಗಿರಿಜಾಂಬ ಎಚ್.ಎಸ್. ರುದ್ರೇಶ ಮೂರ್ತಿ ಅವರ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆಯಲ್ಲಿ ದಿವ್ಯ ನೇತೃತ್ವ ವಹಿಸಿ ಅವರು ಆಶೀರ್ವಚನ ನೀಡಿದರು.

ದಾಸೋಹ ಪರಂಪರೆಯ ಸ್ಮರಣೆ:
​ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ ಜೀವನದ ಆದರ್ಶಗಳನ್ನು ನೆನಪಿಸಿಕೊಂಡು, “ನಡೆದಾಡುವ ದೇವರು ಲಕ್ಷಾಂತರ ಬಡ ಮಕ್ಕಳಿಗೆ ಅಕ್ಷರ, ಅನ್ನ ಮತ್ತು ಆಶ್ರಯ ನೀಡುವ ಮೂಲಕ ಅವರ ಬದುಕಿಗೆ ಬೆಳಕಾದರು. ಅವರ ಆಶಯದಂತೆ ಪ್ರತಿಯೊಬ್ಬ ಮಗುವೂ ವಿದ್ಯಾವಂತನಾಗಬೇಕು. ಶಿಕ್ಷಣದ ಜೊತೆಗೆ ವಿನಯ ಮತ್ತು ಸಂಸ್ಕಾರವನ್ನು ಮೈಗೂಡಿಸಿಕೊಂಡಾಗ ಮಾತ್ರ ಮಗು ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ, ಆ ಮೂಲಕ ಸಭ್ಯ ಸಮಾಜವನ್ನು ನಿರ್ಮಿಸಬೇಕಿದೆ ಎಂದು ಮಾರ್ಮಿಕವಾಗಿ ನುಡಿದರು.

ಗ್ರಾಮೀಣ ಭಾಗದ ಶೈಕ್ಷಣಿಕ, ಸಾಮಾಜಿಕ ಪ್ರಗತಿ: ಶಿವಗಂಗೆಯ ಶ್ರೀ ಹೊನ್ನಮ್ಮಗವಿ ಮಠಾಧ್ಯಕ್ಷರಾದ ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಮಾತನಾಡಿ, “ಗ್ರಾಮೀಣ ಭಾಗದ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯಬಾರದು. ಹಳ್ಳಿಗಳಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆ ಮತ್ತು ಶರಣರ ತತ್ವ ಸಿದ್ಧಾಂತಗಳನ್ನು ಪ್ರಸರಿಸುವ ಕೆಲಸವಾಗಬೇಕು. ಅಕ್ಷರಸ್ಥ ಸಮಾಜವೇ ಬಲಿಷ್ಠ ರಾಷ್ಟ್ರಕ್ಕೆ ಬುನಾದಿ,​ಗ್ರಾಮೀಣ ಭಾಗದ ಶೈಕ್ಷಣಿಕ, ಸಾಮಾಜಿಕ ಪ್ರಗತಿಯಲ್ಲಿ ಶ್ರೀ ಸಿದ್ಧಗಂಗಾ ಕ್ಷೇತ್ರದ ಕೊಡುಗೆ ಅಪಾರವಾದದ್ದು ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್. ರುದ್ರೇಶ ಮೂರ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶರಣ ಸಾಹಿತ್ಯ ಮತ್ತು ಮೌಲ್ಯಾಧಾರಿತ ಶಿಕ್ಷಣವು ಇಂದಿನ ತಲೆಮಾರಿಗೆ ಅತ್ಯಗತ್ಯವಾಗಿದೆ. ನಮ್ಮ ಪರಂಪರೆಯಲ್ಲಿ ಗುರುಲಿಂಗ ಜಂಗಮ ಮತ್ತಿತರ ಧಾರ್ಮಿಕ ಕಾರ್ಯಗಳಿಗೆ ಶ್ರೇಷ್ಠ ಸ್ಥಾನವಿದೆ. ಅವುಗಳನ್ನು ಆಚರಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಯುವ ಪೀಳಿಗೆಗೆ ತಿಳಿಸಿ ಕೊಡಬೇಕಿದೆ ಎಂದರು.

ಶಿಕ್ಷಕಿ ಗಿರಿಜಾಂಬ, ಎಚ್ಆರ್ ದಕ್ಷತಾ, ಶಿಕ್ಷಕ ಸಿ.ವಿ. ಸುರೇಶ್, ಹೆಚ್ ಎಸ್ ಕನ್ಯಾಕುಮಾರಿ, ವೈದ್ಯ ಡಾ. ಕೀರ್ತನ್, ಎಸ್ ಅಮೃತಾ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮ.ಸುರೇಶ ಬಾಬು, ಜಿಲ್ಲಾ ಶಸಾಪ ಅಧ್ಯಕ್ಷರಾದ ಚಂದ್ರಶೇಖರ್ ಹಡಪದ್, ಹಿರಿಯರಾದ ಬಸವ ರಾಜೇಂದ್ರಪ್ಪ , ಪುರಸಭಾ ಸದಸ್ಯರಾದ ಎಂ. ಸತೀಶ್ ಕುಮಾರ್, ಮಾಜಿ ಸದಸ್ಯ ಎಸ್. ಭಾಸ್ಕರ್, ಪುರಸಭಾ ಮಾಜಿ ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್, ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ ವೀರಭದ್ರಪ್ಪ, ವೀರಶೈವ ಲಿಂಗಾಯತ ಸಮಾಜದ ನಿರ್ದೇಶಕ ಕೆ ಸದಾಶಿವಯ್ಯ, ಶ್ರೀ ವೀರಭದ್ರಸ್ವಾಮಿ ಗೋಷ್ಠಿ ಅಕ್ಕನ ಬಳಗ ಸೇವಾ ಟ್ರಸ್ಟ್ ಅಧ್ಯಕ್ಷ ವಿ ಅನಿಲ್ ಕುಮಾರ್, ಕೆ ಸೋಮಶೇಖರ್, ಮಂಗಳಾವತಿ, ವಸಂತ, ತಾಂಡವಮೂರ್ತಿ, ಸರಸ್ವತಿ, ಸುಂದರಮ್ಮ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಶೇಷ ಆಕರ್ಷಣೆ:
ಕಾರ್ಯಕ್ರಮದ ಆರಂಭದಲ್ಲಿ ‘ಅರಿವಿನ ಮನೆಯ’ ಸದಸ್ಯರಿಂದ ಅರ್ಥಪೂರ್ಣ ವಚನ ಗಾಯನ ನಡೆಯಿತು.
ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿ ಮತ್ತು ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಜಿವರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

WhatsApp

Join Now

Telegram

Join Now

Instagram

Join Now