--Ads--

ಆಸ್ಪತ್ರೆಯ ಅವ್ಯವಸ್ಥೆ, ಸವಲತ್ತುಗಳು ಸಿಗದ ಬಗ್ಗೆ ಅಸಮಾಧಾನ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ 

On: March 25, 2026 3:08 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಆಸ್ಪತ್ರೆಯ ಅವ್ಯವಸ್ಥೆ, ಸವಲತ್ತುಗಳು ಸಿಗದ ಬಗ್ಗೆ ಅಸಮಾಧಾನ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ 

ಶಿಡ್ಲಘಟ್ಟ : ಆಸ್ಪತ್ರೆಗೆ ಹೆರಿಗೆಗೆಂದು ಬರುವವರ ಸಂಖ್ಯೆ ಕಡಿಮೆ ಆಗಿದೆ ನೂರಾರು ಸಂಖ್ಯೆಯಲ್ಲಿ ಹೆರಿಗೆ ಆಗುತ್ತಿದ್ದ ಆಸ್ಪತ್ರೆಯಲ್ಲಿ ತಿಂಗಳಿಗೆ ಹತ್ತಿಪ್ಪತ್ತು ಹೆರಿಗೆಯಾದರೆ ಹೆಚ್ಚು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಸ್ಪತ್ರೆಯ ಅವ್ಯವಸ್ಥೆ, ಸವಲತ್ತುಗಳು ಸಿಗದ ಬಗ್ಗೆ ಸಾರ್ವಜನಿಕರು
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರ ಅಸಮಾಧಾನ ವ್ಯಕ್ತಪಡಿಸಿದರು.

ಮಹಿಳಾ ದಿನಾಚರಣೆಯ ನಿಮ್ಮಿತ್ತ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ಅವರು ಕಾರ್ಯಕ್ರಮದ ನಂತರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದಾಗ ಸಾರ್ವಜನಿಕರು ಸಮಸ್ಯೆಗಳನ್ನು ಅವರ ಬಳಿ ಹೇಳಿಕೊಂಡರು.

ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞ ವೈದ್ಯರಿಲ್ಲ ಹೆರಿಗೆಗೆ ಬಂದರೆ ಕಾಸು ಕೇಳ್ತಾರೆ,ಕೊಡದಿದ್ರೆ ಕಾಯಿಸಿ ಕಾಯಿಸಿ ಕೊನೆಗೆ ಹೆರಿಗೆ ಮಾಡದೆ ಜಿಲ್ಲಾ ಆಸ್ಪತ್ರೆಗೆ ಹೋಗು ಅಂತಾರೆ,ಸ್ಕ್ಯಾನಿಂಗ್ ತಂತ್ರಜ್ಞರೂ ಇಲ್ಲ ಎಂದು ಸಾರ್ವಜನಿಕರು ಹಲವು ಸಮಸ್ಯೆಗಳನ್ನು ಮಹಿಳಾ ಆಯೋಗದ ಅಧ್ಯಕ್ಷೆಯ ಬಳಿ ಮುಂದಿಟ್ಟರು.
ವೈದ್ಯಾಧಿಕಾರಿ ಹಾಗು ವೈದ್ಯರನ್ನು ಪ್ರಶ್ನಿಸಿ, ಅವರು ನೀಡಿದ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಸಮಸ್ಯೆಗಳನ್ನು ಆಲಿಸಿದ ಡಾ.ನಾಗಲಕ್ಷ್ಮಿ ಚೌಧರಿ ಸಂಬಂಧಿಸಿದ ಆಡಳಿತ ಹಿರಿಯ ಅಧಿಕಾರಿಗಳ ಬಳಿ ಮಾತನಾಡುವುದಾಗಿ ಹೇಳಿದರು.

ನಂತರ ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಕ್ಕೆ ಭೇಟಿ ನೀಡಿ, ನೂಲು ಬಿಚ್ಚಾಣಿಕೆಯಲ್ಲಿ ತೊಡಗಿರುವ ಕೂಲಿ ಕಾರ್ಮಿಕರ ಸಮಸ್ಯೆಗಳನ್ನುತಿಳಿದುಕೊಂಡರು. ಕುದಿಯುವ ಬಿಸಿ ನೀರಿನಲ್ಲಿ ಕೋಲು ಹಿಡಿದು ನೂಲು ತೆಗೆಯಬೇಕು, ಉರಿಯುವ ಸೌದೆಯ ಬಿಸಿ ಮುಂದೆ ಗಂಟೆ ಗಟ್ಟಲೆ ಕೂರಬೇಕು. ಬಿಸಿ, ಉರುವುಲಿಂದ ಬರುವ ಹೊಗೆ, ಧೂಳು, ಕುದಿಯುವ ರೇಷ್ಮೆ ಗೂಡಿನಿಂದ ಹೊರಹೊಮ್ಮುವ ಹಬೆಯಿಂದ ಉಸಿರಾಟದ ತೊಂದರೆ, ಕ್ಷಯ, ಅಸ್ತಮಾ, ಚರ್ಮ ರೋಗ, ರಕ್ತದ ಕೊರತೆಯಂತ ಹತ್ತಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಹೇಳಿಕೊಂಡರು.

ರೇಷ್ಮೆ ನೂಲು ಬಿಚ್ಚಾಣಿಕೆಯ ಕೂಲಿ ಕಾರ್ಮಿಕರಿಗೆ ಸರ್ಕಾರವು ಹಲವಾರು ಸವಲತ್ತುಗಳನ್ನು ಒದಗಿಸುತ್ತಿದೆ, ಸೌದೆ ಬದಲಿಗೆ ಇತರ ಉಪಕರಣಗಳ ಮೂಲಕ ನೀರನ್ನು ಕಾಯಿಸುವ ತಂತ್ರಜ್ಞಾನವಿದ್ದು, ಸವಲತ್ತುಗಳನ್ನು ಇಲಾಖೆ ಒದಗಿಸಬೇಕಿದೆ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಎನ್.ಗಗನ ಸಿಂಧು, ಇಒ ಆರ್.ಹೇಮಾವತಿ, ಪೌರಾಯುಕ್ತ ಜಿ.ಅಮೃತಾ, ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ,ವೈದ್ಯರಾದ ಡಾ.ವಾಣಿ,ಪೌರಾಯುಕ್ತ ಜಿ.ಅಮೃತಗೌಡ, ಸಿಡಿಪಿಒ ವಿದ್ಯಾ ವಸ್ತ್ರದ್, ಕಾರ್ಮಿಕ ಇಲಾಖೆ ಅಧಿಕಾರಿ ವಿಜಯಲಕ್ಷ್ಮಿ, ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ವೈದ್ಯರಾದ ಡಾ.ವಾಣಿ, ಚಿತ್ರನಟಿ ರಾಜೇಶ್ವರಿ,ಕುಂದಲಗುರ್ಕಿ ಮುನೀಂದ್ರ ಮತ್ತಿತರಿದ್ದರು.

WhatsApp

Join Now

Telegram

Join Now

Instagram

Join Now