ವಿಜಯ ದರ್ಪಣ ನ್ಯೂಸ್….
ಯುಧ್ಧ ನಿಲ್ಲಲಿ ಶಾಂತಿ ನೆಲೆಸಲಿ: ಮಾಜಿ ಶಾಸಕ ಎಂ.ಕೆ. ಸೋಮಶೇಖರ್
ತಾಂಡವಪುರ ಮಾರ್ಚ್ 26 ನಗರದ ರಾಮಸ್ವಾಮಿ ವೃತ್ತದಲ್ಲಿ ಎಂ.ಕೆ.ಸೋಮಶೇಖರ್ ನೇತೃತ್ವದ ಜನಸ್ಪಂದನ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಇರಾನ್ ಸೇರಿ ವಿವಿಧ ದೇಶಗಳಲ್ಲಿ “ಯುದ್ಧ ನಿಲ್ಲಲಿ ಶಾಂತಿ ನೆಲೆಸಲಿ”ಶಾಂತಿ ಸಂದೇಶ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ ಹಾಗೂ ಜನಸ್ಪಂದನಾ ಟ್ರಸ್ಟ್ ಅಧ್ಯಕ್ಷ ಎಂ.ಕೆ.ಸೋಮಶೇಖರ್ ಮಾತನಾಡಿ, ಜಾಗತೀಕ ಯುದ್ದ ವಿಶ್ವದ ಎಲ್ಲಾ ದೇಶಗಳ ಮೇಲೆ ವ್ಯಾಪಕ ಪರಿಣಾಮ ಬೀರಲಿದ್ದು, ಯುದ್ಧದ ಭೀಕರತೆ,ಮಾನವ ಜೀವಹಾನಿ, ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ. ಮನುಷ್ಯ ವಿಕಾಸ ಆಗಲು ಲಕ್ಷಾಂತರ ವರ್ಷಗಳ ಕೋಟ್ಯಾಂತರ ಜನರ ಬುದ್ಧಿ ಶ್ರಮದಿಂದ ಮನುಷ್ಯ ವಿಕಾಸ ಹೊಂದಿದ್ದಾನೆ.
ಯುದ್ಧದ ಮೂಲಕ ಮತ್ತೆ ಮನುಷ್ಯ ಸರ್ವನಾಶವಾಗುತ್ತಾನೆ.ಆದಷ್ಟು ಬೇಗನೆ ಯುದ್ಧ ಕೊನೆಗೊಳ್ಳಲಿ. ನಾಗರೀಕರ ಆಸ್ತಿ ಪಾಸ್ತಿಗೆ ಬೆಲೆ ಇಲ್ಲವೇ? ನಾಗರೀಕರ ಬದುಕಿಗೆ ಬೆಲೆ ಇಲ್ಲವೇ? ಮಾನವೀಯತೆಗಿಂತ ಬೆರೇನು ಇಲ್ಲ.ಯುದ್ಧ ನಿಲ್ಲಲಿ ಶಾಂತಿ ನೆಲೆಸಲಿ ಎಂದರು.
ಕೆಲವು ದಿನಗಳಿಂದ ಇರಾನ್, ಇಸ್ರೇಲ್, ಅಮೇರಿಕಾದಂತಹ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಯುದ್ಧದ ದುಷ್ಪರಿಣಾಮ ಜಗತ್ತಿನ ಮೂಲೆ ಮೂಲೆಗೂ ತಲುಪುತ್ತಿದೆ. ಶಾಂತಿಯು ಸಾಮರಸ್ಯ ಸಮಾಜದ ಕೀಲಿ ಕೈ ಇದ್ದಂತೆ. ಶಾಂತಿ ನೆಲೆಗೊಂಡರೆ ಮಾತ್ರ ಪ್ರತಿಯೊಂದು ದೇಶವೂ ಸಹೋದರತ್ವದಿಂದ ಇರಲು ಹಾಗೂ ನಾಗರೀಕರಾದ ನಾವು ಸುಸ್ಥಿರ ಜೀವನ ನೆಡೆಸಲು ಸಾಧ್ಯವೇ ಹೊರತು ಯುದ್ಧ ಮತ್ತು ಹಿಂಸಾಚಾರದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು.
ಸಾಮಾಜಿಕ ಹೋರಾಟಗಾರ ಪ್ರೊ.ಕಾಳಚನ್ನೇಗೌಡ ಮಾತನಾಡಿ, ಈಗಾಗಲೇ ಮೊದಲನೇ ಮತ್ತು ಎರಡನೇ ಮಹಾಯುದ್ಧದ ಪರಿಣಾಮವಾಗಿ ಅಪಾರ ಪ್ರಮಾಣದ ನಷ್ಟಗಳು ಅನುಭವಿಸಿವೆ.ಎರಡನೇ ಮಹಾ ಯುದ್ಧದ ಸಂದರ್ಭದಲ್ಲಿ ಉಂಟಾದ ಸಾವು ನೋವುಗಳು ಇಂದಿಗೂ ಪರಿಹಾರವಾಗಿಲ್ಲ. ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿ ಭೂಮಿಯ ಮೇಲೆ ಅಣುಬಾಂಬ್ ದಾಳಿಯ ವಿಕಿರಣದಿಂದಾಗಿ ಇವತ್ತಿಗೂ ಜನ ತತ್ತರಿಸಿ ಹೋಗಿದ್ದಾರೆ.
ಹೊಸ ಜೀವಿಗಳು ಹುಟ್ಟುವ ವೇಳೆಯಲ್ಲಿಯೂ ಅಂಗವೈಕಲ್ಯತೆಯಿಂದ ಕೂಡಿದೆ. ಭೂಮಿಯ ಮೇಲೆ ಹವ್ಯಾಹತವಾದ ಪರಿಣಾಮ ಬೀರುತ್ತಿದೆ.ಇವತ್ತಿನ ಶಸ್ತ್ರಾಸ್ತ್ರಗಳ ಆರ್ಭಟದಿಂದಲೂ ಹೆಚ್ಚು ಸಾವುನೋವುಗಳು ಸಂಭವಿಸುತ್ತಿವೆ.
ಮಧ್ಯ ಪ್ರಾಚ್ಯ ಯುದ್ಧದ ಕೇಂದ್ರದಿಂದ ಭಾರತ ದೂರದಲ್ಲಿದ್ದರೂ ಸಹ ಭಾರತದ ಮೇಲೆ ದೊಡ್ಡ ಪರಿಣಾಮ ಬೀರಿದೆ.ಬಡಬಗ್ಗರ ಬದುಕು ಸಹ ಕಷ್ಟಕರವಾಗಿದೆ.
ಬಹುದೊಡ್ಡ ಕೈಗಾರಿಕೆಗಳು ನಿಂತಿವೆ.ಯುಧ್ಧಕ್ಕೆ ಒಳಗಾದ ಭೂಪ್ರದೇಶ ಬಂಜರಾಗುತ್ತಿವೆ.ಲಕ್ಷಾಂತರ ಸೇತುವೆಗಳು,ಅಣೆಕಟ್ಟುಗಳು,ಕೈಗಾರಿಗಳು ನಾಶವಾಗಿವೆ.ಆಗಾಗೀ ಸಮಾಜಕ್ಕೆ,ದೇಶಕ್ಕೆ,ವಿಶ್ವಕ್ಕೆ ಯುದ್ಧಗಳು ಅವಶ್ಯಕವಲ್ಲ.ಶಾಂತಿ ನೆಲೆಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸೋಮಶೇಖರ್, ಶ್ರೀಧರ್, ಸೆನೆಟ್ ಮಾಜಿ ಸದಸ್ಯ ಗೋಪಿನಾಥ್, ಮಾಜಿ ಮಹಾಪೌರ ಟಿ.ಬಿ.ಚಿಕ್ಕಣ್ಣ, ಪಾಲಿಕೆ ಮಾಜಿ ಸದಸ್ಯರಾದ ಜೆ.ಗೋಪಿ, ಎಂ.ಸುನೀಲ್, ಅನಂತ್, ಆರ್.ಹೆಚ್.ಕುಮಾರ್,ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ, ಸಾಗರೋತ್ತರ ಕನ್ನಡ ಸಂಘದ ರವಿ, ಜೈ ಭಾರತ್ ಸಂಘಟನೆಯ ಅಧ್ಯಕ್ಷ ಕಲೀಂ ಷರೀಫ್, ಮುಖಂಡರಾದ ಜೋಗಿ ಮಹೇಶ್,ಪಟಾಕಿ ಮಂಜುನಾಥ್, ಹೇಮಂತ್ , ಪುಟ್ಟಣ್ಣ, ರಾಮ್, ಉಪಾಧ್ಯಕ್ಷ ಪುಟ್ಟಸ್ವಾಮಿ, ಜಗನ್ನಾಥ್ ಭೋವಿ,ಆನಂದ್,ಮೊಹಿಬ್ ಷರೀಫ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜೆ.ವಿನಯ್, ಸದಸ್ಯರಾದ ಡೈರಿ ವೆಂಕಟೇಶ್,ಇಂದಿರಾ, ಮುಖಂಡರಾದ ರವಿಶಂಕರ್, ಆಶ್ರಯ ಸಮಿತಿ ಸದಸ್ಯ ಗುಣಶೇಖರ್, ಮಹ್ಮದ್ ಫಾರೂಖ್,ಮಾಜಿ ಸದಸ್ಯರಾದ ನಾಸೀರ್,ಶಾದಿಖ್ ಉಲ್ಲಾ ರೆಹಮಾನ್,ಯುವ ಕಾಂಗ್ರೆಸ್ ಅಧ್ಯಕ್ಷ ಹೊಯ್ಸಳ, ಉಪಾಧ್ಯಕ್ಷರಾದ ರಾಕೇಶ್, ನವೀನ್ ಎಂ ಕೆಂಪಿ,ಶಶಾಂಕ್, ಕಾರ್ತಿಕ್,ವಿಶ್ವನಾಥ್ (ವಿಶ್ವ), ನಾಗರತ್ನ ಮಂಜುನಾಥ್, ಮಹದೇವಮ್ಮ, ನಾಗರತ್ನ ನಾಗರಾಜು,ಪುಟ್ಟತಾಯಮ್ಮ ಶಿವಣ್ಣ,ಸುಬ್ಬಮ್ಮ, ಲಕ್ಷ್ಮಿ,ಫಿರ್ದೋಸ್ ಭಾನು,ಟ್ರೇಡ್ ಯೂನಿಯನ್ ಕಾಂಗ್ರೆಸ್ ಅಧ್ಯಕ್ಷರಾದ ಮದನ್, ರೂಪೇಶ್,ಸಿದ್ದರಾಮು, ರವೀಶ್,ಚಿಕ್ಕಲಿಂಗು, ವಸಂತ್ , ಸತೀಶ್ ನಾಯಕ್,ಚಂದ್ರಶೇಖರ್,ಮೋಹನ್,ಮೈಸೂರು ಬಸವಣ್ಣ ,ಲಖನ್, ಮಧುರಾಜ್, ಶೇಖರ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.












