--Ads--

ವಿಜೃಂಭಣೆಯಿಂದ ನಡೆದ ಶ್ರೀಗಂಗಾದೇವಿ ಅಮ್ಮನವರ ಜಾತ್ರಾ ಮಹೋತ್ಸವ

On: March 26, 2026 7:21 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ವಿಜೃಂಭಣೆಯಿಂದ ನಡೆದ ಶ್ರೀಗಂಗಾದೇವಿ ಅಮ್ಮನವರ ಜಾತ್ರಾ ಮಹೋತ್ಸವ

ಶಿಡ್ಲಘಟ್ಟ : ತಾಲ್ಲೂಕಿನ ಮೇಲೂರಿನಲ್ಲಿ
ಗ್ರಾಮದೇವತೆಯಾದ ಶ್ರೀಗಂಗಾದೇವಿ ಅಮ್ಮನವರ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.

ಅಮ್ಮನವರಿಗೆ ವಿವಿಧ ಅಲಂಕಾರಗಳು, ಪೂಜೆ ಹಾಗು ಗ್ರಾಮದ ರಾಜ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರಗಳೊಂದಿಗೆ ಜಾತ್ರಾ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ನಡೆಯಿತು.

ವಾಲ್ಮೀಕಿ ಮತಸ್ಥರಿಂದ ಪ್ರತಿವರ್ಷದಂತೆ ನಡೆಸುವ ಸೊಪ್ಪಿನ ತೇರು ವ್ರತಕ್ಕೆ ಹಲವಾರು ಭಕ್ತರು ಪಾಲ್ಗೊಂಡಿದ್ದರು.

 

ದೀಪೋತ್ಸವದ ಜಾತ್ರಾ ಮಹೋತ್ಸವಕ್ಕೆ ಮಳ್ಳೂರುಚೌಡಸಂದ್ರ,ಕೊಂಡೇನಹಳ್ಳಿ,ಕಂಬದಹಳ್ಳಿ,ಗಂಗನಹಳ್ಳಿ,ಭಕ್ತರಹಳ್ಳಿ,ಕಾಚಹಳ್ಳಿ, ಹಂಡಿಗನಾಳ,ಕೇಶವಾರ ಹಾಗು ಇನ್ನೀತರ ಗ್ರಾಮಗಳ ಭಕ್ತಾದಿಗಳು ಪಾಲ್ಗೊಂಡಿದ್ದರು.

ರಾತ್ರಿ ನಡೆದ ಪೂಜಾ ಕಾರ್ಯಗಳಲ್ಲಿ ಗ್ರಾಮಸ್ಥರು ಭಾಗಿಯಾದರು,ನಂತರ ಗ್ರಾಮದಲ್ಲಿ ಏರ್ಪಡಿಸಲಾ-ಗಿದ್ದ ವಾದ್ಯಗೋಷ್ಠಿ ಮನರಂಜಿಸಿತು,ದೇವಾಲಯದಲ್ಲಿ ಗಂಗಾದೇವಿಯ ಅಮ್ಮನವರನ್ನು ವಿಷೇಷ ಹೂವಿನ ಅಲಂಕಾರ ,ವಿದ್ಯುತ್ ದೀಪಾಲಂಕಾರ ಹಾಗು ಬೆಳಗಿನ ಜಾವ ತಂಬಿಟ್ಟು ದೀಪಾರತಿಗಳು ನಡೆದವು. ಸುತ್ತಮುತಲಿನ ಗ್ರಾಮಗಳಿಂದ ಆಗಮಿಸಿದ್ದ ಮಹಿಳೆಯರು ತಂಬಿಟ್ಟು ದೀಪಗಳನ್ನು ತಂದು ದೇವಿಗೆ ಬೆಳಗಿನ ಪೂಜೆ ಸಲ್ಲಿಸಿದರು.

WhatsApp

Join Now

Telegram

Join Now

Instagram

Join Now