--Ads--

ಪ್ರಧಾನ ಮಂತ್ರಿ ನೇತೃತ್ವದಲ್ಲಿ ನಡೆಸಿದ ವಿಡಿಯೊ ಸಂವಾದದಲ್ಲಿ :-ಆಹಾರ ಸಚಿವ ಕೆಹೆಚ್. ಮುನಿಯಪ್ಪ ಭಾಗಿ

On: March 28, 2026 12:52 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಪ್ರಧಾನ ಮಂತ್ರಿ ನೇತೃತ್ವದಲ್ಲಿ ನಡೆಸಿದ ವಿಡಿಯೊ ಸಂವಾದದಲ್ಲಿ : ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಭಾಗಿ

ವಿಧಾನ ಸೌಧ 27

ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ವಿಡಿಯೋ ಸಂವಾದದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಭಾಗವಹಿಸಿದರು.

ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯಗಳ ನಡುವೆ ನಡೆದ ಸಮನ್ವಯದಂತೆ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದು ಕೊಂಡು ನಿರ್ವಹಿಸಿದಾಗೆ ಈಗ ಯುದ್ದ ನಡೆಯುತ್ತಿರುವ ಪರಿಸ್ಥಿತಿಯನ್ನು ನಾವು ಎದುರಿಸಲು ಬದ್ದರಾಗಿದ್ದು ಯಾವುದೇ ಆತಂಕ ಪಡುವಾಗಿಲ್ಲಾ ಎಂದರು

ರಾಜ್ಯದಲ್ಲಿ ಅಡಿಗೆ ಅನಿಲ ಸಮಸ್ಯೆಗಳ ಕುರಿತು ಚರ್ಚಿಸಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಬೇಕಾಗುವಷ್ಟು ಅಡಿಗೆ ಅನಿಲವನ್ನು ಪೂರೈಸಲಿದ್ದು ನಾಗರಿಕರು ಆತಂಕ ಪಡುವಂತಿಲ್ಲ ಎಂಬುದಾಗಿ ವಿವರಿಸಿದರು

ಸಚಿವರು ಮಾತನಾಡಿ ಹಾಗೆಯೇ ಹೊಟೆಲ್ ಗಳಿಗೆ ನೀಡುತ್ತಿರುವ 20% ರಷ್ಟು ಅಡಿಗೆ ಅನಿಲ ನೀಡುತ್ತಿದ್ದು ಇನ್ನೂ 20% ರಷ್ಟು ಹೆಚ್ಚಿಸಲು ಮಾನ್ಯ ಸಚಿವರು ಸಭೆಯಲ್ಲಿ ಒತ್ತಾಯಿಸಿದರು. ಸೋಲಾರ್ ಇಂಧನ ಹಾಗೂ ಭಯೊ ಅನಿಲ ಉತ್ಪಾದನೆಗೆ ಹೆಚ್ವಿನ ಒತ್ತು ನೀಡಿದ್ದಲ್ಲಿ ಆಯಾ ರಾಜ್ಯಗಳೆ ಹೆಚ್ವಿನ ಇಂಧನ ಉತ್ಪಾದನೆಗೆ ಸಹಕಾರಿಯಾಗಲಿದ್ದು ಇದರ ಕುರಿತು ಕ್ರಮವಹಿಸಲು ಸಭೆಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಶ್ರೀಮತಿ ಶಾಲನಿ ರಜನೀಶ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now