ವಿಜಯ ದರ್ಪಣ ನ್ಯೂಸ್…..
ಎಂ ಎಂ ಕೆ ಮತ್ತು ಆರ್ ಆರ್ ಸುದ್ದಿ ವಾಹಿನಿಗಳ ಲೋಕಾರ್ಪಣೆ…
ಭ್ರಷ್ಟಾಚಾರ ಪ್ರಕರಣಗಳು ತೀರ್ಪುಗಳ ವಿಳಂಬದಿಂದಾಗಿ ಮಹತ್ವ ಕಳೆದುಕೊಳ್ಳುತ್ತಿವೆ: ನ್ಯಾಯಮೂರ್ತಿ ಸಂತೋಷ್ ಹೆಗಡೆ

ದೇವನಹಳ್ಳಿ : ರಾಜ್ಯದಲ್ಲಿ ಲೋಕಾಯುಕ್ತರು ಪತ್ತೆ ಮಾಡಿ ದಾಖಲಿಸಲಾದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಬೆರಳೆಣಿಕೆಯಷ್ಟು ಮಂದಿಗೆ ಬಹುತೇಕ ಪ್ರಕರಣಗಳ ಖುಲಾಸೆ ಹಾಗೂ ಹಲವಾರು ದಾವೆಗಳ ಇತ್ಯರ್ಥ ವಿಳಂಬಕ್ಕೆ ಸಂಬಂದಿಸಿದಂತೆ ಕಳವಳ ವ್ಯಕ್ತಪಡಿಸಿ ನ್ಯಾಯಮೂರ್ತಿ ಸಂತೋಷ್ ಹೆಗಡೆ ಯವರು ದೇವನಹಳ್ಳಿಯಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ತಮ್ಮ ಭಾವನೆ ಹಂಚಿಕೊಂಡರು..
ಪಟ್ಟಣದ ಬೈಚಾಪುರ ರಸ್ತೆಯ ಡಾ ಬಿ.ಆರ್.ಅಂಬೇಡ್ಕರ್ ಭವನದ ಸಮೀಪ ಪತ್ರಕರ್ತರಾದ ರಾಧಾಕೃಷ್ಣ , ರಾಜು ಅಗಸ್ತ್ಯ , ಮಂಜುನಾಥ ಇವರುಗಳ ಸಹಭಾಗಿತ್ವದಲ್ಲಿರುವ ಎಂ ಎಂ ಕೆ ಮತ್ತು ಆರ್ ಆರ್ ಖಾಸಗಿ ವಾಹಿನಿಯ ಕಚೇರಿ ಉದ್ಘಾಟನೆಯನ್ನು ನೆರವೇರಿಸಿದ ಸಂತೊಷ್ ಹೆಗ್ಗಡೆಯವರು ಬಳಿಕ ಬಳಿಕ ಮಾತನಾಡಿ, ನಮ್ಮ ಅವಧಿಯಲ್ಲಾಗಿರಬಹುದು ಅಥವಾ ಇನ್ನಿತರೆ ನ್ಯಾಯಮೂರ್ತಿಗಳು ಅಧಿಕಾರಿಗಳ ಅವಧಿಯಲ್ಲಾಗಿರಬಹುದು ಶ್ರಮ ವಹಿಸಿ ಪತ್ತೆ ಹಚ್ಚಿ ದಾಖಲಿಸಲಾದ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂದಿಸಿದಂತೆ ವಿಳಂಬವಾಗಿ ತೀರ್ಪುಗಳು ಹೊರ ಬೀಳುವವವೇಳೆಗೆ ಅದರ ಮಹತ್ವ ಕಳೆದುಕೊಂಡಿರುತ್ತದೆ.
ಅದೇ ರೀತಿ ವಿಳಂಬವಾದಾಗ ಹೆಚ್ಚಿನ ಪ್ರಕರಣಗಳು ಖುಲಾಸೆಗೊಂಡಿವೆ ಮತ್ತು ವಿಳಂಬ ವಿಚಾರಣೆಯಿಂದಾಗಿ ಹಲವಾರು ಪ್ರಕರಣಗಳು ವರ್ಷಗಳೂ ಕಳೆದರೂ ಇತ್ಯರ್ಥಗೊಳ್ಳದೇ ಬಾಕಿ ಉಳಿದಿವೆ. ಭ್ರಷ್ಟಾಚಾರಿಗಳಿಗೆ ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಎಂದಾದರೆ ಆರು ತಿಂಗಳೊಳಗೆ ತೀರ್ಪುಗಳು ಹೊರಬೀಳಬೇಕು ಆಗ ಕ್ರಮಿನಲ್ ಕೇಸ್‌ಗಳ ಶಿಕ್ಷೆಯ ಮಹತ್ವ ಉಳಿಯಲಿದೆ ಇದರಿಂದ ಇತರೇ ಭ್ರಷ್ಟರಿಗೂ ಭಯ ಉಂಟಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳು ನಾಲ್ಕನೇ ಅಂಗ ಎಂದು ಹೇಳಲಾಗುತ್ತದೆ ಆದರೆ ಇಂದು ಕೆಲಸ ಬಹುತೇಕ ದೃಶ್ಯ ಮಾದ್ಯಮಗಳು ಟಿ.ಆರ್.ಪಿಗಾಗಿ ಸುದ್ದಿಗಳ ಮೇಲೆ ಅವಲಂಬಿತರಾಗಿರುವುದು ಮತ್ತು ಕೆಲವು ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳು ಕೆಲವು ರಾಜಕೀಯ ಪಕ್ಷಗಳಿಗೆ ಸೇರಿದ್ದಾಗಿರುತ್ತವೆ. ಒಬೊಬ್ಬರ ಮುಖವಾಣಿಯಂತೆ ಕೆಲಸ ಮಾಡುವುದರಿಂದ ಕೆಲ ಸುದ್ದಿಗಳು ಪೆಯಿಂಟೆಡ್ ಸುದ್ದಿಗಳಾಗಿರುತ್ತವೆ ಹಾಗಾಗಿ ಅದರ ವಿಶ್ವಾಸಾರ್ಹತೆ ಜನಸಮಾನ್ಯರು ನ್ಯಾಯಾಂಗ ವ್ಯವಸ್ಥೆ ಹಾಗೂ ಪತ್ರಿಕಾರಂಗದ ಮೇಲೆ ನಂಬಿಕೆ ವಿಶ್ವಾಸ ಇಟ್ಟುಕೊಂಡಿವೆ ಈ ನಿಟ್ಟಿನಲ್ಲಿ ಕಳೆದುಕೊಳ್ಳುತ್ತಿವೆ.
ಇಂದಿಗೂ ಜನಸಾಮಾನ್ಯರ ಧ್ವವಿಯಾಗಿ ಜನಪರ ಕಾಳಜಿಯೊಂದಿಗೆ ಮಾದ್ಯಮಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಿದಾಗ ಜನರ ಮನಸ್ಸಿನಲ್ಲಿ ಉಳಿಯುತ್ತವೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ರಾಜ್ಯ ಉಪಾಧ್ಯಕ್ಷ ಮಂಡಿಬೆಲೆ ರಾಜಣ್ಣ ಸುದ್ದಿ ವಾಹಿನಿಗಳ ಮುಖ್ಯಸ್ಥರಿಗೆ ಮತ್ತು ತಂಡಕ್ಕೆ ಶುಭ ಹಾರೈಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್.ಕೃಷ್ಣಪ್ಪ, ಜಿಲ್ಲಾ ಪ್ರಧಾನಕಾರ್ಯದರ್ಶಿ ರಮೇಶಕುಮಾರ್, ಬಿಜೆಪಿ ತಾಲೂಕು ಮಂಡಲದ ಅಧ್ಯಕ್ಷ ಎನ್.ಎಲ್ ಅಂಬರೀಶಗೌಡ, ಪತ್ರಕರ್ತರಾದ ಶಾಂತಮೂರ್ತಿ, ಎಂ ಆರ್ ನಾಗರಾಜ್, ಡಿ ಎನ್ ನಾರಾಯಣಸ್ವಾಮಿ. ನರಸಿಂಹಮೂರ್ತಿ, ಚಲನ ಚಿತ್ರ ನಿರ್ದೇಶಕ ಯಲಿಯೂರು ಪಿಳ್ಳೆ ಗೌಡ, ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮುನಿಕೃಷ್ಣ ತಮ್ಮಯ್ಯ, ಖಾಸಗಿ ವಾಹಿನಿಯ ಮುಖ್ಯಸ್ಥರಾದ ಮಂಜುನಾಥ್, ಜಿ.ರಾಧಾಕೃಷ್ಣ, ರಾಜು ಅಗಸ್ತ್ರ, ಶರಣಯ್ಯ ಕೃಷಿಕ ಸಮಾಜದ ಅಧ್ಯಕ್ಷ ಶ್ರೀನಿವಾಸಗೌಡ, ಶಿಲ್ಪಿ ಮಧುಸೂಧನ್ ಆಚಾರ್ಯ, ಹಿರೇಮಠ್, ಖಾದಿ ಬೋರ್ಡ್ ಮಾಜಿ ಜಿ ಅಧ್ಯಕ್ಷ ಲಕ್ಷಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.











