--Ads--

ಇಂದಿರಾ ಕ್ಯಾಂಟೀನ್ ನಲ್ಲಿ, ಸೌದೆಯಿಂದ ಅಡುಗೆ ತಯಾರಿ, ಸಿಲಿಂಡರ್

On: March 31, 2026 8:44 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಇಂದಿರಾ ಕ್ಯಾಂಟೀನ್ ನಲ್ಲಿ, ಸೌದೆಯಿಂದ ಅಡುಗೆ ತಯಾರಿ, ಸಿಲಿಂಡರ್ ಪೂರೈಕೆಗೆ ಒತ್ತಾಯ

ವಿಜಯಪುರ: ವಾಣಿಜ್ಯ ಸಿಲಿಂಡರುಗಳ ಕೊರತೆಯಿಂದಾಗಿ ಹೊಟೇಲ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿರುವುದು ಒಂದೆಡೆಯಾದರೆ, ಸಿಲಿಂಡರುಗಳ ಅಭಾವದ ಬಿಸಿ, ಇಂದಿರಾ ಕ್ಯಾಂಟಿನ್ ಗೂ ತಟ್ಟಿದೆ.

ಪಟ್ಟಣದ ಇಂದಿರಾ ಕ್ಯಾಂಟೀನ್ ಗೆ ವಾಣಿಜ್ಯ ಸಿಲಿಂಡರುಗಳ ಪೂರೈಕೆಯಾಗದ ಕಾರಣ, ಇಲ್ಲಿನ ಅಡುಗೆ ಸಿಬ್ಬಂದಿಯವರು, ಒಂದು ಲೋಡು ಸೌದೆಗೆ 6 ಸಾವಿರ ಕೊಟ್ಟು, ಖರೀದಿಸಿದ್ದಾರೆ.

ಇಲ್ಲಿ, ಇಂದಿರಾ ಕ್ಯಾಂಟಿನ್ ಆರಂಭವಾದಾಗಿನಿಂದ, ಕಟ್ಟಡ ನಿರ್ಮಾಣದ ಕಾರ್ಮಿಕರು, ಗೂಡು ಹೊರುವ ಹಮಾಲಿ ಕಾರ್ಮಿಕರು, ಸೇರಿದಂತೆ ಪ್ರತಿನಿತ್ಯ ಸಾವಿರಾರು ಮಂದಿ ಕೂಲಿ ಕಾರ್ಮಿಕರು ಬಂದು, ಇಲ್ಲಿ ಊಟ ಮಾಡಿಕೊಂಡು ಹೋಗುತ್ತಾರೆ. ಬೆಳಿಗ್ಗೆ 7.30 ಕ್ಕೆ ತಿಂಡಿ ರೆಡಿಯಾಗಿರಬೇಕು, ಮಧ್ಯಾಹ್ನ 12.30 ಕ್ಕೆ ಊಟ ತಯಾರಾಗಬೇಕು, ಸಂಜೆ 7 ಗಂಟೆಗೆ ಊಟ ಸಿದ್ಧಪಡಿಸಬೇಕು. ಕಳೆದ ಒಂದು ವಾರದಿಂದ ಸಿಲಿಂಡರುಗಳು ಪೂರೈಕೆಯಾಗಿಲ್ಲದ ಕಾರಣ. ಸೌದೆಯಲ್ಲೆ ಅಡುಗೆ ತಯಾರಿಸುತ್ತಿದ್ದಾರೆ.

ಸುಡುವ ಬಿಸಿಲಿನಲ್ಲೆ ನಿಂತು, ಹೊಗೆಯಲ್ಲಿ ಅಡುಗೆ ತಯಾರು ಮಾಡುತ್ತಿರುವ ಸಿಬ್ಬಂದಿಗೆ ತುಂಬಾ ಕಷ್ಟವಾಗುತ್ತಿದೆ. ಅಡುಗೆ ತಯಾರಿಸುವ ಜಾಗದಲ್ಲಿ ಮೇಲ್ಛಾವಣಿ ಇಲ್ಲದ ಕಾರಣ, ಸುಡುವ ಬಿಸಿಲಿನಲ್ಲಿ, ಹೊಗೆಯಲ್ಲಿ ಅಡುಗೆ ತಯಾರಿಸುವಾಗ, ಕಣ್ಣುಗಳು, ಉರಿ ಬರುತ್ತಿವೆ. ವಿಧಿಯಿಲ್ಲದೆ ತಯಾರಿಸುತ್ತಿದ್ದಾರೆ.

ಗ್ರಾಹಕರು ಬಂದು, ಇಡ್ಲಿ, ಚಪಾತಿ, ಕೇಳ್ತಾರೆ. ಸಿಲಿಂಡರ್ ಇಲ್ಲದ ಕಾರಣ, ಒಲೆಯಲ್ಲಿ ತಯಾರಿಸಲು ಸಾಧ್ಯವಾಗದ ಕಾರಣ, ಹೊರಗಿನಿಂದ ರೆಡಿಮೇಡ್ ಚಪಾತಿ ತರಿಸಿಕೊಡುತ್ತಿದ್ದೇವೆ. ಕ್ಯಾಂಟೀನ್ ನಲ್ಲಿ ಚಪಾತಿ ಸುಡುವ ಮಿಷನ್ ಕೆಲಸ ಮಾಡುತ್ತಿಲ್ಲ. ನಮಗೆ ಸಾಧ್ಯವಾದಷ್ಟು ಬೇಗ ನಮಗೆ ಸಿಲಿಂಡರ್ ಪೂರೈಕೆ ಮಾಡಿ ಎಂದು ಇಲ್ಲಿನ ಸಿಬ್ಬಂದಿ ಮನವಿ ಮಾಡಿಕೊಂಡಿದ್ದಾರೆ.

ಲೇಟಾದರೆ ಗ್ರಾಹಕರ ಆಕ್ರೋಶ: ತಿಂಡಿ, ಊಟವನ್ನು ನಿಗದಿತ ಸಮಯಕ್ಕೆತಯಾರಿಸಿ ಕೊಡಬೇಕು, ಇಲ್ಲವಾದರೆ, ಗ್ರಾಹಕರು ನಮ್ಮ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ತಿಂಡಿ ಕೊಡುವುದು ತಡವಾದರೆ, 4 ಗಂಟೆಗೆ ಎದ್ದು ತಯಾರಿಸಬೇಕು ಅಂತಾರೆ. ನಾವೂ ಮನುಷ್ಯರಲ್ಲವೇ, ಮೂರು ಜನ ಇದ್ದೇವೆ. ಸೌದೆಯಲ್ಲಿ ಮಾಡುವುದರಿಂದ ಸ್ವಲ್ಪ ತಡವಾಗುತ್ತದೆ. ಆದರೂ ನಾವು ರಾತ್ರಿ 10 ಗಂಟೆಯವರೆಗೂ ಊಟ ಕೊಡುತ್ತಿದ್ದೇವೆ. ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸೌದೆಗೆ ಡಿಮ್ಯಾಂಡ್: ಒಣಗಿರುವ ಸೌದೆ ಸಿಗುತ್ತಿಲ್ಲ. ಮಂಡಿಗಳಲ್ಲಿ ಹಸಿ ಸೌದೆ ಮಾರಾಟ ಮಾಡ್ತಾರೆ. ಹಸಿಸೌದೆ ತೂಕವೂ ಜಾಸ್ತಿ ಬರುತ್ತೆ, ಬೇಗನೇ ಉರಿಯುವುದಿಲ್ಲ. ಆದ್ದರಿಂದ ಅಡುಗೆ ತಯಾರಿಸುವುದು ಸ್ವಲ್ಪ ತಡವಾಗುತ್ತಿದೆ ಎನ್ನುತ್ತಾರೆ.

ಶಾಲಾ ಮಕ್ಕಳಿಗೂ ತೊಂದರೆ: ಇಂದಿರಾ ಕ್ಯಾಂಟಿನ್ ಸುತ್ತ ಶಾಲೆಗಳಿವೆ. ನೂರಾರು ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಸೌದೆ ಒಲೆಯಲ್ಲಿ ಅಡುಗೆ ತಯಾರಿಸುವಾಗ, ಇದರಿಂದ ಹೊರ ಬರುತ್ತಿರುವ ಹೊಗೆಯಿಂದ, ಶಾಲೆಯಲ್ಲಿನ ಮಕ್ಕಳಿಗೂ ತೊಂದರೆಯಾಗುತ್ತಿದೆ.

ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಆಹಾರ ತಯಾರಿಸುವುದು ಕಷ್ಟವಾಗುತ್ತಿದೆ. ನಾವು, 4200 ರೂಪಾಯಿಗೆ ಒಂದು ಸಿಲಿಂಡರ್ ಖರೀದಿಸಿಕೊಂಡು ಬಂದು ಅಡುಗೆ ತಯಾರಿಸುತ್ತಿದ್ದೇವು. ಈಗ ಸಿಲಿಂಡರ್ ಸಿಗುತ್ತಿಲ್ಲ. ನಮಗೂ ಊಟವಿಲ್ಲದೆ, ಹೊರಗೆ ಹೋಗಿ ಹೊಟೇಲ್ ನಲ್ಲಿ ಊಟ ಮಾಡಿದ್ದೇವೆ.

ಚನ್ನಬಸವ ಅಡುಗೆ ತಯಾರಕ ಇಂದಿರಾ ಕ್ಯಾಂಟೀನ್.

 

WhatsApp

Join Now

Telegram

Join Now

Instagram

Join Now