--Ads--

ಅದ್ದೂರಿಯಾಗಿ ನಡೆದ ಶ್ರೀಗಂಗಾದೇವಿ ಅಮ್ಮನವರ ರಥೋತ್ಸವ

On: April 3, 2026 7:19 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಅದ್ದೂರಿಯಾಗಿ ನಡೆದ ಶ್ರೀಗಂಗಾದೇವಿ ಅಮ್ಮನವರ ರಥೋತ್ಸವ

 

ಶಿಡ್ಲಘಟ್ಟ : ತಾಲ್ಲೂಕಿನ ಮೇಲೂರು ಗ್ರಾಮದ ಸುಪ್ರಸಿದ್ಧ ಶ್ರೀಗಂಗಾದೇವಿ ಅಮ್ಮನವರ ರಥೋತ್ಸವವು ಅದ್ದೂರಿಯಾಗಿ ನೆರವೇರಿತು, ವಿವಿಧ ಜಾನಪದ ಕಲಾತಂಡಗಳು, ತಮಟೆಗಳ ವಾದನ, ಗಾರುಡಿ ಬೊಂಬೆಗಳ ನರ್ತನಗಳು ನೋಡುಗರ ಕಣ್ಮನ ಸೆಳೆದವು.
ರಥೋತ್ಸವದ ಅಂಗವಾಗಿ ದೇವಾಲಯವನ್ನು ಜೋಳದ ತೆನೆಗಳು ಹಾಗೂ ವಿವಿಧ ಹೂವುಗಳಿಂದ ಶೃಂಗಾರ ಮಾಡಲಾಗಿತ್ತು.

ಹೋಮ ,ಹವನ ಹಾಗುಬಲೋಕ ಕಲ್ಯಾಣಾರ್ಥವಾಗಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು,
ಶ್ರೀ ಗಂಗಾದೇವಿಗೆ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರಗಳೊಂದಿಗೆ ಪೂಜೆ ಸಮರ್ಪಿಸಲಾಯಿತು.
ನೆರೆದಿದ್ದ ಭಕ್ತರು ರಥಕ್ಕೆ ದವನದೊಂದಿಗಿನ ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು.

ಸುತ್ತಮುತ್ತಲಿನ ಹಳ್ಳಿಗಳಿಂದ ಬಂದಿದ್ದ ಭಕ್ತರಿಗೆ ಕೋಸಂಬರಿ ಮತ್ತು ಪಾನಕ ವಿತರಿಸಲಾಯಿತು. ದೇವಾಲಯದಿಂದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

 

ಸುತ್ತಮುತ್ತಲಿನ ಗ್ರಾಮಗಳಾದ ಮಳ್ಳೂರು, ಕಂಬದಹಳ್ಳಿ, ಚೌಡಸಂದ್ರ, ಗಂಗನಹಳ್ಳಿ,ಮಳ್ಳೂರು, ಮುತ್ತೂರು, ಭಕ್ತರಹಳ್ಳಿ, ಕೇಶವಾರ, ಹಂಡಿಗನಾಳ ,ಮುಂತಾದ ಕಡೆಗಳಿಂದ ಭಕ್ತರು ಆಗಮಿಸಿದ್ದರು.

ಈ ವೇಳೆ ಶಾಸಕ ಬಿ.ಎನ್.ರವಿಕುಮಾರ್, ಆರ್‌.ಕೆ.ರಾಮಕೃಷ್ಣಪ್ಪ, ಜೇಜಿಗೌಡ ,ಗ್ರಾಮ ಪಂಚಾಯತಿ ಸದಸ್ಯರಾದ ಆರ್.ಎ.ಉಮೇಶ್, ಎಂ.ಕೆ.ರವಿಪ್ರಸಾದ್, ಎಂ.ಜೆ.ಶ್ರೀನಿವಾಸ್, ಡಾ.ರಾಜ್‌ಕುಮಾರ್ ಅಭಿಮಾನಿ ಸಂಘದ ಧರ್ಮೇಂದ್ರ, ಗೋಪಾಲ್, ಸುದರ್ಶನ್,ರೂಪೇಶ್,ಸುದೀರ್, ಶ್ರೀನಿವಾಸಮೂರ್ತಿ, ಶಿವಕುಮಾರ್,ಗೋಪಾಲರೆಡ್ಡಿ, ಎಂ.ಶ್ರೀನಿವಾಸ್, ಎಸ್.ಆರ್.ಶ್ರೀನಿವಾಸಮೂರ್ತಿ, ರಮೇಶ್, ಎನ್.ಎಲ್.ಎನ್‌.ಮೂರ್ತಿ, ಅರ್ಚಕರಾದ ಮುತ್ತೂರು ನಾರಾಯಣಮೂರ್ತಿ, ಅಮೃತರಾಜ್‌ ಹಾಜರಿದ್ದರು.

WhatsApp

Join Now

Telegram

Join Now

Instagram

Join Now