ವಿಜಯ ದರ್ಪಣ ನ್ಯೂಸ್…..
ವಿಜೃಂಭಣೆಯಿಂದ ನಡೆದ ಶ್ರೀದೌಪದಮ್ಮ ಧರ್ಮರಾಯಸ್ವಾಮಿ ಹಸಿ ಕರಗ ಮಹೋತ್ಸವ

ಶಿಡ್ಲಘಟ್ಟ : ತಾಲ್ಲೂಕಿನ ಮೇಲೂರಿನ ವಹ್ನಿಕುಲ ಕ್ಷತ್ರಿಯರ (ತಿಗಳರ) ಟ್ರಸ್ಟ್ ವತಿಯಿಂದ ಶ್ರೀದೌಪದಮ್ಮ ಧರ್ಮರಾಯಸ್ವಾಮಿ ಹಸಿ ಕರಗ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು.
ಕರಗದ ಪೂಜಾರಿ ಅಭಿಲಾಷ್ ಹಸಿಕರಗ ಹೊತ್ತು ಗ್ರಾಮದ ಚಂಗಲರಾಯರೆಡ್ಡಿ ವೃತ್ತದಲ್ಲಿ ತಮಟೆ ವಾದನ, ಮಂಗಳವಾದ್ಯಗಳ ವಾದನಕ್ಕೆ ತಕ್ಕಂತೆ ನೃತ್ಯ ಮಾಡಿ ನೆರದಿದ್ದವರ ಮನರಂಜಿಸಿದರು.
ಆನಂತರ ಶ್ರೀಗಂಗಾದೇವಿ ದೇವಾಲಯ, ಶ್ರೀ ಉಮಾಮಹೇಶ್ವರ ದೇವಾಲಯ ಸೇರಿದಂತೆ ಗ್ರಾಮದ ಎಲ್ಲಾ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಸಿ ಕರಗವು ಸಾಗಿತು ,
ವೀರಕುಮಾರರು ಕರಗ ಹಿಂಬಾಲಿಸಿ, ಅಲಗು ಸೇವೆ ಮಾಡಿದರು, ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಜನ ಕರಗ ವೀಕ್ಷಣೆ ಮಾಡಿದರು.
ವಗ್ನಿಕುಲ ಕ್ಷತ್ರಿಯರ ಟ್ರಸ್ಟ್‌ನ ಹಿರಿಯರು, ಗ್ರಾಮದ ಮುಖಂಡರು ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡಿದ್ದರು.










