--Ads--

ಬಣ್ಣಾರಿ ಸಕ್ಕರೆ ಕಾರ್ಖಾನೆ ಮುಟ್ಟುಗೋಲಿಗೆ ಕಬ್ಬು ಬೆಳೆಗಾರರ ಆಗ್ರಹ

On: April 7, 2026 4:23 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಬಣ್ಣಾರಿ ಸಕ್ಕರೆ ಕಾರ್ಖಾನೆ ಮುಟ್ಟುಗೋಲಿಗೆ ಕಬ್ಬು ಬೆಳೆಗಾರರ ಆಗ್ರಹ

ಮೈಸೂರು ತಾಂಡವಪುರ ಏಪ್ರಿಲ್ 7: ಕಬ್ಬಿನ ಹೆಚ್ಚುವರಿ ಹಣ ಟನ್‌ಗೆ ನೂರು ರೂಪಾಯಿ ಪಾವತಿ ಮಾಡದ ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಅಳಗಂಚಿ ಮಲ್ಲುಪುರ ಗ್ರಾಮದ ಬಳಿ ಇರುವ ಬಣ್ಣಾರಿ ಸಕ್ಕರೆ ಕಾರ್ಖಾನೆಯ, ದಾಸ್ತಾನು ಮುಟ್ಟುಗೋಲು ಹಾಕಿಕೊಳ್ಳಿ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಲು ರೈತರು ಆಗ್ರಹಿಸಿದರು.

ಮೈಸೂರು ನಗರದಗನ್‌ಹೌಸ್ ವೃತ್ತದ ಬಳಿ ಇರುವ ಕುವೆಂಪು ಪಾರ್ಕ್‌ನಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ನಡೆದ ಮೈಸೂರು ತಾಲೂಕು ರೈತರ ಸಭೆಯಲ್ಲಿ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿದರು.

ರಾಜ್ಯ ಸರಕಾರ ಕಬ್ಬಿಗೆ ಹೆಚ್ಚುವರಿ 100 ರೂಪಾಯಿ ದರ ನಿಗದಿ ಮಾಡಿ ಆದೇಶ ಹೊರಡಿಸಿತ್ತು. ಜಿಲ್ಲಾಧಿಕಾರಿಗಳು ಒಂದು ತಿಂಗಳ ಹಿಂದೆ ಬಣ್ಣಾರಿ ಸಕ್ಕರೆ ಕಾರ್ಖಾನೆ ಮುಖ್ಯಸ್ಥರು ಹಾಗೂ ರೈತ ಮುಖಂಡರ ಜೊತೆ ಸಭೆ ನಡೆಸಿ ರೈತರ ಖಾತೆಗೆ ಹಣ ಜಮಾ ಮಾಡುವಂತೆ ಕಾರ್ಖಾನೆ ಮುಖ್ಯಸ್ಥರಿಗೆ ಸೂಚನೆ ನೀಡಿದರೂ, ಸಹ ಕಾರ್ಖಾನೆ ಅವರು ನಿರ್ಲಕ್ಷತನ ತೋರಿದ್ದಾರೆ.ಆದಕಾರಣ ಜಿಲ್ಲಾಧಿಕಾರಿಗಳು, ಕೂಡಲೇ ಸಕ್ಕರೆ ಕಾರ್ಖಾನೆಯ ಸಕ್ಕರೆ ದಾಸ್ತಾನು ಮುಟ್ಟುಗೋಲು ಹಾಕಿಕೊಳ್ಳಬೇಕು ಒತ್ತಾಯಿಸಿದರು.

ದೇಶದಲ್ಲಿ ಮುಕ್ತ ವ್ಯಾಪಾರ ಒಪ್ಪಂದ ಜಾರಿಯಾದ ದಿನಗಳಿಂದ , ಎಲ್ಲ ವಸ್ತುಗಳು ನಮ್ಮ ದೇಶಕ್ಕೆ ಆಮದು ಹಾಗೂ ರ್ತು ಆಗುತ್ತಿದೆ.ಆದರೆ,ತಂಬಾಕು ಖರೀದಿಗೆ ಐಟಿಸಿ ಕಂಪನಿ ಮಾತ್ರ ಯಾಕೆ ವೌನವಹಿಸಿದೆ? ಇದನ್ನು ಮುಕ್ತ ವ್ಯಾಪಾರಕ್ಕೆ ಬಿಡಬೇಕು ಇದರಿಂದ ಹೊಗೆ ಸೊಪ್ಪು ಬೆಳೆಯುವ ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಗುತ್ತದೆ ಎಂದರು.

ಒಂದು ಕೆ.ಜಿ. ತಂಬಾಕಿನಲ್ಲಿ 1400 ಸಿಗರೇಟ್ ತಯಾರಿಸುವ ಐಟಿಸಿ ಕಂಪನಿಗೆ ಸಿಗರೇಟ್ ಮಾರಾಟದಿಂದ 21,000 ಬರುತ್ತದೆ.ಎಲ್ಲಾ ಖರ್ಚು ಕಳೆದು ಕನಿಷ್ಠ 10 ಸಾವಿರ ಉಳಿಯುತ್ತದೆ , ರೈತರಿಗೆ ಮಾತ್ರ 250 ರೂ.,ಕೊಡಲು ಕಷ್ಟ ಎನ್ನುತ್ತಾರೆ ,ಇದು ರೈತರಿಗೆ ವಂಚನೆಯಾಗಿದೆ. ಕೇಂದ್ರ ಸರಕಾರ ಹೊಗೆಸೊಪ್ಪು ಖರೀದಿಸುವ ಅವಕಾಶ ಬೇರೆ ಕಂಪನಿಗಳಿಗೂ ಅವಕಾಶ ಕಲ್ಪಿಸಲಿ, ಈ ಭಾಗದ ಸಂಸದರು ಕೇಂದ್ರವನ್ನ ಒತ್ತಾಯಿಸಲು ಎಂದು ಹೇಳಿದರು.

ಅಮೇರಿಕಾ- ಇರಾನ್ ಯುದ್ಧ ನಿಲ್ಲಿಸ ಬೇಕು, ವಿಶ್ವದಲ್ಲಿ ಶಾಂತಿ ನೆಲೆಸಬೇಕು.ಯುದ್ಧ ನೀಲ್ಲಲಿ. ಶಾಂತಿ ನೆಲೆಸಲಿ ಎಂಬ ಘೋಷಣೆಗಳನ್ನು ರೈತರು ಕೂಗಿದರು.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ತಾಲೂಕು ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್. ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ ಕೂಡನಹಳ್ಳಿ ಸೋಮಣ್ಣ, ಕೆಂಡಗಣಪ್ಪ, ಸಾತಗಳ್ಳಿ ಬಸವರಾಜ್, ಕಾಟೂರು ನಾಗೇಶ್, ವಾಜಮಂಗಲ ನಾಗೇಂದ್ರ, ವಾಜಮಂಗಲ ಮಹಾದೇವು, ಸತೀಶ್, ಬಾಲು, ನಂಜುಂಡಸ್ವಾಮಿ, ಶಿವಣ್ಣ, ರಂಗರಾಜು, ಸೋಮಣ್ಣ, ಶ್ರೀಕಂಠ, ಪ್ರಭಾಕರ, ಭಾಗ್ಯಮ್ಮ ಮತ್ತಿತರರು ಇದ್ದರು.

WhatsApp

Join Now

Telegram

Join Now

Instagram

Join Now