--Ads--

ಕಬ್ಬಿನ ಹಣಕ್ಕಾಗಿಏ.21ರಿಂದ ನಿರಂತರ ಹೋರಾಟಕ್ಕೆ ತೀರ್ಮಾನ

On: April 13, 2026 3:33 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಕಬ್ಬಿನ ಹಣಕ್ಕಾಗಿ ಏ.21ರಿಂದ ನಿರಂತರ ಹೋರಾಟಕ್ಕೆ ತೀರ್ಮಾನ

ತಾಂಡವಪುರ ಏಪ್ರಿಲ್ 13: ಕಬ್ಬಿನ ಹಣ ಪಾವತಿಗಾಗಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಏ.21ರಿಂದ ನಿರಂತರ ಪ್ರತಿಭಟನಾ ಧರಣಿ ನಡೆಸಲು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ತೀರ್ಮಾನಿಸಿದೆ.
ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ರಾಜ್ಯ ಸರ್ಕಾರದ ಆದೇಶಗಳಿಗೆ ಗೌರವ ನೀಡದ ನಿರ್ಲಕ್ಷತನ ತೋರುವ ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಅಳಗಂಚಿ ಮಲ್ಲುಪುರ ಗ್ರಾಮದ ಬಳಿ ಇರುವ ಬಣ್ಣಾರಿ ಸಕ್ಕರೆ ಕಾರ್ಖಾನೆ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಆದೇಶವನ್ನು ನಿರ್ಲಕ್ಷಿಸಿದ್ದಾರೆ. ಕಬ್ಬು ಬೆಳೆಗಾರರಾದ ರೈತರ ಖಾತೆಗಳಿಗೆ ಹಣ ಜಮಾವಾಗುವ ತನಕ ಹೋರಾಟ ನಿಲ್ಲಿಸುವುದಿಲ್ಲ. ರೈತರ ಹಣ ಬಾಕಿ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ತಮ್ಮ ಅಧಿಕಾರ ಬಳಸಿ ರಿಕವರಿ ಸರ್ಟಿಫಿಕೇಟ್ ಜಾರಿ ಮಾಡಿ ಸಕ್ಕರೆ ದಾಸ್ತಾನು ಜಪ್ತಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಯವರನ್ನು ಒತ್ತಾಯಿಸಿದರು.

ರಾಜ್ಯ ಸರ್ಕಾರ ನಿಗದಿ ಮಾಡಿದ ಹೆಚ್ಚುವರಿ ಕಬ್ಬಿನ ಹಣ ಪ್ರತಿ ಟನ್ ಗೆ 100ರೂಪಾಯಿ ಬಣ್ಣಾರಿ ಕಾರ್ಖಾನೆ ಮತ್ತು ಮಹದೇಶ್ವರ ಕಾರ್ಖಾನೆಯಿಂದ ತಕ್ಷಣವೇ ರೈತರಿಗೆ ಕೊಡಿಸಬೇಕು. ಕರ್ನಾಟಕ ಗ್ರಾಮೀಣ ಬ್ಯಾಂಕ್ ರೈತರ ಸಾಲ ತೀರುವಳಿ ಓಟಿಎಸ್‌ ಮಾಡುವಂತೆ ಒತ್ತಾಯಿಸಿ, ಬ್ಯಾಂಕುಗಳಲ್ಲಿ ರೈತರು ತುರ್ತು ಕಾರ್ಯಗಳಿಗೆ ಉಪಯೋಗಿಸುವ ಚಿನ್ನದ ಗಿರವಿ ಸಾಲಕ್ಕೆ ಸಿಬಿಲ್ ಸ್ಕೋರ್ ನೋಡಿ ಸಾಲ ನೀಡುವ ಪದ್ಧತಿ ರದ್ದುಗೊಳಿಸುವಂತೆ ಹಾಗೂ ಚಿನ್ನದ ಸಾಲ ನವೀಕರಣಕ್ಕೆ ಪ್ರತಿ ವರ್ಷ ಬಡ್ಡಿ ಕಟ್ಟಿಸಿಕೊಂಡು ಹಳೆಯ ಪದ್ಧತಿಯತೆ ನವೀಕರಿಸಲು ಒತ್ತಾಯಿಸಿ ಪ್ರತಿಭಟಿಸಲಾಗುವುದು. ಕೃಷಿ ಪಂಪಸೆಟ್ಟುಗಳ ಅಕ್ರಮ ಸಕ್ರಮ ಹಳೆ ಪದ್ದತಿಯಂತೆ ಮುಂದುವರಿಸಬೇಕು. ಐವತ್ತು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ಕೊಡುವಂತೆ, ಸಾಗುವಳಿ ಜಮೀನುಗಳ ದುರಸ್ತಿ ಕಾರ್ಯ, ಪೋಡಿ ಸರಳಿಕರಣ ಗೊಳಿಸಬೇಕೆಂಬುದು ಸೇರಿ ಹಲವು ಬೇಡಿಕೆ ಈಡೇರಿಕೆಗಾಗಿ ಏ.21ರಿಂದ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದರು.

ಈ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ಮಾರ್ಬಳ್ಳಿ ನೀಲಕಂಠಪ್ಪ, ಲಕ್ಷ್ಮಿಪುರ ವೆಂಕಟೇಶ್, ವರಕೋಡು ನಾಗೇಶ್, ಕುರುಬೂರು ಸಿದ್ದೇಶ್, ಕೆಂಡಗಣಪ್ಪ, ಬಿ.ಪಿ.ಪರಶಿವಮೂರ್ತಿ, ಪ್ರಸಾದ್ ನಾಯಕ, ಬಸವರಾಜ, ನಂಜುಂಡಸ್ವಾಮಿ, ಅಂಬಳೆ ಮಂಜುನಾಥ್, ರಂಗರಾಜು, ನಾಗೇಂದ್ರ, ರವಿಕುಮಾರ್, ಜಯರಾಮು, ಮಹದೇವು, ಪ್ರಭಾಕರ್, ರಾಜು, ಬಾಲು, ಸತೀಶ್, ಶಿವಣ್ಣ, ಬಸವರಾಜ, ಮಹೇಶ್, ಕಮಲಮ್ಮ ಇದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ,  ಸಮಸ್ಯೆಗಳಿಗೆ ಸ್ಪಂದಿಸಿದ ಶಾಸಕ ದರ್ಶನ್ ಧ್ರುವನಾರಾಯಣ್

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಡಾ. ಯತೀಂದ್ರ ಸಿದ್ದರಾಮಯ್ಯ ಶಾಸಕ ಕೆ ವೆಂಕಟೇಶ್ ರವರಿಂದ ಭೂಮಿ ಪೂಜೆ

ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 5 ತಾಲ್ಲೂಕುಗಳು ತೀವ್ರ ಬರಪೀಡಿತ ; ಸಮಸ್ಯೆಯಾಗದಂತೆ ಪರಿಸ್ಥಿತಿ ನಿಭಾಯಿಸಿ ಡಿಸಿಎಂ ಡಾ.ಜಿ. ಪರಮೇಶ್ವರ್ 

ಜಿಲ್ಲೆಯ ನಂಜನಗೂಡು ತಾಲೂಕುಗಳ ಬರಪೀಡಿತ ಪ್ರದೇಶಗಳಿಗೆ ಉಪಮುಖ್ಯಮಂತ್ರಿ ಡಾ .ಜಿ. ಪರಮೇಶ್ವರ್  ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ

ವರುಣ ವಿಧಾನಸಭಾ ಕ್ಷೇತ್ರ ನಂಜನಗೂಡು ವಿಧಾನಸಭಾ ಕ್ಷೇತ್ರದ  ಕಾರ್ಯಕರ್ತರಿಂದ ಶ್ರೀಕಂಠೇಶ್ವರ ಸ್ವಾಮೀಗೆ ಪೂಜಿ ಸಲ್ಲಿಸಿ ಸಿಹಿ ವಿತರಿಸಿ ಸಂಸದ ಸುನಿಲ್ ಬೋಸ್ ಹುಟ್ಟುಹಬ್ಬ ಆಚರಣೆ

ನಗರಲೆ ಹಾಲು ಉತ್ಪಾದಕರ ಸಂಘದ 2025 -26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯಸಭೆ