--Ads--

ಸಮೂಹ ಜೀವನ ಮತ್ತು ಸಹಕಾರ, ಸಾಮಾಜಿಕ ನ್ಯಾಯದ ಅರಿವು ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮವಾಗಿ ಬದುಕುತ್ತಾರೆ

On: April 13, 2026 3:25 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಸಮೂಹ ಜೀವನ ಮತ್ತು ಸಹಕಾರ, ಸಾಮಾಜಿಕ ನ್ಯಾಯದ ಅರಿವು ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮವಾಗಿ ಬದುಕುತ್ತಾರೆ

ಶಿಡ್ಲಘಟ್ಟ : ಶ್ರಮ ,ಶಿಸ್ತು , ಸಮಾನತೆಯ ಅಭ್ಯಾಸ, ಗೌರವ, ವೈಜ್ಞಾನಿಕ ಮನೋಭಾವ ಮತ್ತು ಜಾತ್ಯತೀತತೆ, ಸಮೂಹ ಜೀವನ ಮತ್ತು ಸಹಕಾರ, ಸಾಮಾಜಿಕ ನ್ಯಾಯದ ಅರಿವು ಕಲಿತ ವಿದ್ಯಾರ್ಥಿಗಳು ಮುಂದೆ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕುತ್ತಾರೆ ಎಂದು
ಬಿಎಂವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ
ತಿಳಿಸಿದರು.

ತಾಲ್ಲೂಕಿನ ಭಕ್ತರಹಳ್ಳಿಯ ಬಿಎಂವಿ ವಿದ್ಯಾಸಂಸ್ಥೆಯಲ್ಲಿ ಬಿಎಂವಿ ಎಜುಕೇಷನ್ ಟ್ರಸ್ಟ್ ಹಾಗೂ ಸಮಾಜವಾದಿ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರ ಸೇವಾದಳದ 8 ದಿನಗಳ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.

ರಾಷ್ಟ್ರ ಸೇವಾದಳದ ಶಿಬಿರ ಕೇವಲ ದೈಹಿಕ ಶಿಸ್ತಿನ ಕೇಂದ್ರಗಳಲ್ಲ ಅವು ಸಮಾಜವಾದಿ ಸಿದ್ದಾಂತ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯೋಗ ಶಾಲೆಗಳಿದ್ದಂತೆ ಎಂದು ಹೇಳಿದರು.

ಇದೇ ವೇಳೆ 80 ಶಿಬಿರಾರ್ಥಿಗಳು ಬಸವಾಪಟ್ಟಣದ ವೃತ್ತದಲ್ಲಿ ಎಂಟು ದಿನಗಳಿಂದ ಕಲಿತ ಕವಾಯತ್ತಿನ ಪ್ರದರ್ಶನ ನೀಡಿದರು.

ಈ ಸಂದರ್ಭದಲ್ಲಿ ಬಿಎಂವಿ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ವಿ.ಮುನೇಗೌಡ,ಸಮಾಜವಾದಿ ಅಧ್ಯಯನ ಕೇಂದ್ರದ ಬಾಪು ಹೆದ್ದೂರ ಶೆಟ್ಟಿ, ಪ್ರೊ.ಹನುಮಂತ, ಜಿ.ವಿ.ಸುಂದ‌ರ್, ತೋಟಗಾರಿಕೆ ಇಲಾಖೆ ನಿವೃತ್ತ ಹಿರಿಯ ಸಹಾಯಕ ನಿರ್ದೇಶಕ ಸಂತೆ ನಾರಾಯಣಸ್ವಾಮಿ, ರಾಷ್ಟ್ರ ಸೇವಾದಳದ ರಾಜ್ಯ ಅಧ್ಯಕ್ಷ ಶಂಕ‌ರ್ ಅಳಗಟ್ಟಿ, ಕೊಲ್ಲಾಪುರದ ರಾಹುಸಾಹೇಬ್ ಅಲಾಸ್, ಚಿದಾನಂದಮೂರ್ತಿ, ಬಿ.ಕೆ.ರಾಮಚಂದ್ರ,
ಎನ್.ಎಸ್‌.ವೆಂಕಟೇಶ್, ಎಸ್.ನಂಜುಂಡಾರಾಧ್ಯ, ಹೇಮಂತ್ ಕುಮಾ‌ರ್, ದೇವರಾಜ್, ಪ್ರಶಾಂತ್ ಕುಮಾರ್, ಬಿ.ಸಿ.ಜಯಚಂದ್ರ, ಕ್ಯಾಂಪ್ ತರಬೇತುದಾರ ಬಾಬಾ ಸಾಹೇಬ್ ನಡಾಫ್‌, ಚಂದನ್ ಮಾತುಂಗೆ, ಸಾಗರ್ ಪಾಟೀಲ್‌, ಬಿಷ್ಟ ತಾಪ ಹಾಗೂ ಪೋಷಕರು, ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now