--Ads--

ಸಾಗರಕಟ್ಟೆ ಹತ್ತಿರ ಲೆವಲ್‌ ಕ್ರಾಸಿಂಗ್‌ ಸೇತುವೆ ನಿರ್ಮಾಣಕ್ಕೆ ಕೇಂದ್ರ ರೈಲ್ವೆ ಸಚಿವರಿಗೆ ಶಾಸಕರ ಮನವಿ

On: April 13, 2026 6:18 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಸಾಗರಕಟ್ಟೆ ಹತ್ತಿರ ಲೆವಲ್‌ ಕ್ರಾಸಿಂಗ್‌ ಸೇತುವೆ ನಿರ್ಮಾಣಕ್ಕೆ ಕೇಂದ್ರ ರೈಲ್ವೆ ಸಚಿವರಿಗೆ ಶಾಸಕರ ಮನವಿ

ತಾಂಡವಪುರ ಏಪ್ರಿಲ್11 ಮೈಸೂರು ಜಿಲ್ಲೆ ಕೆ.ಆರ್.ನಗರ ಮಧ್ಯದಲ್ಲಿರುವ ಸಾಗರಕಟ್ಟೆ ಹತ್ತಿರ 23/200-300 ಕಿ.ಮಿ.ನಲ್ಲಿರುವ ಲೆವಲ್ ಕ್ರಾಸಿಂಗ್ ಗೇಟ್ ಎಲ್.ಸಿ.-19ನ್ನು ಮೇಲ್ ಸೇತುವೆ ಮಾಡುವಂತೆ ಶಾಸಕ ಜಿ.ಟಿ.ದೇವೇಗೌಡ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣರಿಗೆ ಮನವಿ ಮಾಡಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಮೈಸೂರು-ಕೆ.ಆರ್.ನಗರ ರೈಲ್ವೆ ಹಳಿಗಳು ಹಾದು ಹೋಗಿದ್ದು, ಕಾವೇರಿ ನದಿಗೆ ಹೊಂದಿಕೊಂಡಂತೆ ಇರುವ ಸಾಗರಕಟ್ಟೆ ರೈಲ್ವೆ ಸ್ಟೇಷನ್ ಹತ್ತಿರ 24/200-300 ಕಿ.ಮೀ.ನಲ್ಲಿ ಈಗಾಗಲೇ ಒಂದು ಕೆಳ ಸೇತುವೆಯನ್ನು ರೈಲ್ವೆ ಇಲಾಖೆವತಿಯಿಂದ ನಿರ್ಮಾಣ ಮಾಡಿದ್ದು, ಕಾವೇರಿ ನದಿಗೆ ನೀರು ಬಂದಾಗ ನೀರು ಕೆಳ ಸೇತುವೆಯಲ್ಲಿ ತುಂಬಿಕೊಂಡಿರುತ್ತದೆ.

ಕೆ.ಆರ್.ಎಸ್.ನಲ್ಲಿ ಸುಮಾರು 9 ತಿಂಗಳುಗಳ ಕಾಲ ನೀರು ತುಂಬಿರುತ್ತದೆ. ಇದರಿಂದ ಕೆಳ ಸೇತುವೆಯಾವುದೇ ಉಪಯೋಗಕ್ಕೆ ಬಂದಿರುವುದಿಲ್ಲ. ಆದರೆ, ಇತ್ತೀಚಿಗೆ ಸಾಗರಕಟ್ಟೆ-ರಾಮನಹಳ್ಳಿಗೆ ಹೋಗುವ ರಸ್ತೆಯಲ್ಲಿರುವ 23/200-300 ಲೆವಲ್ ಕ್ರಾಸಿಂಗ್ ಗೇಟ್ ಎಲ್.ಸಿ.-19ನಲ್ಲಿ ಕೆಳ ಸೇತುವೆ ನಿರ್ಮಾಣ ಮಾಡಲು ಅಂದಾಜು ತಯಾರಿಸಿರುವುದಾಗಿ ಲೆವೆಲ್ ಕ್ರಾಸಿಂಗ್-17ನಲ್ಲಿ ಕೆ.ಆ‌ರ್.ಎಸ್.ನ ತಿಳಿದುಬಂದಿರುತ್ತದೆ.

ಕೆಳ ನಿರ್ಮಾಣ ಸೇತುವೆ ಹಿನ್ನೀರಿನಲ್ಲಿರುವ ಸದರಿ ಮಾಡಿದರೆ ರೈತರಿಗೆ ಬಹಳ ತೊಂದರೆಯಾಗಲಿದೆ. ಆದ್ದರಿಂದ ತಾವು ಸಾಗರಕಟ್ಟೆ-ರಾಮನಹಳ್ಳಿಗೆ ಹೋಗುವ ರಸ್ತೆಯಲ್ಲಿರುವ 23/200-300 ಲೆವಲ್ ಕ್ರಾಸಿಂಗ್ ಗೇಟ್ ಎಲ್.ಸಿ.-19ನಲ್ಲಿ ಕೆಳ ಸೇತುವೆಯ ಬದಲಾಗಿ ಮೇಲ್ ಸೇತುವೆ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಡಾಕ್ಟರ್ ಡಿ ತಿಮಯ್ಯ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಬಿಎಂ ರಾಮು ಸೇರಿದಂತೆ ಮುಂತಾದವರು ಹಾಜರಿದ್ದರು

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ,  ಸಮಸ್ಯೆಗಳಿಗೆ ಸ್ಪಂದಿಸಿದ ಶಾಸಕ ದರ್ಶನ್ ಧ್ರುವನಾರಾಯಣ್

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಡಾ. ಯತೀಂದ್ರ ಸಿದ್ದರಾಮಯ್ಯ ಶಾಸಕ ಕೆ ವೆಂಕಟೇಶ್ ರವರಿಂದ ಭೂಮಿ ಪೂಜೆ

ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 5 ತಾಲ್ಲೂಕುಗಳು ತೀವ್ರ ಬರಪೀಡಿತ ; ಸಮಸ್ಯೆಯಾಗದಂತೆ ಪರಿಸ್ಥಿತಿ ನಿಭಾಯಿಸಿ ಡಿಸಿಎಂ ಡಾ.ಜಿ. ಪರಮೇಶ್ವರ್ 

ಜಿಲ್ಲೆಯ ನಂಜನಗೂಡು ತಾಲೂಕುಗಳ ಬರಪೀಡಿತ ಪ್ರದೇಶಗಳಿಗೆ ಉಪಮುಖ್ಯಮಂತ್ರಿ ಡಾ .ಜಿ. ಪರಮೇಶ್ವರ್  ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ

ವರುಣ ವಿಧಾನಸಭಾ ಕ್ಷೇತ್ರ ನಂಜನಗೂಡು ವಿಧಾನಸಭಾ ಕ್ಷೇತ್ರದ  ಕಾರ್ಯಕರ್ತರಿಂದ ಶ್ರೀಕಂಠೇಶ್ವರ ಸ್ವಾಮೀಗೆ ಪೂಜಿ ಸಲ್ಲಿಸಿ ಸಿಹಿ ವಿತರಿಸಿ ಸಂಸದ ಸುನಿಲ್ ಬೋಸ್ ಹುಟ್ಟುಹಬ್ಬ ಆಚರಣೆ

ನಗರಲೆ ಹಾಲು ಉತ್ಪಾದಕರ ಸಂಘದ 2025 -26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯಸಭೆ