ವಿಜಯ ದರ್ಪಣ ನ್ಯೂಸ್…. .
ಏ 19 ಕ್ಕೆ ಕನ್ನಡ ಸಾಹಿತ್ಯ, ಸಂಗೀತ ಸಂಭ್ರಮ : ವಿವಿಧ ಸಾಧಕರಿಗೆ ದತ್ತಿ ಪ್ರಶಸ್ತಿ, ಕೃತಿಗಳ ಲೋಕಾರ್ಪಣೆ

ಬೆಂಗಳೂರು. : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ) ಸಿದ್ಧನಹಳ್ಳಿ ಬೆಂಗಳೂರಿನ ಗಾಂಧಿ ಭವನದಲ್ಲಿ 19 ನೇ ತಾರೀಖು ಭಾನುವಾರ ಪ್ರೊ .ಬಿ.ಕೃಷ್ಣಪ್ಪ ಟ್ರಸ್ಟ್, ಅನಿಕೇತನ ಕನ್ನಡ ಬಳಗದ ಸಹಕಾರದೊಂದಿಗೆ ಏರ್ಪಡಿಸಿರುವ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಂಗೀತ ಸಂಭ್ರಮ ಸಮಾರಂಭದಲ್ಲಿ ನಾಡೋಜ ಹಂಪನಾ, ಡಾ.ಜಯಶ್ರೀ ಅರವಿಂದ್, ಶ್ರೀಮತಿ ಶಾಂತಿ ವಾಸು, ಡಾ.ವೇಮಗಲ್ ನಾರಾಯಣಸ್ವಾಮಿ, ಇಂದಿರಾ ಕೃಷ್ಣಪ್ಪ, ಡಾ.ಬೈರಮಂಗಲ ರಾಮೇಗೌಡ, ಅನಿಕೇತನ ಮಾಯಣ್ಣ, ಉದಯರವಿ ಮುಂತಾದ ಮಹನೀಯರು ಭಾಗವಹಿಸಲಿದ್ದಾರೆ .

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಡಾ.ಸಿಸಿರಾ ಸ್ನೇಹ ಬಳಗವು ನೀಡುವ ಕಾಯಕಜೀವಿ ಪ್ರಶಸ್ತಿಗೆ ಹಿರಿಯ ಸಾಹಿತಿ, ಕೃಷಿ ಇಲಾಖೆಯ ವಿಶ್ರಾಂತ ಸಹಾಯಕ ನಿರ್ದೇಶಕ 80 ವರ್ಷದ ಸಂಭ್ರಮದಲ್ಲಿ ಅಭಿನಂದಿತರಾಗುತ್ತಿರುವ
ಶ್ರೀ ಎಂ.ವಿ.ಶಿವಪ್ರಸಾದ್ ಹಾಗೂ ಸಾಹಿತ್ಯ,ಸಂಗೀತ ಕ್ಷೇತ್ರ ಸಾಧಕರಾದ ಪತ್ರಕರ್ತರಾದ 50 ರ ಸುವರ್ಣ ಸಂಭ್ರಮದಲ್ಲಿರುವ ಶ್ರೀ ಎಪಿಎಂ.ವೀರೇಶ್ ಯರಬಾಳು, ಶೈಕ್ಷಣಿಕ ಕ್ಷೇತ್ರದ ಸಾಧಕರಾದ ಚನ್ನಪಟ್ಟಣದ ಶ್ರೀ ಚಕ್ಕೆರೆ ಯೋಗೇಶ್, ಯುವ ಲೇಖಕಿ ತುರುವೇಕೆರೆಯ ಶ್ರೀಮತಿ ಎಂ.ಕೆ.ಲತಾಮಣಿ ಅವರು ಆಯ್ಕೆ ಆಗಿರುತ್ತಾರೆ.
ಲಯನ್ ಡಾ.ಕೆ.ಪಿ.ಶೈಲಜಾ ಮತ್ತು ಲಯನ್ ಶ್ರೀ ವೆಂಕಟಸುಬ್ಬಯ್ಯ ಚೆಟ್ಟಿ ದತ್ತಿ ಪ್ರಶಸ್ತಿಗೆ ಶ್ರೀ ಜಿ.ಎಸ್.ರಾಮದೇವ್ (ಶೈಕ್ಷಣಿಕ ಮತ್ತು ಸಮಾಜಸೇವೆ), ಡಾ.ಬಂಡ್ಲಹಳ್ಳಿ ವಿಜಯ್ ಕುಮಾರ್ (ಜಾನಪದ ಸಂಗೀತ), ಎಂ.ಗೌಡಯ್ಯ (ಹೆಚ್ ಎ ಎಲ್ ಕಾರ್ಮಿಕ ಮುಖಂಡರು), ಶ್ರೀಮತಿ ಕವಿತಾ ಕೆ.ಆರ್.( ಸಮಾಜ ಸೇವಕರು), ಬಿ.ಆನಂದಮೂರ್ತಿ(ಕೇಂದ್ರೀಯ ಸದನ ಕನ್ನಡ ಸಂಘ), ವೈ.ಎಸ್.ಶೈಲಜಾ ಆರ್.ಪ್ರಸನ್ನ (ಸಂಸ್ಕೃತಿ ಸೇವೆ), ವಿಜಯ್ ಕುಮಾರ್ ಹೊಸಪಾಳ್ಯ (ಮಾಧ್ಯಮ), ಗೋವಿಂದರಾಜು ಪಟೇಲ್ (ಪತ್ರಿಕೆ,ಸಂಘಟನೆ), ಹೆಚ್.ಸತೀಶ್ ಕುಮಾರ್ (ಸಾಹಿತ್ಯ), ವೈಬಿಹೆಚ್ ಜಯದೇವ್ (ಸಂಘಟನೆ), ದೊ.ಚಿ.ಗೌಡ ( ಸಾಹಿತ್ಯ, ಕೃಷಿ), ಶ್ರೀಮತಿ ದೇವಮ್ಮ( ಭಜನೆ ಕಲಾವಿದೆ), ಎಂ.ಶಿವಸ್ವಾಮಿ (ಸಂಘಟನೆ), ಮಂದಗೆರೆ ರಾಮಕುಮಾರ್ (ಸಾಮಾಜಿಕ ಸೇವೆ), ಹೇಮಾ ಕನ್ನಡತಿ (ಬಡಮಕ್ಕಳ ಆಶ್ರಯದಾತೆ) , … ಇವರನ್ನು ಸಾಹಿತಿ ಡಾ.ಕೃಷ್ಣ ಹಾನ್ ಬಾಳ್ ಮತ್ತು ಯುವ ಉದ್ಯಮಿ ಎ.ವಿ.ಗುರುತೇಜಸ್ ಅವರಿದ್ದ ಆಯ್ಕೆ ಸಮಿತಿಯು ಆಯ್ಕೆ ಮಾಡಿದ್ದಾರೆ .
ಹಾಗೆಯೇ ಹಿರಿಯ ಸಾಹಿತಿ ಡಾ.ಟಿ.ಗೋವಿಂದರಾಜು ಅವರ ಜಾನಪದ ಬೆಳಕಿಂಡಿ ಮತ್ತು ಕವಯಿತ್ರಿ ಶ್ರೀಮತಿ ಎಂ.ಎಸ್.ಆಶಾಲತಾ ಅವರ ಮನದ ಸಿರಿ ಕೃತಿಗಳನ್ನು ಲೋಕಾರ್ಪಣೆ ಮಾಡಲಾಗುವುದು, ವಸಂತ ಕವಿಗೋಷ್ಠಿ ಹಾಗೂ ಭಾವಗೀತೆ,ಜಾನಪದ ಗೀತೆಗಳ ಗಾಯನ ಇರುತ್ತದೆ ಎಂದು ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಹೇಮಾವತಿ ಸಿಸಿರಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 16 ಕ್ಕೆ ದಾಸರ ಪದಗಳ ಗಾಯನ
ಬೆಂಗಳೂರು : ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಗಿರಿರಾಜಾಚಾರ್ ಅವರ ನೇತೃತ್ವದಲ್ಲಿ ಏಪ್ರಿಲ್ 16, ಗುರುವಾರ ಸಂಜೆ 7-00ಕ್ಕೆ ಶ್ರೀಮತಿ ಸರಸ್ವತಿ, ಶ್ರೀಮತಿ ಶೃತಿ ಮತ್ತು ಸಂಗಡಿಗರಿಂದ “ದಾಸರ ಪದಗಳ ಗಾಯನ” ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀ ನಂದಕಿಶೋರ್ ಆಚಾರ್ ತಿಳಿಸಿದ್ದಾರೆ. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪವಮಾನಪುರ, ಬನಶಂಕರಿ 6ನೇ ಹಂತ, ಬೆಂಗಳೂರು










