--Ads--

ರಮ್ಮನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಭೂಮಿ ಮಾರಾಟದ ಅಕ್ರಮ: ಸ್ನೇಹಮಯಿ ಕೃಷ್ಣ

On: April 18, 2026 4:53 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ರಮ್ಮನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಭೂಮಿ ಮಾರಾಟದ ಅಕ್ರಮ: ಸ್ನೇಹಮಯಿ ಕೃಷ್ಣ

ತಾಂಡವಪುರ ಏಪ್ರಿಲ್ 18 ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಸೇರುವಮೈಸೂರು ತಾಲ್ಲೂಕು ಕಸಬಾ ಹೋಬಳಿಯ ರಮ್ಮನಹಳ್ಳಿ ಗ್ರಾಮದಲ್ಲಿ ಆಶ್ರಯ ನಿವೇಶನ ಹಂಚಲು ಖರೀದಿ ಮಾಡಿದ ಜಮೀನಿಗೆ ಸಂಬಂಧಿಸಿದ ವ್ಯಾಜ್ಯದ ಆದೇಶ ಬಳಿಕ ನ್ಯಾಯಾಲಯ ತಿಳಿಸಿದ ೧೦ ಗುಂಟೆ ಜೊತೆಗೆ, ಇನ್ನಿತರ ೨೦ ಗುಂಟೆ ಜಾಗವನ್ನೂ ಅಕ್ರಮವಾಗಿ ಇತರರಿಗೆ ಪಾಲಿಕೆ ಅಧಿಕಾರಿಗಳು ಬರೆದುಕೊಡುವ ಮೂಲಕ ಅಕ್ರಮ ಎಸಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರರಾದ ಸ್ನೇಹಮಯಿ ಕೃಷ್ಣ ಆರೋಪಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ೨೦೦೩ ರಿಂದ ೫ ರವರೆಗೆ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಸಾಕಷ್ಟು ನಿವೇಶನ ಖರೀದಿಸಲಾಗಿತ್ತು. ಅವುಗಳಲ್ಲಿ ರಮ್ಮನಹಳ್ಳಿ ಗ್ರಾಮದ ಸರ್ವೆ ನಂ. ೨೫೯/೩ ಸಹಾ ಸೇರಿದೆ. ೨೦೦೫ ರ ಮಾ. ೧೯ ರಮದು ಕ್ರಯಪತ್ರ ಸಹಾ ನೋಂದಣಿ ಆಗಿದೆ. ಈ ನಂತರ ಜಮೀನು ಮಾರಾಟ ಮಾಡಿದ್ದ ಕೆಂಚಯ್ಯ ಎಂಬುವವರ ಪುತ್ರಿ ಸುಂದ್ರಮ್ಮ ತಮಗೂ ಭಾಗ ಬರಬೇಕಾಗಿತ್ತೆಂದು ನ್ಯಾಯಾಲಯದಲ್ಲಿ ದಾವೆ ಹೂಡಿದಾಗ, ಅವರಿಗೆ ೧೦ ಗುಂಟೆ ಜಮೀನು ನೀಡುವಂತೆ ಸೂಚಿಸಲಾಗಿತ್ತು. ಇದರಿಂದಾಗಿ ಸರ್ಕಾರಕ್ಕೆ ಬಾಕಿ ೨೦ ಗುಂಟೆ ವಾಪಸಾಗಿದೆ ಎಂದು ವಿವರಿಸಿದರು.
ಆದರೆ ಈ ವಿಷಯ ಮುಚ್ಚಿಟ್ಟು, ಉಳಿಕೆ ೨೦ ಗುಂಟೆ ಜಮೀನು ಕೆಂಚಯ್ಯನವರಿಗೆ ಸೇರಿದೆ ಎಂದು ಸುಳ್ಳು ನಕ್ಷೆ ಮಾಡಲಾಗಿದ್ದು, ಆ ಜಮೀನನ್ನು ಸಹಾ ಚೌಡಮ್ಮ ಹಾಗೂ ಅವರ ಮಕ್ಕಳು ಸೈಯ್ಯದ್ ಫೈಸಲರ್ ಎಂಬುವವರಿಗೆ ಸಾಮಾನ್ಯ ಅಧಿಕಾರ ಪತ್ರ ನೀಡಿದ್ದಾರೆ. ಇವರು ಇನ್ನಿಬ್ಬರಿಗೆ ಮಾರಾಟ ಮಾಡಿದ್ದಾರೆ. ಈ ರೀತಿ ಪಾಲಿಕೆ ಖರೀದಿಸಿ ಜಾಗವನ್ನು ರಕ್ಷಿಸಲುವಲ್ಲಿ ಪಾಲಿಕೆ ಹಾಗೂ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಈ ಕುರಿತು ಕ್ರಮ ಕೈಗೊಳ್ಳುವಂತೆ ತಾವು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿರುವುದಾಗಿ ವಿವರಿಸಿದರು. ಸಾಮಾಜಿಕ ಹೋರಾಟಗಾರ ಅರವಿಂದ್ ಶರ್ಮಾ, ಸಾಮಾಜಿಕ ಹೋರಾಟಗಾರರು ಹಾಗೂ ಆಡಿಟರ್ ಆದ ಸುರೇಶ್ ರಮ್ಮನಹಳ್ಳಿ ಹಾಜರಿದ್ದರು.

WhatsApp

Join Now

Telegram

Join Now

Instagram

Join Now