ವಿಜಯ ದರ್ಪಣ ನ್ಯೂಸ್…
ಜನ ಸಾಮಾನ್ಯರೊಂದಿಗೆ ವಿದ್ಯಾರ್ಥಿಗಳು ಬೆರೆಯಬೇಕು : ಮಲ್ಕುಂಡಿ ಮಹದೇವಸ್ವಾಮಿ

ತಾಂಡವಪುರ ಏಪ್ರಿಲ್ 18: ವಿದ್ಯಾರ್ಥಿಗಳು ಕೇವಲ ಓದುವುದಕಷ್ಟೇ ಸೀಮಿತವಾಗಿರದೇ ಜನಸಾಮಾನ್ಯರೊಂದಿಗೆ ಬೆರೆತು ಸಮಾಜದ ಒಡನಾಟ ಬೆಳೆಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಚಿಂತನೆ ನಡೆಸಬೇಕಿದೆ ಎಂದು ಚಿಂತಕ ಮಲ್ಕುಂಡಿ ಮಹದೇವಸ್ವಾಮಿ ಹೇಳಿದರು.
ಮೈಸೂರು ಮಹಾರಾಜ ಕಾಲೇಜಿನ ಜೂನಿಯರ್ ಬಿಎ ಹಾಲ್‌ನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಆಯೋಜಿಸಿದ್ದ ಉಚಿತ ರಕ್ತದಾನ, ಕಣ್ಣಿನ ತಪಾಸಣೆ ಹಾಗೂ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವ ಸಮೂಹ ಕೇವಲ ಓದು ಹಾಗೂ ಮೊಬೈಲ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಆದರೆ, ಪಠ್ಯದಿಂದಾಚೆಗೂ ಬರವಣೆಗೆಯನ್ನು ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಆಗು ಹೋಗುಗಳ ಬಗ್ಗೆಯೂ ಯುವ ಸಮೂಹಕ್ಕೆ ಅರವಿದ್ದಾಗ ಮಾತ್ರ ದೇಶ ಕಟ್ಟುವ ನಿಟ್ಟಿನಲ್ಲಿ ನಿಮ್ಮ ಶಕ್ತಿ ಹೊರಬರಲಿದೆ ಎಂದು ತಿಳಿಸಿದರು.
೨೦ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರೆ, ೧೫೦ಕ್ಕೂ ಹೆಚ್ಚು ಮಂದಿ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಜೀವಾಧಾರ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಗಿರೀಶ್, ಕಾಲೇಜಿನ ಪ್ರಾಂಶುಪಾಲ ಡಾ.ವಿ.ಷಣ್ಮುಗಂ, ಪ್ರಾದ್ಯಾಪಕ ಕೃಷ್ಣಪ್ಪ ಇನ್ನಿತರರು ಉಪಸ್ಥಿತರಿದ್ದರು.









