ವಿಜಯ ದರ್ಪಣ ನ್ಯೂಸ್…..
ಹಿತ್ತಲಹಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗೆ ಡಾಂಬರೀಕರಣಕ್ಕೆ ಶಾಸಕ ಬಿ.ಎನ್.ರವಿಕುಮಾರ್ ಗುದ್ದಲಿ ಪೂಜೆ

ಶಿಡ್ಲಘಟ್ಟ : ನನ್ನ ಅಧಿಕಾರಾವಧಿಯಲ್ಲಿ ಕ್ಷೇತ್ರದಾದ್ಯಂತ ಸಾಕಷ್ಟು ಗ್ರಾಮೀಣ ಭಾಗದ ರಸ್ತೆಗಳು ,ಪಿಡಬ್ಲ್ಯೂಡಿ ರಸ್ತೆಗಳನ್ನು ಹಲವಾರು ಯೋಜನೆಗಳ ಮೂಲಕ ಅನುದಾನ ತಂದು ಗುಣಮಟ್ಟದ ಡಾಂಬರೀಕರಣ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ಶಿಡ್ಲಘಟ್ಟ-ಜಂಗಮಕೋಟೆ ರಸ್ತೆಯ ಹಿತ್ತಲಹಳ್ಳಿ ಗೇಟ್ ನಿಂದ ಗ್ರಾಮದೊಳಗೆ ಸಂಪರ್ಕಿಸುವ ಸುಮಾರು 1.2 ಕಿ.ಮೀ. ದೂರದ ರಸ್ತೆಗೆ ಶಾಸಕರ ಅನುದಾನದಲ್ಲಿ 55 ಲಕ್ಷ ರೂ.ಗಳು ಹಾಗೂ ಸಿಎಂಐಡಿಪಿ ಅನುದಾನದಲ್ಲಿ 30 ಲಕ್ಷ ರೂ.ಗಳು ಸೇರಿ ಒಟ್ಟು 85 ಲಕ್ಷ ರೂ.ಗಳ ಮೊತ್ತದಲ್ಲಿ ಡಾಂಬರೀಕರಣ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದರು .
ನಂತರ ಮಾತನಾಡಿದರ ಅವರು 13 ವರ್ಷಗಳ ಹಿಂದೆ ಈ ರಸ್ತೆಗೆ ಡಾಂಬರೀಕರಣ ಮಾಡಿದ್ದು ಸಾಕಷ್ಟು ಹಾಳಾಗಿದ್ದು ಸಾರ್ವಜನಿಕರ ಓಡಾಟಕ್ಕೆ ಬಹಳಷ್ಟು ತೊಂದರೆಯಾಗಿದ್ದರಿಂದ ಈಗ 85 ಲಕ್ಷ ರೂ.ಗಳ ಮೊತ್ತದಲ್ಲಿ ಉತ್ತಮ ಗುಣ ಮಟ್ಟದ ಡಾಂಬರೀಕರಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ಹೇಳಿದರು.
ಶಿಡ್ಲಘಟ್ಟ-ಜಂಗಮಕೋಟೆ ಮಾರ್ಗದ ಆನೂರು ಕಟ್ಟೆಯ ಅಗಲೀಕರಣಕ್ಕೆ ಹಾಗೂ ಮಳಮಾಚನಹಳ್ಳಿ ಕೆರೆ ಕಟ್ಟೆಯ ಅಗಲೀಕರಣಕ್ಕೆ ತಲಾ ಎರಡುವರೆ ಕೋಟಿಯಂತೆ ಒಟ್ಟು ಐದು ಕೋಟಿ ಮೊತ್ತದಲ್ಲಿ ಕಟ್ಟೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲ ಸುಮಾರು ಹದಿನೈದರಿಂದ ಇಪ್ಪತ್ತು ವರ್ಷಗಳ ಕಾಲ ರಸ್ತೆ ಹಾಳಾಗದ ರೀತಿ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾದೂರು ರಘು ,ಕೃಷಿ ಪಂಡಿತ ಹೆಚ್.ಜಿ.ಗೋಪಾಲಗೌಡ ,ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಆರ್.ವೆಂಕಟೇಶ್, ಮಾಜಿ ಸದಸ್ಯ ನರಸಿಂಹಮೂರ್ತಿ, ಎಂ.ಪಿ.ಸಿ.ಎಸ್.ಅಧ್ಯಕ್ಷ ಲೋಕೇಶ್,
ಮುಖಂಡರಾದ ದೊಡ್ಡಗೋಪಾಲಪ್ಪ, ಹೆಚ್.ಕೆ.ಸುರೇಶ್, ಸಿರಿಕಲ್ಟರ್ ದೇವರಾಜ್ (ಸಿರಿಕಲ್ಚರ್), ಭಕ್ತರಹಳ್ಳಿ ಮಂಜುನಾಥ್,ನರಸಿಂಹ ಮೂರ್ತಿ, ಎಚ್.ಎಂ. ದೇವರಾಜ್,ಮುನಿರಾಜು, ರಾಮಕೃಷ್ಣಪ್ಪ ಸೇರಿದಂತೆ ಜೆಡಿಎಸ್ ಮುಖಂಡರು ಹಾಗೂ ಹಿತ್ತಲಳ್ಳಿ ಗ್ರಾಮಸ್ಥರು ಹಾಜರಿದ್ದರು.










