ವಿಜಯ ದರ್ಪಣ ನ್ಯೂಸ್……
ಮೈಸೂರು, ಚಾಮರಾಜನಗರ ಜಿಲ್ಲೆಯಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿಜೆವಿ ಗೆ ಪರಿಷತ್ ಸ್ಥಾನ ನೀಡುವಂತೆ ವರಿಷ್ಠರಿಗೆ ಶಾಸಕರ ಮನವಿ

ತಾಂಡವಪುರ ಮೇ 10 ಮೈಸೂರು ಜಿಲ್ಲೆ ಮತ್ತು ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಎರಡು ಜಿಲ್ಲೆಯ ಶಾಸಕರು ಮತ್ತು ಮಾಜಿ ಶಾಸಕರ ಸಮ್ಮುಖದಲ್ಲಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ.ಬಿ ಜೆ ವಿಜಯ್ ಕುಮಾರ್ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಬೇಕೆಂದು ಒಮ್ಮತದ ನಿರ್ಣಯ ಮಾಡಲಾಯಿತು.
ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ ಸತತವಾಗಿ 25 ವರ್ಷಗಳಿಂದ ಸಮರ್ಥವಾಗಿ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಿದ್ದು ಇದು ಮುಂಬರುವ ಅಧ್ಯಕ್ಷರುಗಳಿಗೆ ಮಾದರಿಯಾಗಿದೆ ಎಂದರು.

ನಾನು ರಾಜಕೀಯಕ್ಕೆ 2016 ರಲ್ಲಿ ಕಾಲಿಟ್ಟ ಆರಂಭದ ದಿನಗಳಲ್ಲಿ ವಿಜಯ್ ಅವರು ನನಗೆ ಸಾಕಷ್ಟು ಮಾರ್ಗದರ್ಶನ ನೀಡಿ ನನಗೆ ಹಾಗೂ ನಮ್ಮ ಕುಟುಂಬಕ್ಕೆ ಎಲ್ಲಾ ಹಂತದಲ್ಲೂ ಬೆನ್ನೆಲುಬಾಗಿ ನಿಂತಿದ್ದಾರೆ. ನಾನು ರಾಜಕೀಯವಾಗಿ ಬೆಳೆಯಲು ಅವರ ಸಹಕಾರ ಬಹಳಷ್ಟು ಇದೆ ಅದನ್ನ ನಾವು ಮರೆಯುವುದು ಮನುಷ್ಯತ್ವದ ಗುಣವಲ್ಲ ಎಂದರು.
ಜಿಲ್ಲೆಯ ಎಲ್ಲಾ ಚುನಾವಣೆ ಹಾಗೂ ಉಪಚುನಾವಣೆಗಳಲ್ಲಿ ಅವರ ಶ್ರಮವನ್ನ ಕಾಂಗ್ರೆಸ್ ಪಕ್ಷ ಹಾಗೂ ಶಾಸಕರಾಗಿರುವ ಎಲ್ಲರೂ ಮರೆಮಾಚಲು ಸಾಧ್ಯವಿಲ್ಲ ಎಂದರು. ಆದ್ದರಿಂದ ಈ ಬಾರಿ ಅವರಿಗೆ ಪರಿಷತ್ತಿಗೆ ಅವಕಾಶ ಕಲ್ಪಿಸುವುದು ಸರ್ಕಾರದ ಹೊಣೆ ಹಾಗೂ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.
ಪಕ್ಷ ಕೊಟ್ಟ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿರುವ ಅವರು ಎಂದು ಎಲ್ಲೋ ಸಣ್ಣ ಲೋಪವನ್ನು ಎಸೆಗದೆ ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದರೆ ತಪ್ಪಾಗಲಾರದು ಎಂದರು.
ಇಂದಿನ ಸಭೆಯಲ್ಲಿ ಮೈಸೂರು ಮತ್ತು ಚಾಮರಾಜನಗರದ ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಶಾಸಕರು ಮತ್ತು ಜನಪ್ರತಿನಿಧಿಗಳು ಒಮ್ಮತದ ನಿರ್ಣಯಕ್ಕೆ ಬಂದಿದ್ದಾರೆ ಎಂದರು. ಈಗಾಗಲೇ ವಿಜಯ್ ಕುಮಾರ್ ಅವರಿಗೆ ಪಾರ್ಲಿಮೆಂಟ್ ಹಾಗೂ ವಿಧಾನಸಭೆಗಳಲ್ಲಿ ಅವಕಾಶ ವಂಚನೆಯಾಗಿದೆ, ಈಗ ಅವರಿಗೆ ಅವಕಾಶ ಕಲ್ಪಿಸುವುದು ನಮ್ಮೆಲ್ಲರ ನೈತಿಕ ಹೊಣೆಗಾರಿಕೆ ಎಂದು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷರು ಮತ್ತು ಶಾಸಕ ತನ್ವಿರ್ ಸೇಠ್ ಮಾತನಾಡಿ ಪಕ್ಷಕ್ಕಾಗಿ 7 FIR ದಾಖಲಿಸಿಕೊಂಡು ಹೊರಡುತ್ತಿದ್ದಾರೆ ಎಂದರೆ ಡಾ.ಬಿ ಜೆ ವಿಜಯ್ ಕುಮಾರ್ ನಿಷ್ಠೆ ಎಂತಹದ್ದು ಎಂದು ತಿಳಿಯುತ್ತದೆ. ಅಧಿಕಾರದಲ್ಲಿ ಇದ್ದು ಜನ ಸೇವೆ ಮಾಡೋದು ಕಷ್ಟ ಅದರಲ್ಲೂ ಜಿಲ್ಲಾಧ್ಯಕ್ಷರಾಗಿ ಇಷ್ಟೊಂದು ಪ್ರೀತಿ ಮತ್ತು ಜನಮಣ್ಣನೇ ಗಳಿಸುವುದು ಬಹಳ ಕಷ್ಟ ಎಂದು ಹೇಳಿ ಪಕ್ಷಕ್ಕೆ ಮುಜುಗರ ಉಂಟುಮಾಡೋ ಕೆಲಸ ಮಾಡಬಾರದು.
ಬಹಳಷ್ಟು ಜನ ನಮ್ಮ ಪಕ್ಷಕ್ಕಾಗಿ ದುಡಿದಿದ್ದಾರೆ ನಾವು ಭಾರಿ ಬಹುಮತದಿಂದ ಸರಕಾರ ಹಿಡಿದಿದ್ದೇವೆ ಎಲ್ಲರಿಗೂ ಅವಕಾಶ ಕೊಡಲು ಅಸಾಧ್ಯ ಆದರೆ ಹಂತ ಹಂತವಾಗಿ ಅವಕಾಶ ಸಿಗುತ್ತದೆ ಆದರೆ ಈ ಬಾರಿ ಡಾ ಬಿಜೆ ವಿಜಯ್ ಕುಮಾರ್ ಅವರ ಸೇವೆಯನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷ ಅವರಿಗೆ ವಿಧಾನ ಪರಿಷತ್ ಅಥವಾ ರಾಜ್ಯಸಭಾ ಸ್ಥಾನ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದು ನುಡಿದರು.
ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ರವಿಶಂಕರ್ ಮಾತನಾಡಿ ಯಾವ ಚುನಾವಣೆಯಲ್ಲೂ ಯಾವ ಅಭ್ಯರ್ಥಿಯಿಂದ ಯಾವ ಅಪೇಕ್ಷೆ ಇಲ್ಲದೆ ಅತ್ಯಂತ ಪ್ರಾಮಾಣಿಕವಾಗಿ ಪಕ್ಷ ಸೇವೆ ಮಾಡಿದ್ದು ನನ್ನ ಮಿತ್ರ ವಿಜಯಕುಮಾರ್ ಅವರು ಎಂದರು.
ಹೆಚ್ಡಿ. ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ ಮೈಸೂರು ಜಿಲ್ಲೆಯಲ್ಲಿ ಎರಡನೇ ತಲೆಮಾರಿನ ಶಾಸಕರು ಅತ್ಯಂತ ಒಗ್ಗಟ್ಟಿನಿಂದ ಕೆಲಸ ಮಾಡಲು ಚುನಾವಣೆ ಗೆಲ್ಲಲು ವಿಜಯ್ ಕುಮಾರ್ ಅವರ ಸಹಕಾರವಿದೆ ಎಂದರು.
ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್ ಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಪುಟ್ಟರಂಗಶೆಟ್ಟಿ, ಎ ಆರ್.ಕೃಷ್ಣಮೂರ್ತಿ , ದರ್ಶನ್ ಧ್ರುವನಾರಾಯಣ್ ಕೆ ಹರೀಶ್ ಗೌಡ,
ಮಾಜಿ ಶಾಸಕರಾದ ಮರಿತಿಬ್ಬೆಗೌಡ, ಜಿ.ಏನ್. ನಂಜುಂಡಸ್ವಾಮಿ ಎಂ ಕೆ ಸೋಮಶೇಖರ್, ಕಳಲೆ ಕೇಶವಮೂರ್ತಿ, ಶ್ರೀಮತಿ ಸುನಿತ ವೀರಪ್ಪಗೌಡ, ಬನ್ನೂರ್ ಎಂ ಕೃಷ್ಣಪ್ಪ, ಎನ್.ಧರ್ಮ ಸೇನಾ, ವಿವಿಧ ನಿಗಮಗಳ ಅಧ್ಯಕ್ಷರಾದ ಹಾಡ್ಯ ರಂಗಸ್ವಾಮಿ, ಎಚ್ ಡಿ ಗಣೇಶ್ ರಾಮಪ್ಪ, ರಾಮಪ್ಪ ಭೋವಿ, ಅನಂತು, ಮೂಡ ಮಾಜಿ ಅಧ್ಯಕ್ಷರಾದ ಕೆಮರಿಗೌಡ, ರಾಜೀವ್, ಕೆಎಂಎಫ್ ಮೈಸೂರ ಜಿಲ್ಲಾ ಅಧ್ಯಕ್ಷ ಈರೇಗೌಡರು,
ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೂರ್ಗಳ್ಳಿ ಮಾದೇವ್, ಮಾಜಿ ಮೇಯರ್ಗಳಾದ ಪುರುಷೋತ್ತಮ್, ಟಿಬಿ. ಚಿಕ್ಕಣ್ಣ, ಕೆಪಿಸಿಸಿಯ ಜಿಲ್ಲಾ ವ್ಯಾಪ್ತಿ ಪದಾಧಿಕಾರಿಗಳು, ಹಾಗೂ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಕೀಲರು ಆದ ಎಂಸಿ ಹುಂಡಿ ಶಿವಪ್ರಸಾದ್ ಹಿರಿಯ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಸಕಳ್ಳಿ ಬಸವರಾಜು, ಎಂಟು ವಿಧಾನಸಭಾ ಕ್ಷೇತ್ರದ 16 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, 25 ಮಂಚೂಣಿ ಘಟಕದ ಅಧ್ಯಕ್ಷರು ಹಾಗೂ ಡಿಸಿಸಿಯ ಎಲ್ಲ ಹಂತದ ಪದಾಧಿಕಾರಿಗಳು ಹಕ್ಕುತ್ತಾಯಕ್ಕೆ ಅಧಿಕೃತವಾಗಿ ಸಹಿ ಮಾಡಿ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಹೈಕಮಾಂಡ್ ಗೆ ಸಭೆಯ ಮೂಲಕ ರವಾನಿಸಿದ್ದಾರೆ.









