ವಿಜಯ ದರ್ಪಣ ನ್ಯೂಸ್….
ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ತಾಂಡವಪುರ ಆಗಸ್ಟ್ 11 ಮೈಸೂರು ಜಿಲ್ಲೆ: ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಶಿಕ್ಷಣ ಕ್ಷೇತ್ರಕ್ಕೆ ಹೆಸರುವಾಸಿಯಾಗಿರುವ ಸುತ್ತೂರು ಗ್ರಾಮದಲ್ಲಿರುವ ಸುತ್ತೂರು ಮಠಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ರಾಮಯ್ಯನವರು ಭೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದರು
ಬಳಿಕ ಮಾತನಡಿದ ಸಚಿವರು ನಾನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕ ಮಾಡಿದ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ನಮ್ಮ ಸ್ವಕ್ಷೇತ್ರ ದಲ್ಲಿ ಇರುವ ಸುತ್ತೂರು ಮಠಕ್ಕೆ ಭೇಟಿ ನೀಡಿ ಸುತ್ತೂರು ಮಠದ ಶ್ರೀಗಳದ ಶ್ರೀ ದೇಶಕೇಂದ್ರ ಮಹಾ ಸ್ವಾಮೀಜಿಯವರ ಆಶೀರ್ವಾದವನ್ನು ಪಡೆದುಕೊಂಡಿದ್ದೇನೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ಹಿಂದುಳಿದ ವರ್ಗಗಳ ಮುಖಂಡ ಶಿವರಾಮು ಮುಖಂಡರಾದ ತೊರೆಮಾವು ಟಿ ಡಿ ಗಿರೀಶ್ ಹುಳಿಮಾವು ನಟರಾಜು ಕುಮಾರ ಸೇರಿದಂತೆ ಇನ್ನೂ ಅನೇಕ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು
ಶ್ರೀಸುಜಯನಿಧಿ ತೀರ್ಥ ಶ್ರೀಪಾದರ ಚಾತುರ್ಮಾಸ್ಯ ಸಂಕಲ್ಪ ದೀಕ್ಷೆ

ಬೆಂಗಳೂರು: ಮುಳಬಾಗಿಲು ಶ್ರೀಪಾದರಾಜ ಮಠದ ಶ್ರೀಸುಜಯನಿಧಿ ತೀರ್ಥ ಶ್ರೀಪಾದರ ಚಾತುರ್ಮಾಸ್ಯ ಸಂಕಲ್ಪವನ್ನು ಚಾಮರಾಜಪೇಟೆಯ ಶ್ರೀಪಾದರಾಜ ಮಠದಲ್ಲಿ ಕೈಗೊಂಡರು,
ಅವರು ರಾಘವೇಂದ್ರ ಕಾಲೋನಿಯಲ್ಲಿರುವ ಮಠದಲ್ಲಿ ಮೃತ್ತಿಕಾ ಸ್ಥಾಪನೆಯನ್ನು ಮಾಡಿ ಪೂಜಿಸಿ, ನಂತರ ಶ್ರೀವೇದವ್ಯಾಸರನ್ನು ಪ್ರತಿಷ್ಠಾಪಿಸಿ ಪೂಜಿಸಿ ಚತುರ್ಮಾಸ್ಯ ಸಂಕಲ್ಪವನ್ನು ಮಾಡಿ ಪಂಡಿತರಿಗೆ ಫಲಮಂತ್ರಕ್ಷತೆಯನ್ನು ನೀಡಿದರು. ನಂತರ ಭಕ್ತರು ಹಾಗೂ ಗೃಹಸ್ಥರಿಗೆ ಅನುಗ್ರಹಿಸಿ ಆಶೀರ್ವದಿಸಿದರು,
ತಮ್ಮ ಆರಾಧ್ಯಮೂರ್ತಿ ರಂಗವಿಠ್ಠಲಾತ್ಮಕ ಶ್ರೀ ಗೋಪಿನಾಥ ದೇವರು ಸಹಿತ ಸಂಸ್ಥಾನ ಮುಖ್ಯ ಪ್ರತಿಮೆಗಳಿಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನೂರಾರು ಭಕ್ತರು ಹಾಜರಿದ್ದು ತೀರ್ಥಪ್ರಸಾದ ಪಡೆದು ಭಗವಂತನ ಕೃಪಾಶಿರ್ವಾದಕ್ಕೆ ಪಾತ್ರರಾದರು.











