--Ads--

ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರ 94ನೇ ವರ್ಷದ ಹುಟ್ಟು ಹಬ್ಬ ಮೇ-18 ರಂದು ಆಚರಣೆ : ಶಾಸಕ ಬಿ.ಎನ್.ರವಿಕುಮಾರ್

On: May 17, 2026 10:54 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರ 94ನೇ ವರ್ಷದ ಹುಟ್ಟು ಹಬ್ಬ ಮೇ-18 ರಂದು ಆಚರಣೆ : ಶಾಸಕ ಬಿ.ಎನ್.ರವಿಕುಮಾರ್

ಶಿಡ್ಲಘಟ್ಟ : ಜೆಡಿಎಸ್ ಪಕ್ಷದ ವರಿಷ್ಠರು ಹಾಗು ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರ 94ನೇ ವರ್ಷದ ಹುಟ್ಟು ಹಬ್ಬವನ್ನು ಮೇ.18 ರಂದು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು
ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ತಾಲ್ಲೂಕಿನ ಹಂಡಿಗನಾಳ ಬಳಿಯ “ಬಾಲಾಜಿ ಕನ್ವೆಂಷನ್ ಹಾಲ್ ” ಗೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತಾನಾಡಿದ ಅವರು ಜೆಡಿಎಸ್ ಪಕ್ಷದ ವರಿಷ್ಠರು ಹಾಗು ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರ 94ನೇ ವರ್ಷದ ಹುಟ್ಟು ಹಬ್ಬವನ್ನು ಮೇ .18 ರ ಸೋಮವಾರದಂದು ಹಂಡಿಗನಾಳದ ಶ್ರೀಬಾಲಾಜಿ ಕನ್ವೆಂಷನ್ ಹಾಲ್ ನಲ್ಲಿ ತಾಲ್ಲೂಕು ಜೆಡಿಎಸ್‌ ಪಕ್ಷದ ವತಿಯಿಂದ ಆಚರಿಸಲು ಸಿದ್ದತೆಗಳು ನಡೆದಿವೆ ಎಂದರು.

ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರ 94ನೇ ವರ್ಷದ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದ ಅವರು ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ಶಾಲೆಯ ಮೂವರು ವಿದ್ಯಾರ್ಥಿಗಳು ಹಾಗೂ ಮೂರು ಸರ್ಕಾರಿ ಶಾಲೆಗಳಿಗೆ ನಗದು ಬಹುಮಾನ ನೀಡುವುದು ಸೇರಿದಂತೆ ಹಲವು ರೀತಿಯ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಈ ವಯಸಿನಲ್ಲೂ ಅವರು ಕೃಷಿ, ರೈತರು, ನೀರಾವರಿ ಯೋಜನೆಗಳ ಬಗ್ಗೆ ತೋರುವ ಕಾಳಜಿ, ಕೇಂದ್ರ ಅಥವಾ ರಾಜ್ಯ ಸರ್ಕಾರವೇ ಇರಲಿ ಸರ್ಕಾರದ ಮೇಲೆ ಒತ್ತಡ ಹಾಕಿ ಯೋಜನೆ ಜಾರಿಗೊಳಿಸುವ ಅವರ ರಾಜಕೀಯ ಅನುಭವ, ಜಾಣ್ಮೆ, ಮುತ್ಸದ್ದಿತನ ಬಗ್ಗೆ ಯುವಕರಿಗೆ ತಿಳಿಸುವ ಕೆಲಸ ಆಗಬೇಕಿದೆ ಎಂದರು.

ಕಾರ್ಯಕ್ರಮಕ್ಕೆ ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಂ.ಮಲ್ಲೇಶ್ ಬಾಬು ಸೇರಿದಂತೆ ಕ್ಷೇತ್ರದ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ತಾದೂರು ರಘು, ಆರ್.ಎ.ಉಮೇಶ್,ಕುಂದಲಗುರ್ಕಿ ಚಂದ್ರು,
ವಿಜಯಕುಮಾರ್, ರಮೇಶ್ ಇನ್ನೀತರರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದರೆ ದೇಶವು ಪ್ರಗತಪತದತ್ತ ಸಾಗಲಿದೆ : ಶಾಸಕ ಬಿ.ಎನ್.ರವಿಕುಮಾ‌ರ್

ಸುಂಡ್ರಹಳ್ಳಿಯ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಯೋಧರನ್ನು  ವಿವಿಧ ಸಂಘಟನೆಗಳಿಂದ ಸನ್ಮಾನ

ಜಿಕೆವಿಕೆ ವಿದ್ಯಾರ್ಥಿಗಳಿಂದ ಸಾಮಾಜಿಕ ಹಾಗೂ ಋತುಮಾನ ನಕ್ಷೆಗಳ ಪ್ರದರ್ಶನ

ಮಕ್ಕಳಲ್ಲಿ ಪ್ರಶ್ನಿಸುವ, ಚಿಂತಿಸುವ ಮತ್ತು ಸ್ವತಂತ್ರವಾಗಿ ಕಲಿಯುವ ಮನೋಭಾವ ಬೆಳೆಸಬೇಕು : ಉಪನ್ಯಾಸಕಿ ವಾಣಿ

ಪುಟ್ ಪಾತ್ ಒತ್ತವರಿ ತೆರವುಗೊಳಿಸಲು ಅಂಗಡಿ ಮಾಲಿಕರಿಗೆ ನಗರಠಾಣೆ ಪಿಎಸ್ಐ ಸೂಚನೆ

ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಆಕ್ಷೇಪಣೆಗಳನ್ನು ಸಲ್ಲಿಸಲು ಎರಡು ತಿಂಗಳ ಕಾಲಾವಕಾಶ ನೀಡಲಾಗುತ್ತದೆ : ಎಸ್.ಎಸ್.ಅಬೀದ್