--Ads--

ಜೂನ್ 7 ರಂದು ನಗರದಲ್ಲಿ ಶ್ರೀರಾಮ ಶೋಭಾಯಾತ್ರೆ

On: May 17, 2026 6:16 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಜೂನ್ 7 ರಂದು ನಗರದಲ್ಲಿ ಶ್ರೀರಾಮ ಶೋಭಾಯಾತ್ರೆ

ಶಿಡ್ಲಘಟ್ಟ : ನಗರದ ಹೊರವಲಯದ ಹನುಮಂತಪುರ ಗೇಟ್ ಬಳಿ ಇರುವ ಶ್ರೀಆಂಜನೇಯಸ್ವಾಮಿ ದೇವಾಲಯದ ಆವರಣದಿಂದ ಜೂನ್-7 ರಂದು ಬೆಳಿಗ್ಗೆ 11 ಗಂಟೆಗೆ ಶೋಭಾಯಾತ್ರೆ ಪ್ರಾರಂಭವಾಗಲಿದ್ದು ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆಯು ಸಂಚರಿಸಲಿದ್ದು ಪಕ್ಷಾತೀತವಾಗಿ ಎಲ್ಲರೂ ಬಾಗವಹಿಸಬೇಕೆಂದು ಶ್ರೀರಾಮ ಶೋಭಾಯಾತ್ರೆ ಆಚರಣಾ ಟ್ರಸ್ಟ್ ನ ಅಧ್ಯಕ್ಷ ಬಿ.ವೆಂಕಟೇಶ್ ಮನವಿ ಮಾಡಿದರು.

ನಗರದ ಬಸ್‌ ನಿಲ್ದಾಣದ ಬಳಿಯಿರುವ ಕಚೇರಿಯಲ್ಲಿ ಶ್ರೀರಾಮ ಶೋಭಾಯಾತ್ರೆಯ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು.

ನಗರದಲ್ಲಿ ನಡೆಯಲಿರುವ ಶ್ರೀರಾಮ ಶೋಭಾಯಾತ್ರೆಯಲ್ಲಿ ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಹಿಂದೂ ಬಾಂಧವರು ಭಾಗವಹಿಸಿ ಶೋಭಾಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.

ಶೋಭಾಯಾತ್ರೆಯಲ್ಲಿ ನಾನಾ ಜನಪದ ಕಲಾ ತಂಡಗಳು ಇರಲಿವೆ 10 ಅಡಿ ಎತ್ತರ ಶ್ರೀರಾಮ ಮೂರ್ತಿ 10 ಅಡಿ ಉದ್ದದ ಶಿವನ ವಿಗ್ರಹ ಹಾಗೂ ಕುರುಕ್ಷೇತ್ರ ರಥ ಹನುಮ ಮತ್ತು ನರಸಿಂಹಸ್ವಾಮಿಯ ವೇಷಧಾರಿಗಳು, ಕೇರಳದ ಚಂಡೆ ವಾಧ್ಯ ಇನ್ನಿತರೆ ಕಲಾತಂಡಗಳು ಶೋಭಾಯಾತ್ರೆಯ ಆಕರ್ಷಣೆಯಾಗಿ ಇರಲಿವೆ ಎಂದರು

ಶೋಭಾಯಾತ್ರೆ ಮೆರವಣಿಗೆ ನಂತರ ಬಸ್ ನಿಲ್ದಾಣದ ಬಳಿ ವೇದಿಕೆ ಕಾರ್ಯಕ್ರಮವಿರಲಿದ್ದು ಮುಖ್ಯ ಭಾಷಣಕಾರರಾಗಿ ಹಾರಿಕಾ ಮಂಜುನಾಥ್‌ ಹಾಗೂ ರಘು ಸಕಲೇಶಪುರ ಭಾಗವಹಿಸಲಿದ್ದಾರೆ ಎಂದರು.

ಶ್ರೀರಾಮ ಶೋಭಾಯಾತ್ರೆಯ ಕರಪತ್ರಗಳನ್ನು ಮನೆಮನೆಗೂ ತಲುಪಿಸಲಾಗುವುದು ,ಅನೇಕ ಹಳ್ಳಿಗಳಿಂದ ಸ್ವಯಂಪ್ರೇರಿತರಾಗಿ ಪಲ್ಲಕ್ಕಿಗಳನ್ನು ತಂದು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಹಿಂದೂ ಸಮಾಜದ ಐಕ್ಯತೆ ಕಾಪಾಡಬೇಕು ಎಂದು ನುಡಿದರು.

ಈ ಸಂದರ್ಭದಲ್ಲಿ ಶ್ರೀರಾಮ ಶೋಭಾಯಾತ್ರೆ ಆಚರಣಾ ಟ್ರಸ್ಟ್ ನ ಗೌರವಾಧ್ಯಕ್ಷ ಪ್ರಕಾಶ್‌, ಉಪಾಧ್ಯಕ್ಷ ಮಂಜುನಾಥ್, ಪ್ರದಾನ ಕಾರ್ಯದರ್ಶಿ ಅನಿಲ್‌ಕುಮಾ‌ರ್,ರವಿಚಂದ್ರ,ಜಿ.ಕೆ.ಭರತ್, ನಾಗೇಶ್,ಕಿರಣ್, ಲಕ್ಷ್ಮೀಪತಿ, ರಾಮಾಂಜಿನೇಯ ಹಾಜರಿದ್ದರು.

WhatsApp

Join Now

Telegram

Join Now

Instagram

Join Now