--Ads--

ಮಳೆ ಕೊರತೆಯಿಂದ ಬರ ಪರಿಸ್ಥಿತಿ ನಿರ್ಮಾಣ : ರೇಷ್ಮೆ ಬೆಳೆಗಾರರ ಒಕ್ಕೂಟ ರೇಷ್ಮೆ ಇಲಾಖೆಗೆ ಮನವಿ

On: September 28, 2026 5:14 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಮಳೆ ಕೊರತೆಯಿಂದ ಬರ ಪರಿಸ್ಥಿತಿ ನಿರ್ಮಾಣ : ರೇಷ್ಮೆ
ಬೆಳೆಗಾರರ ಒಕ್ಕೂಟ ರೇಷ್ಮೆ ಇಲಾಖೆಗೆ ಮನವಿ

ಶಿಡ್ಲಘಟ್ಟ : ಹಿಪ್ಪುನೇರಳೆ ಸೊಪ್ಪಿಗೆ ನುಸಿ, ಎಲೆ ಸುರುಳಿ ಸೇರಿದಂತೆ ವಿವಿಧ ರೋಗಗಳು ಬಾಧಿಸುತ್ತಿರುವುದರಿಂದ ಸೊಪ್ಪಿನ ಇಳುವರಿ ಕುಂಠಿತವಾಗಿದೆ ರೇಷ್ಮೆ ಹುಳುಗಳಿಗೆ ಸುಣ್ಣಕಟ್ಟು, ತೊಂಡೆ ಹಾಲು ತೊಂಡೆ , ಬಿಳಿ ಮಚ್ಚೆ, ಕಪ್ಪು ಕಂಕ ಹಾಗೂ ಫ್ಲಾಚೆರಿ ಮತ್ತಿತರ ರೋಗಗಳು ಕಾಣಿಸಿಕೊಳ್ಳುತ್ತಿದ್ದು, ಗೂಡಿನ ಉತ್ಪಾದನೆಯೂ ಕಡಿಮೆಯಾಗಿದೆ ಎಂದು ರೇಷ್ಮೆ ಬೆಳೆಗಾರರ ಒಕ್ಕೂಟ ವಿವರಿಸಿದರು.

ನಗರದ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ
ಅಕ್ಮಲ್ ಪಾಷ ಅವರ ಮೂಲಕ ರೇಷ್ಮೆ ಅಭಿವೃದ್ಧಿ ಆಯುಕ್ತರಿಗೆ ರೇಷ್ಮೆ ಬೆಳೆಗಾರರು ಮನವಿ ಸಲ್ಲಿಸಿದರು.

ಬರ ಪರಿಸ್ಥಿತಿ, ಹಿಪ್ಪುನೇರಳೆ ಬೆಳೆಗೆ ಬಾಧಿಸುತ್ತಿರುವ
ವಿವಿಧ ರೋಗಗಳು ಹಾಗೂ ರೇಷ್ಮೆ ಹುಳು ಸಾಕಾಣಿಕೆಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳಿಂದ ರೇಷ್ಮೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಸಮಸ್ಯೆಗಳ ಪರಿಹಾರಕ್ಕಾಗಿ ಅತೀ ಶೀಘ್ರವಾಗಿ ರಾಜ್ಯ ಮಟ್ಟದ ರೇಷ್ಮೆ ಬೆಳೆಗಾರರ ಕುಂದುಕೊರತೆಗಳ ಭಾಗೀದಾರರ ಸಭೆ ಕರೆಯಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.

2026ರಲ್ಲಿ ಮಳೆ ಕೊರತೆಯಿಂದ ಬರ ಪರಿಸ್ಥಿತಿ ನಿರ್ಮಾಣ ವಾಗಿದ್ದು, ಕೋಲಾರ ಸೇರಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರದೇಶಗಳಲ್ಲಿ ರೇಷ್ಮೆ ಬೆಳೆಗಾರರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ರೈತರು ಮನವಿಯಲ್ಲಿ ತಿಳಿಸಿದ್ದಾರೆ.

ರೇಷ್ಮೆ ಬೆಳೆಗಾರರಿಗೆ ಹುಳು ಸಾಕಾಣಿಕೆ ಮನೆ, ಹನಿ ನೀರಾವರಿ, ಶೇಡ್ ನೆಟ್, ಬೆಡ್ ಕ್ಲೀನ್ ಶೀಟ್ ಹಾಗೂ ಸೋಂಕು ನಿವಾರಕ ಔಷಧ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಟ್ರ್ಯಾಕ್ಟ‌ರ್, ಚಾಪ‌ರ್ ಕಟರ್, ಟಿಲ್ಲರ್, ಕಳೆನಾಶಕ ಹಾಗೂ ಬೀಚಿಂಗ್ ಸ್ಪೇಯರ್ ಗಳಿಗೆ ನೀಡಲಾಗುತ್ತಿದ್ದ ಸಹಾಯಧನ ಕಡಿಮೆಯಾಗಿರುವುದರಿಂದ ರೈತರಿಗೆ ತೊಂದರೆಯಾಗಿದ್ದು, ಸಬ್ಸಿಡಿ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ರೇಷ್ಮೆಗೂಡಿನ ಹೈಟೆಕ್ ಮಾರುಕಟ್ಟೆಗೆ ಸ್ವಾಗತಾರ್ಹ ಆದರೆ ಇದಕ್ಕೆ ಪೂರಕವಾಗಿ ರೈತರು ಕೇಳುತ್ತಿರುವ ಸೌಲಭ್ಯಗಳನ್ನು ಒದಗಿಸಿ, ರೇಷ್ಮೆ ಬೆಳೆಗಾರರು ಬೇರೆ ಬೆಳೆಗಳತ್ತ ವಲಸೆ ಹೋಗುವುದನ್ನು ತಡೆಯಬೇಕು ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ವಿಸ್ತರಣಾ ಕಾರ್ಯಕ್ಕೆ ಅಗತ್ಯ ಸಿಬ್ಬಂದಿಯನ್ನು ನೇಮಿಸಬೇಕು ಎಂದು ರೈತರು ಒತ್ತಾಯಿಸಿದರು.

ಹಿಪ್ಪುನೇರಳೆ ಸೊಪ್ಪು ಕಟಾವಿಗೆ ಕಾರ್ಮಿಕರ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿರುವುದರಿಂದ ಸೊಪ್ಪು ಕಟಾವು ಯಂತ್ರವನ್ನು ಅಭಿವೃದ್ಧಿಪಡಿಸಿ ರೈತರಿಗೆ ಒದಗಿಸಬೇಕು. NREGA ಯೋಜನೆಯಡಿ ರೇಷ್ಮೆ ತೋಟಗಳಲ್ಲಿ ಟ್ರೆಂಚಿಂಗ್ ಕಾಮಗಾರಿ ಕೈಗೊಳ್ಳಬೇಕು. MGNREGA ಯೋಜನೆಯಡಿ ರೇಷ್ಮೆ ಹಾಗೂ ಹಿಪ್ಪುನೇರಳೆ ಬೆಳೆಗಳಿಗೆ ಅಗತ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ,ರೇಷ್ಮೆ ಹುಳು ಸಾಕಾಣಿಕೆಯಲ್ಲಿ ಬೆಳೆ ಹಾನಿಯಾದ ಸಂದರ್ಭದಲ್ಲಿ ರೈತರಿಗೆ ವಿಮೆ ಸೌಲಭ್ಯ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ದ್ವಿತಳಿ (ಬೈವೋಲ್ಟಿನ್) ರೇಷ್ಮೆ ಗೂಡು ಉತ್ಪಾದನೆಗೆ ರೈತರನ್ನು ಪ್ರೇರೇಪಿಸುವ ಉದ್ದೇಶದಿಂದ ದ್ವಿತಳಿ ರೇಷ್ಮೆ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸಿರುವ ತಮಿಳುನಾಡಿಗೆ ರೈತರ ಅಧ್ಯಯನ ಪ್ರವಾಸ ಏರ್ಪಡಿಸಬೇಕು ಎಂದು ಮನವಿ ಮಾಡಿದರು.

ರೇಷ್ಮೆ ಉತ್ಪಾದನೆಯಲ್ಲಿ ಉಂಟಾಗಿರುವ ಹಿನ್ನಡೆಯಿಂದಾಗಿ ಕೆಲವು ರೈತರು ಹೂವು, ಟೊಮೆಟೊ, ದಾಳಿಂಬೆ ಸೇರಿದಂತೆ ಇತರ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ ,ರೇಷ್ಮೆ ಇಲಾಖೆಯಿಂದ ರೈತರಿಗೆ ಅಗತ್ಯ ಮಾಹಿತಿ ಹಾಗೂ ತಾಂತ್ರಿಕ ಮಾರ್ಗದರ್ಶನ ಸಮರ್ಪಕವಾಗಿ ದೊರೆಯದಿರುವುದೂ ಸಮಸ್ಯೆಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವೇಳೆ ರೇಷ್ಮೆ ಬೆಳೆಗಾರರು ಹಾಗೂ ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್.ಜಿ.ಗೋಪಾಲಗೌಡ, ಸಿರಿ ಸಮೃದ್ಧಿ ರೈತರ ಕೂಟದ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ, ರಾಮಮೂರ್ತಿ,ಕಾಚಹಳ್ಳಿ ಶೈಲಜಾ ಮಳ್ಳೂರು ವನಿತಾ, ಸರೋಜಮ್ಮ, ರಾಮಚಂದ್ರಪ್ಪ, ಮಂಜುನಾಥ್, ಇದ್ಲೂಡು ರಾಮಚಂದ್ರಪ್ಪ,
ಹರಳಹಳ್ಳಿ ವೆಂಕಟೇಶ್,ಮಳಮಾಚನಹಳ್ಳಿ ವೆಂಕಟೇಶ್,
ಪಾಪಣ್ಣ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now