ವಿಜಯ ದರ್ಪಣ ನ್ಯೂಸ್…..
ದೇವರತ್ನ ಫೌಂಡೇಶನ್ ವತಿಯಿಂದ ತರಬೇತಿ ಪಡೆಯಲು ತೆರುಳುತ್ತಿರುವ ಕ್ರೀಡಾಪಟುಗೆ ನೆರವು

ತಾಂಡವಪುರ ಮೇ 21 ಕೋಲ್ಕತಾ ತರಬೇತಿಗೆ ಹೋಗುವ ಕ್ರೀಡಾಪಟುಗೆ 20 ಸಾವಿರ ರೂ ಗಳನ್ನು ದೇವರತ್ನ ಫೌಂಡೇಷನ್ ಸಂಸ್ಥಾಪಕರಾದ ಹಾಗೂ ವಕೀಲರು ಆದ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಎಂಸಿ ಹುಂಡಿ ಶಿವಪ್ರಸಾದ್ ರವರು ದೇವ ರತ್ನ ಫೌಂಡೇಶನ್ ವತಿಯಿಂದ ಕ್ರೀಡಾಪಟು ವಿದ್ಯಾರ್ಥಿಗೆ ನೆರವಾಗಲು ಧನ ಸಹಾಯ ಮಾಡಿದರು ಮೈಸೂರು ಮಹಾರಾಣಿ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಇವರಿಗೆ
ಈ ಹಣದ ಮೊತ್ತವನ್ನು MANJU’S CLASSES ನ ನಿರ್ದೇಶಕ ಅಡಕನಹಳ್ಳಿಮಂಜುನಾಥ್ ರವರ ಮೂಲಕ ನೀಡಿ ಕ್ರೀಡಪಡುವಿಗೆ ಶುಭ ಹಾರೈಸಿದರು ಈ ಸಂದರ್ಭದಲ್ಲಿ ಸಂಸ್ಥೆಯವರು ವಿದ್ಯಾರ್ಥಿಗಳು ಹಾಜರಿದ್ದರು
ರಾಷ್ಟ್ರೀಯ ಪ್ರಶಸ್ತಿಗಳಿಗೆ ವಿಶೇಷಚೇತನರಿಂದ ಅರ್ಜಿ ಆಹ್ವಾನ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ. 21: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2026ನೇ ಸಾಲಿನಲ್ಲಿ ವಿಶೇಷಚೇತನರ ಸಬಲೀಕರಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗಳಿಗೆ ಅನ್ ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜಿಲ್ಲೆಯ ಅರ್ಹ ವಿಶೇಷಚೇತನರು ರಾಷ್ಟ್ರೀಯ ಪ್ರಶಸ್ತಿಗಳ ಅರ್ಜಿಗಳು/ನಾಮನಿರ್ದೇಶನಗಳನ್ನು ಸ್ವೀಕರಿಸಲು ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ www.awards.gov.in ನಲ್ಲಿ ಮೇ. 21 ರಿಂದ ಜುಲೈ 31ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ನಾಮನಿರ್ದೇಶನವು ಪೊರ್ಟಲ್ ನ ನಮೂನೆಯಲ್ಲಿ ನಿರ್ದಿಷ್ಟಪಡಿಸಿರುವಂತೆ ಸಂಬಂಧಿಸಿದ ಎಲ್ಲ ವಿವರಗಳನ್ನು ಒಳಗೊಂಡಿರಬೇಕು, ಹಾಗೂ ಗಮನಾರ್ಹ ಮತ್ತು ಸ್ಫೂರ್ತಿದಾಯಕ ಸಾಧನೆಗಳನ್ನು ನಿರೂಪಣಾ ರೂಪದಲ್ಲಿ ಸ್ಪಷ್ಟವಾಗಿ ಹೈಲೈಟ್ ಮಾಡಿರುವ ಸಾಧನೆಗಳಿಗೆ ಸಂಬಂಧಿಸಿದ ಪೋಷಕ ದಾಖಲೆಗಳನ್ನು ಸಹ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕು.
ಅರ್ಜಿ ಸಲ್ಲಿಸುವವರು “ದಿವ್ಯಾಂಗ ಜನ (ಅತ್ಯುತ್ತಮ ವಿಶೇಷಚೇತನ ವ್ಯಕ್ತಿ), “ಶ್ರೇಷ್ಠ ದಿವ್ಯಾಂಗ ಜನ” (ಉತ್ತಮ ವಿಶೇಷಚೇತನ ವ್ಯಕ್ತಿ) ಮತ್ತು “ಶ್ರೇಷ್ಠ ಸೃಜನಶೀಲ” ದಿವ್ಯಾಂಗ ಬಾಲ/ಬಾಲಿಕಾ(ಅತ್ಯುತ್ತಮ್ಮ ಸೃಜನ ಶೀಲ ವಿಶೇಷಚೇತನ ಮಗುಗೆ) ಯುಡಿಐಡಿ ಕಾರ್ಡ್/ವಿಕಲಾಂಗತೆಯ ಪ್ರಮಾಣಪತ್ರಗಳನ್ನು ಅಪ್ ಲೋಡ್ ಮಾಡುವುದು ಕಡ್ಡಾಯವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











