ವಿಜಯ ದರ್ಪಣ ನ್ಯೂಸ್…..
ವಾಸವಿ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ:
ಶಾಸಕ ರವಿಕುಮಾರ್

ಶಿಡ್ಲಘಟ್ಟ : ಒಳಚರಂಡಿ ಹಾಗೂ ನೀರು ಪೂರೈಸುವ ಪೈಪ್ ಅಳವಡಿಕೆ ಕಾರ್ಯ ತ್ವರಿತವಾಗಿ ಮಾಡಿ ವಾಸವಿ ರಸ್ತೆ ಕಾಮಗಾರಿಗೆ ವಿಳಂಬವಾಗಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಕಾಮಗಾರಿ ಜೂನ್ ಒಳಗೆ ಮುಗಿಸುವಂತೆ ಅಧಿಕಾರಿಗಳಿಗೆ ಶಾಸಕ
ಬಿ.ಎನ್.ರವಿಕುಮಾರ್ ಸೂಚನೆ ನೀಡಿದರು.
ನಗರದ ಪ್ರಮುಖ ರಸ್ತೆಯಾದ ಶ್ರೀವಾಸವಿ ರಸ್ತೆ ಕಾಮಗಾರಿ ಸ್ಥಳಕ್ಕೆ ಬೆಸ್ಕಾಂ, ಅಮೃತ್-2 ಯೋಜನೆ, ನಗರಸಭೆ ಸೇರಿ ಒಳಚರಂಡಿ ಕಾಮಗಾರಿ ಸೂಚನೆ ಅಧಿಕಾರಿಗಳನ್ನೊಳಗೊಂಡ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ಬೆಸ್ಕಾಂನಿಂದ ತೆರವುಗೊಳಿಸಿ ಅನಂತರ ಒಳಚರಂಡಿ ಕಾಮಗಾರಿ, ಅಮೃತ್-2 ಯೋಜನೆಯಡಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಸೇರಿ ರಸ್ತೆ ಕಾಮಗಾರಿ ಮುಂದಿನ ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು
ಎಂದು ಹೇಳಿದರು.
ಕಾಮಗಾರಿ ಪೂರ್ಣಗೊಳ್ಳುವವರೆಗೂ ಮಳೆ ನೀರು ರಸ್ತೆಯಲ್ಲಿ ನಿಲ್ಲದಂತೆ ಕ್ರಮವಹಿಸಿ, ವಾರ್ಡ್‌ನ ಜನರಿಗೆ 2 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್ ಕೆ.ಮಾಧವಿ , ಪೌರಾಯುಕ್ತ ಜಿ.ಅಮೃತಾ, ಬೆಸ್ಕಾಂ ಎಇಇ ಶಿವಶಂಕರ್, ಅಮೃತ್-2 ಯೋಜನೆಯ ಸಹಾಯಕ ಎಂಜಿನಿಯರ್ ಸಭಾ ಅಂಜುಂ, ಪಿಎಂಸಿ ತಂಡದ ಉದಯ್, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಮಹೇಶ್ ಬಾಬು, ನಗರ್ತ ಮಂಡಳಿಯ ನಾಗರಾಜ್,ರೂಪಸಿರಮೇಶ್ , ಎ.ಎಸ್.ರವಿ ಮತ್ತಿತರರು ಹಾಜರಿದ್ದರು.











