ವಿಜಯ ದರ್ಪಣ ನ್ಯೂಸ್…
ಮೇಲೂರಿನಲ್ಲಿ ವೈಭವದಿಂದ ವರ್ಧಂತಿ ಉತ್ಸವ ಹಾಗೂ ಗಿರಿಜಾಕಲ್ಯಾಣ ಮಹೋತ್ಸವ

ಶಿಡ್ಲಘಟ್ಟ : ತಾಲ್ಲೂಕಿನ ಮೇಲೂರು ಗ್ರಾಮದ
ಶ್ರೀಉಮಾಮಹೇಶ್ವರಸ್ವಾಮಿ, ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿ ದಿನಾಂಕ 21 ಗುರುವಾರದಿಂದ – 22-05-26 ಶುಕ್ರವಾರ ವರೆಗೆ
ಸ್ವಾಮಿಯ ವರ್ಧಂತಿ ಉತ್ಸವ ಹಾಗೂ ಗಿರಿಜಾಕಲ್ಯಾಣ ಮಹೋತ್ಸವ ವೈಭವದಿಂದ ನೆರವೇರಿತು.
ಗುರುವಾರ ಸಂಜೆ ಶ್ರೀ ಮಹಾಗಣಪತಿ ಪ್ರಾರ್ಥನೆ, ಮಹಾಗಣಪತಿ ಪೂಜೆ, ವಾಸ್ತು ಪ್ರಾರ್ಥನೆ, ಪಾಲ ಪ್ರಾರ್ಥನ, ಗಂಗಾಯಮುನಾ ಪೂಜೆ, ಮಹಾಕುಂಭ ಆಗಮನ, ವರುಣ ಪೂಜೆ, ಪುಣ್ಯಾಹ ಶುದ್ದಿ ಕರ್ಮ, ಋತ್ವಿಕವರ್ಣನೆ, ಕಲಶ ಪೂಜೆ, ಭೂದೇವತಾ ಪೂಜೆ, ಪ್ರಾರ್ಥನೆ, ಮರ್ತಿಕಾ, ಸಂಗ್ರಹಣ ದೇವ ನಾಂದಿ, ಕಂಕಣ ಧಾರಣೆ, ಮಧಪರ್ಕ ಶುದ್ದಿ ಹೋಮ ದ್ವಜಾರೋಹಣ ಮಹಾಗಣಪತಿ ಉಪನಿಷತ್ ಗವನ ವಿಶ್ವಕರ್ಮ ಪೂಜೆ, ವಿಧಾನ ರಾಕ್ಷೋಘ್ನ, ವಿಧಿ ಮಹಾ ಕುಂಸ್ಥಾಪನ ಸುದರ್ಶನಾದಿ ಅಸ್ತ್ರ ಮಂತ್ರ ಹವನ ರಕ್ಷಾ ಹವನ ಪ್ರಕಾರ ಗೋಪುರಾದಿ ಶುದ್ದಿ ಸಂಬಂದ ಹವನ ವಾಸ್ತು ದಿಕ್ಪಾಲಕ ಬಲಿ ,ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ಶುಕ್ರವಾರ ಬೆಳಿಗ್ಗೆ ಮಹಾಗಣಪತಿ ಪೂಜೆ, ದೇವತಾ ಪ್ರಾರ್ಥನೆ, ನವಗ್ರಹ ದೇವತಾ ಆರಾಧನೆ, ಪ್ರಾಣ ಪ್ರತಿಷ್ಠಾ ಹವನ ಮಹಾಗಣಪತಿ, ಶ್ರೀದೇವರ ಮೂಲ ಮಂತ್ರ ಹೋಮ ಮೂರ್ತಿಯಲ್ಲಿ ಪ್ರತಿಷ್ಠಾ ವಿಧಿ ನೇತ್ರೋನ್ ವಿಲನ ಶಕ್ತಿ ಹೋಮ, ತತ್ವ ಹೋಮ, ಚತುರ್ನವತಿ ಕಲಾ ಹೋಮ, ಫಲಪಂಚಾಮೃತ ಅಭಿಷೇಕ, ಬ್ರಹ್ಮ ಕಲಶಾಭಿಷೇಕ, ಶ್ರೀಗಿರಿಜಾಕಲ್ಯಾಣೋತ್ವವವು ನಡೆಯಿತು.

ಇದೇ ವೇಳೆ ಶ್ರೀಉಮಾಮಹೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನದಾನ ಕಾರ್ಯಕ್ರಮ ನಡೆಯಿತು,ಎರಡು ದಿನ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಮಹಿಳೆಯರು ಮನೆಗಳ ಮುಂದೆ ಸಾರಿಸಿ,ರಂಗೋಲಿ ಹಾಕಿ, ದೇವರಿಗೆ ಕಳಶ ಹೊತ್ತು ತಂದಿರುವುದು ವಿಶೇಷವಾಗಿತ್ತು ,ಪೂಜಾ ಕಾರ್ಯಗಳನ್ನು ಅರ್ಚಕರಾದ ಶ್ಯಾಮಸುಂದರ್ ಎಂ. ಭಗವಾತ್ ಗೋಕರ್ಣ ಹಾಗು ಅವರ ಸಂಗಡಿಗರಿಂದ ನಡೆದವು.
ಈ ಸಂದರ್ಭದಲ್ಲಿ ಆರ್.ಕೆ.ರಾಮಕೃಷ್ಣಪ್ಪ,
ಆರ್.ಎ.ಉಮೇಶ್,ಎಸ್.ಆರ್.ಶ್ರೀನಿವಾಸಮೂರ್ತಿ,
ಸುದರ್ಶನ್,ರೂಪೇಶ್,ಸುಧೀರ್,ರಮೇಶ್,ಎನ್.ಎಲ್.ಎನ್.ಮೂರ್ತಿ,ಗ್ರಾ.ಪಂ.ಕಾರ್ಯದರ್ಶಿ ನಾಗರಾಜ್, ಶಿವಕುಮಾರ್,ನಂಜುಂಡಮೂರ್ತಿ,
ಆರ್.ಬಿ.ಜಯದೇವ್, ಡ್ರಿಮರ್ಸ ಮಂಜುನಾಥ್,
ಬದ್ರಿನಾಥ್, ಮಲ್ಲಿಕಾರ್ಜುನ್,ಮುನೇಗೌಡ , ನಂದನ್ ,
ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಪಾಲ್ಗೊಂಡಿದ್ದರು.








