--Ads--

ತಪ್ಪು ಆಹಾರ ಪದ್ದತಿ ರೋಗಗಳಿಗೆ ಮೂಲ ಡಾ.ಆಂಜನಪ್ಪ

On: May 23, 2026 1:59 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ತಪ್ಪು ಆಹಾರ ಪದ್ದತಿ ರೋಗಗಳಿಗೆ ಮೂಲ ಡಾ.ಆಂಜನಪ್ಪ

ಶಿಡ್ಲಘಟ್ಟ : ತಪ್ಪು ಆಹಾರ ಪದ್ಧತಿ ಹಾಗೂ ಮಾನಸಿಕ ಒತ್ತಡವೇ ರೋಗಗಳಿಗೆ ಮೂಲ, ವಿದ್ಯಾರ್ಥಿಗಳು ಆರೋಗ್ಯದ ಕಡೆ ಗಮನಹರಿಸಿ, ವೈದ್ಯಕೀಯ ಕ್ಷೇತ್ರದತ್ತ ಹೆಚ್ಚಿನ ಆಸಕ್ತಿ ತೋರಬೇಕು ಅಂತರರಾಷ್ಟ್ರೀಯ ಖ್ಯಾತಿಯ ಶಸ್ತ್ರ ಚಿಕಿತ್ಸಕ ಹಾಗೂ ಐಎಂಎ ಸದಸ್ಯ ಡಾ.ಆಂಜನಪ್ಪ ತಿಳಿಸಿದರು.

ನಗರದ ಡಾಲ್ಪಿನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ PUC ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ‘ಪರಿಚಯಂ-2026’
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸಂಪತ್ತಿಗಿಂತ ಆರೋಗ್ಯ ಮುಖ್ಯ ಆರೋಗ್ಯದ ಕಡೆ ಹೆಚ್ಚು ಗಮನ ನೀಡಿ ಹಾಗು ವಿದ್ಯಾರ್ಥಿಗಳು ಶಿಕ್ಷಣಕ್ಕೆ ಒತ್ತು ನೀಡಿ ಆಸಕ್ತಿ ವಹಿಸಿ ಉನ್ನತ ಸ್ಥಾನ ಗಳಿಸಿ ಯಶಸ್ವಿಯಾಗಿ ಎಂದು ತಿಳಿ ಹೇಳಿದರು.

ಡಾಲ್ಫಿನ್ ಸಂಸ್ಥೆಯ ಅಧ್ಯಕ್ಷ ಎ.ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳಿಗೆ ಆಮಿಷ ಒಡ್ಡಿ ದಾರಿ ತಪ್ಪಿಸುವ ಶಿಕ್ಷಣ ಸಂಸ್ಥೆಗಳ ಬಗ್ಗೆ ಎಚ್ಚರವಿರಲಿ ನಾವು ಕಡಿಮೆ ಶುಲ್ಕದಲ್ಲಿ NEET, KCET ಮತ್ತು JEE ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಿದ್ದೇವೆ ಎಂದರು.

ಡಾಲ್ಫಿನ್ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್.ಅಶೋಕ್ ಮಾತನಾಡಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ಪುಸ್ತಕಗಳ ಓದಿನಲ್ಲಿ ಆಸಕ್ತಿ ಬೆಳೆಸಿಕೊಂಡರೆ ಮಾತ್ರ ಯಶಸ್ಸು ಸಾಧ್ಯ ಎಂದು
ಮನವಿ ಮಾಡಿದರು.

ಪ್ರಾಂಶುಪಾಲ ಪ್ರೊ.ಎನ್‌.ಶ್ರೀನಿವಾಸಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಕುಮಾರಿ ಸಿರಿಸಿಂಚನ, ಕೌಸರ್ ನಅಫ್ಘಾಫಾತೀಮ ಭವ್ಯ, ಕುಮಾರಿ ವರ್ಷ ಹಾಗು ಲಿಖಿತ ವೇದಿಕೆಯ ಕಾರ್ಯಕ್ರಮವನ್ನು
ನಿರ್ವಹಣೆ ಮಾಡಿದರು.

WhatsApp

Join Now

Telegram

Join Now

Instagram

Join Now