--Ads--

ಸಂಗೀತ ಎಂಬುದು ಮನುಷ್ಯನನ್ನು ವೈಚಾರಿಕತೆಯ ಕಡೆಗೆ ಕರೆದೊಯ್ಯುವ ಸಾಧನ : ಕೆ. ಸತೀಶ್ 

On: May 25, 2026 5:08 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಸಂಗೀತ ಎಂಬುದು ಮನುಷ್ಯನನ್ನು ವೈಚಾರಿಕತೆಯ ಕಡೆಗೆ ಕರೆದೊಯ್ಯುವ ಸಾಧನ : ಕೆ. ಸತೀಶ್ 

ಸಂಗೀತ ಎಂಬುದು ಮನಸ್ಸಿನ ಕ್ಷೇಶಗಳ ನಿವಾರಣೆಗೆ ಮದ್ದು, ವೈವಿಧ್ಯಮಯ ಗೀತೆಗಳ ಗಾಯನ ಮಾನಸಿಕಸುಖ, ನೆಮ್ಮದಿ ನೀಡಿ ಮನುಷ್ಯನನ್ನು ವೈಚಾರಿಕತೆಯ ಕಡೆಗೆ ಕರೆದೊಯ್ಯುವ ಸಾಧನ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ. ಸತೀಶ್ ಹೇಳಿದರು.

ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಕೆರೆಮೇಗಳದೊಡ್ಡಿಯ ಬಳಿ ಮುದ್ದುಶ್ರೀ ದಿಬ್ಬದ ಸಮುಚ್ಛಯದಲ್ಲಿ ನೂತನವಾಗಿ ಕೆ.ಎಸ್. ಮುದ್ದಪ್ಪ ಚಿಕ್ಕಮ್ಮ ರಂಗಮAದಿರದಲ್ಲಿ, ಬೆಂಗಳೂರು ದಕ್ಷಿಣ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪ್ರತೀ ತಿಂಗಳ `ತಿಂಗಳ ತಳಿರು’ ಶೀರ್ಷಿಕೆಯಲ್ಲಿ ಆರಂಭವಾಗಿರುವ ಸರಣಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ರಾಮನಗರದಂತಹ ನಗರ, ಬೆಂಗಳೂರಿನಂಥ ಮಹಾನಗರಗಳಲ್ಲಿ ಸದಾ ಒಂದಿಲ್ಲೊಂದು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಮೀಣ ಜನತೆ ಕಳೆದುಹೋಗುತ್ತಿರುವ ಈ ದಿನ ಮಾನಗಳಲ್ಲಿ ಪ್ರತೀ ಊರಿನಲ್ಲೂ ಈ ಬಗೆಯ ಕಲಾಚಟುವಟಿಕೆಗಳು ನಡೆಯುತ್ತಿರಬೇಕು. ಜನರ ಆಸಕ್ತಿಯನ್ನು ಪುನರುಜ್ಜೀವನಗೊಳಿಸಲು ಅದು ಸಹಕಾರಿಯಾಗಬಲ್ಲದು ಎಂದರು.

ಕಾರ್ಯಕ್ರಮ ಆಯೋಜಕ ಟ್ರಸ್ಟ್ನ ಕಾರ್ಯದರ್ಶಿ ಡಾ. ಎಂ. ಬೈರೇಗೌಡ ಮಾತನಾಡಿ, ಮಾನವ ಜಗತ್ತಿನ ಇತಿಹಾಸದಲ್ಲಿ ಸಂಗೀತಕ್ಕೆ ಮನಸೋಲದವರು ಯಾರೂ ಇಲ್ಲ. ಅದರ ಮಾಧುರ್ಯದಿಂದ ರೋಗಗಳು ದೂರಾಗಬಲ್ಲವು; ಸಂಗೀತದ ಸಂಸರ್ಗದಿಂದ ಮೋಡ ಮಳೆಸುರಿಸಿದ ಪ್ರಕರಣಗಳೂ ಇಲ್ಲಿ ದಾಖಲಾಗಿವೆ. ಇಂಥ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿರುವ ಎಲ್ಲ ಕಲಾವಿದರೂ ಸಮಾಜಕ್ಕೆ ಬಹುಮುಖ್ಯ ಎಂದರು. ಗಂಧರ್ವ ಕಂಠದ ಕಲಾವಿದರಿಗೆ ಪೂರಕ ವೇದಿಕೆ ಕಲ್ಪಸಿಕೊಡುವ ಮತ್ತು ಗ್ರಾಮೀಣ ಪರಿಸರದಲ್ಲಿ ಸಾಂಸ್ಕೃತಿಕ ಜಾಗೃತಿ ಮೂಡಿಸುವ ಈ ಕೆಲಸದಲ್ಲಿ ನಾವು ತೊಡಗಿಸಿಕೊಂಡಿದ್ದೇವೆ. ಇಂಥ ಕಾರ್ಯಕ್ರಮಗಳ ಮೂಲಕವೇ ನಾಡು-ನುಡಿ, ನೆಲ-ಜಲಗಳ ಬಗ್ಗೆ ಜಾಗೃತಿ ಮೂಡಲು ಸಾಧ್ಯ ಎಂದರು.

ಇಂದಿನ ಕಾರ್ಯಕ್ರಮ ನಡೆಸಿಕೊಡಲು ಆಗಮಿಸಿದ ತಂಡದ ನಾಯಕಿ ವಿದುಷಿ ವಿನುತಾ ಬೂದಿಹಾಲ್ ಜನಪದ ಗೀತೆಗಳು, ಭಾವಗೀತೆಗಳು, ಅನುಭಾವ ಗೀತೆಗಳು ಜೀವನದ ಕುಲುಮೆಯಲ್ಲಿ ಬೆಂದು ಹದಗೊಂಡ ರಸಪಾಕ. ಅದನ್ನು ಒಂದು ಸಮತೋಲನ ನೆಲೆಯಲ್ಲಿ ಸಹೃದಯರಿಗೆ ಹಂಚುವ ವಾಹಕಿಯರಾಗಿ ನಮ್ಮ ಕಂಠದ ಮೂಲಕ ಉಣಬಡಿಸುವ ಕೆಲಸವನ್ನಷ್ಟೇ ಮಾಡುತ್ತೇವೆ. ಅಂತಹ ಕಾರ್ಯಕ್ಕೆ ಸಾಕ್ಷಿಯಾಗಿರುವ ಈ ತಿಂಗಳ ತಳಿರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನಡೆಯಲಿ ಎಂದು ಆಶಿಸಿದರು.

ತಿಂಗಳ ತಳಿರು ಸರಣಿಯ ಮೊದಲ ಕಾರ್ಯಕ್ರಮದ ಪಕ್ಕವಾದ್ಯದಲ್ಲಿ ಕೀಬೋರ್ಡ್ ವಾದಕ ಪುಣ್ಯೇಶ್, ತಬಲ ವಾದನದಲ್ಲಿ ದೇವರಾಜ್ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವಿನುತಾ ಬೂದಿಹಾಲ್ ಅವರನ್ನು ಸನ್ಮಾನಿಸಲಾಯಿತು. ದಿವ್ಯ ಎಂ ಬಸವರಾಜು, ಸಂಧ್ಯಾ, ಲತಾ ಮತ್ತು ಶಶಿಕಲಾ ತಮ್ಮ ಕಂಠಶ್ರೀಯಿAದ ಭಾವಗೀತೆಗಳು, ಜನಪದ ಗೀತೆಗಳನ್ನು ಹಾಡಿ ರಂಚಿಸಿದರು.

WhatsApp

Join Now

Telegram

Join Now

Instagram

Join Now