ವಿಜಯ ದರ್ಪಣ ನ್ಯೂಸ್….
ರಸಗೊಬ್ಬರ ಖರೀದಿಗೆ ಎಫ್ ಐ ಡಿ ಕಡ್ಡಾಯ ವಿರೋಧಿಸಿ ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟನೆ

ತಾಂಡವಪುರ ಮೇ 26: ಮೈಸೂರು ಜಿಲ್ಲ ಕಾಡಾ ಕಚೇರಿಯ ಮುಖ್ಯದ್ವಾರದ ಬಳಿ ಜಮಾಯಿಸಿದ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಪದಾಧಿಕಾರಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ತಕ್ಷಣ ರಸಗೊಬ್ಬರ ಖರೀದಿಗೆ ಎಫ್ ಐಡಿ ಕಡ್ಡಾಯ ಕೈಬಿಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು
ಕಾಡಾ ಕಚೇರಿ ಆವರಣದಲ್ಲಿ ಇರುವ ಜಂಟಿ ಕೃಷಿ ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟಿಸಿ ಹಕ್ಕು ಒತ್ತಾಯ ಪತ್ರ ಸಲ್ಲಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ ಕಬ್ಬು ಬೆಳೆಗಾರ ಸಂಘದ ರಾಜ್ಯ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡು ರೈತರನ್ನು ಕೃಷಿಯಿಂದ ಒಕ್ಕಲು ಎಬ್ಬಿಸುವ ಕೆಲಸ ಮಾಡುತ್ತೇವೆ.
ರೈತರ ಕೃಷಿ ಆದಾಯವನ್ನು 2026 ಕ್ಕೆ ದ್ವಿಗುಣ ಗೊಳಿಸುತ್ತೇವೆ ಎಂದು ನರೇಂದ್ರ ಮೋದಿ ಪ್ರಚಾರ ಮಾಡಿ ಕೃಷಿ ಆದಾಯ ದ್ವಿಗುಣಗೊಳ್ಳದೆ ಕೃಷಿಗೆ ಬಳಸುವ ರಸಗೊಬ್ಬರದ ಬೆಲೆ ಏರಿಕೆಯಾಗಿದೆ. ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಸಂಘರ್ಷದಿಂದ ವಿದೇಶದಿಂದ ಆಮದು ಆಗುತ್ತಿದ್ದಂತಹ ರಸ ಗೊಬ್ಬರದ ಕಚ್ಚಾ ವಸ್ತುಗಳು ತೊಂದರೆಯಿಂದ ರಾಜ್ಯದಲ್ಲಿ ಎರಡು ಕೋಟಿ ಟನ್ ನಷ್ಟು ಯೂರಿಯಾ ರೈತರಿಗೆ ಬೇಕಾಗಿದೆ ಆದರೆ ಶೇ.50 ರಸಗೊಬ್ಬರ ಇದೆ ರೈತರಿಗೆ ಶೇ.50 ರಸ ಗೊಬ್ಬರದ ಕೊರತೆ ಆಗುವ ಸಾಧ್ಯತೆ ಇದೆ.
ಎಫ್ ಐ ಡಿ ಇಲ್ಲದೆ ಬಗರು ಹುಕುಂ, ಇನಾಮತಿ ಜಮೀನ್, ಗುತ್ತಿಗೆ ಮಾಡುವ ರೈತರ ಜಮೀನು, ರಾಜ್ಯದಲ್ಲಿ ಸುಮಾರು ಶೇಕಡ ಇನ್ನು ಹತ್ತು ಹದಿನೈದರಷ್ಟು ಪೌತಿ ಖಾತೆ ಆಗಿರುವುದಿಲ್ಲ. ಇವರಿಗೆ ರಸಗೊಬ್ಬರ ಕೊಡುವವರು ಯಾರು ರಾಜ್ಯ ಸರ್ಕಾರ ಪರ್ಯಾಯ ಮಾರ್ಗವನ್ನು ಕಂಡುಹಿಡಿದು ರೈತರಿಗೆ ರಸ ಗೊಬ್ಬರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು
ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆ ಬಿತ್ತನೆ ಮಾಡಲು ನೀರಾವರಿ ವ್ಯವಸಾಯ ಮಾಡಲು. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ನರೇಂದ್ರ ಮೋದಿ ಸಾವಯವ ಕೃಷಿ ಮಾಡಲು ಕರೆ ನೀಡಿದ್ದಾರೆ. ದಿಡೀರ್ ಸಾವಯವ ಕೃಷಿ ಮಾಡಲು ಸಾಧ್ಯವಾಗುವುದಿಲ್ಲ.
ಅದಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಶೇಕಡ 50ರಷ್ಟು ಪ್ರೋತ್ಸಾಹ ನೀಡಲು ಒತ್ತಾಯ.ಕೃಷಿ ಯಂತ್ರೋಪಕರಣಗಳಿಗೆ ಡೀಸೆಲ್ ಮತ್ತು ಪೆಟ್ರೋಲ್ ಅನ್ನು ಪೆಟ್ರೋಲ್ ಪಂಪ್ ಗಳಲ್ಲಿ ನೀಡುತ್ತಿಲ್ಲ. ಕಾರಣ ಕೃಷಿ ಯಂತ್ರೋಪಕರಣಗಳಾದ ಟ್ಯಾಕ್ಟರ್, ಟಿಲ್ಲರ್, ಬ್ರಷ್ ಕಟರ್, ಕಳೆ ತೆಗೆಯುವ ಯಂತ್ರ ಇವುಗಳನ್ನು ರೈತರು ಪೆಟ್ರೋಲ್ ಪಂಪ ಹತ್ತಿರ ತೆಗೆದುಕೊಂಡು ಬಂದು ಪೆಟ್ರೋಲ್ ಡೀಸೆಲ್ ಖರೀದಿ ಮಾಡಲಾಗುತ್ತದೆಯೇ ಆದ್ದರಿಂದ ಪೆಟ್ರೋಲ್ ಪಂಪ್‌ಗಳಲ್ಲಿ ವಿಧಿಸಿರುವ ನಿರ್ಬಂಧಗಳನ್ನು ಸಡಿಲ ಗೊಳಿಸಿ ಯಂತ್ರೋಪಕರಣಗಳಿಗೆ ಬೇಕಾಗುವ ಡೀಸೆಲ್ ಪೆಟ್ರೋಲ್ ಕ್ಯಾನುಗಳ ಮುಖಾಂತರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯ ಖಜಾಂಚಿ ಕೆರೆಹುಂಡಿ ರಾಜಣ್ಣ, ಜಿಲ್ಲಾಧ್ಯಕ್ಷ ವಳಗೆರೆ ಗಣೇಶ್, ಎಚ್ ಗುಂಡ್ಲಾ ಚಿದಂಬರ, ಮಲಿಯೂರು ಮಹೇಂದ್ರ, ಗೌಡಿಕೆ, ಸೋಮಣ್ಣ, ಮುದ್ದಳ್ಳಿ ಮಧು, ಸಿದ್ದರಾಮಪ್ಪ, ಅಂಡುವಿನಹಳ್ಳಿ ಜಗದೀಶ್, ದೇವಣ್ಣ, ಮಹೇಶ್, ಗೌಡಿಕೆ ಶಿವಣ್ಣ, ದೇವಿರಮ್ಮನಹಳ್ಳಿ ಹುಂಡಿ ರೇವಣ್ಣ, ಸಂತು, ಮಹೇಶ್ ಮುಂತಾದವರು ಹಾಜರಿದ್ದರು










